ಅಪ್ಪಾ ಪಬ್ಲಿಕ್‌ ಶಾಲೆಯ ಮಕ್ಕಳಿಂದ ದಾಖಲೆ ಫಲಿತಾಂಶ

| Published : May 16 2025, 02:09 AM IST

ಅಪ್ಪಾ ಪಬ್ಲಿಕ್‌ ಶಾಲೆಯ ಮಕ್ಕಳಿಂದ ದಾಖಲೆ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿರುವ ಸಿಬಿಎಸ್‌ಇ ಪಠ್ಯಕ್ರಮದ ಅಪ್ಪಾ ಪಬ್ಲಿಕ್‌ ಶಾಲೆಯ ಮಕ್ಕಳು 2024- 25 ನೇ ಸಾಲಿನ ಫಲಿತಾಂಶದಲ್ಲಿ ಅಮೋಘ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಇದೇ ಶಾಲೆಯ ಜಾಣ ವಿದ್ಯಾರ್ಥಿ ಹರ್ಷವರ್ಧನ ಕಾಳಗಿ ಈತ ಶೇ. 99. 2 ಅಂಕ ಪಡೆದು ಶಾಲೆಯ ಕೀರ್ತಿ ರಾಜ್ಯ ಮಟ್ಟದಲ್ಲಿ ಪಸರಿಸುವಂತೆ ಮಾಡಿದ್ದಾನೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿರುವ ಸಿಬಿಎಸ್‌ಇ ಪಠ್ಯಕ್ರಮದ ಅಪ್ಪಾ ಪಬ್ಲಿಕ್‌ ಶಾಲೆಯ ಮಕ್ಕಳು 2024- 25 ನೇ ಸಾಲಿನ ಫಲಿತಾಂಶದಲ್ಲಿ ಅಮೋಘ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಇದೇ ಶಾಲೆಯ ಜಾಣ ವಿದ್ಯಾರ್ಥಿ ಹರ್ಷವರ್ಧನ ಕಾಳಗಿ ಈತ ಶೇ. 99. 2 ಅಂಕ ಪಡೆದು ಶಾಲೆಯ ಕೀರ್ತಿ ರಾಜ್ಯ ಮಟ್ಟದಲ್ಲಿ ಪಸರಿಸುವಂತೆ ಮಾಡಿದ್ದಾನೆ.

ಇದಲ್ಲದೆ ಹರ್ಷವರ್ಧನ ಈತ ಪಡೆದ ಅಂಕಗಳಿಂದಾಗಿ ಈತನಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ರ್‍ಯಾಂಕ್‌ ದೊರಕಿದೆ. ಗಣಿತ, ವಿಜ್ಞಾನ ಹಾಗೂ ಕನ್ನಡದಲ್ಲಿ ಈತ ನೂರಕ್ಕೆ ನೂರು ಅಂಕ ಪಡೆದು ಸಾಧನೆಗೆ ಹೊಸರೂಪ ನೀಡಿದ್ದಾನೆ.

ಇದಲ್ಲದೆ ಇದೇ ಶಾಲೆಯ ವಿದ್ಯಾರ್ಥಿನಿ ಪ್ರತಿಕ್ಷಾ ಶಾನುಭೋಗ ಶೇ. 94. 8, ಕೃತಜ್ಞಾ ಮಳ್ಳಿ ಶೇ. 94. 4 ರಷ್ಟು ಅಂಕ ಪಡೆದು ಶಾಲೆಗೆ ಕ್ರಮವಾಗಿ 2 ನೇ ಹಾಗೂ 3 ನೇ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.

ಗಣಿತದಲ್ಲಿ ಹರ್ಷವರ್ಧನ ಕಾಳಗಿ, ವಿಜ್ಞಾನದಲ್ಲಿ ಹರ್ಷವರ್ಧನ, ಸಂಕೇತ, ಅಣವೀರಯ್ಯ, ಸಮಾಜ ವಿಜ್ಞಾನದಲ್ಲಿ ಧೃತಿ ಕೋತ್ಲಿ, ಜವೇರಿಯಾ ಅಬ್ದುಲ್‌ ಹಸನ್‌, ಕನ್ನಡದಲ್ಲಿ ಹರ್ಷವರ್ಧನ ಕಾಳಗಿ, ಪ್ರತೀಕ ಮಠ, ಮೋಹಿತ್‌ ಪಾಟೀಲ್‌ ಇವರೆಲ್ಲರೂ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ಅಪ್ಪಾ ವಾಣಿಜ್ಯ ವಿಭಾಗದಲ್ಲಿಯೂ ಗ್ರೇಡ್‌ 12 ನೇ ತರಗತಿ ಫಲಿತಾಂಶ ಗಮನ ಸೆಳೆಯುವಂತೆ ದಾಖಲಾಗಿದೆ. ಇಲ್ಲಿ ಪರೀಕ್ಷೆ ಬರೆದ ಎಲ್ಲರೂ ಪಾಸಾಗಿದ್ದಾರೆ. ಈ ಪೈಕಿ ಮಾಸ್ಟರ್‌ ಮೊಹ್ಮದ್‌ ಮುರ್ತುಝಾ ಇವರು ಶೇ. 97 ರಷ್ಟು ಪಡೆದು ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅವನೀಶ ಶೀಲವಿಂತ ಶೇ. 87. 6 ಅಂಕ ಪಡೆದು ಮೊದಲಿಗನಾಗಿ ಹೊರಹೊಮ್ಮಿದ್ದಾನೆ.

ಈ ಶಾಲೆಯಿಂದ ಪರೀಕ್ಷೆ ಬರೆದ 298 ಮಕ್ಕಳ ಪೈಕಿ 59 ಮಕ್ಕಳು ಉತ್ಕೃಷ್ಟ, 179 ಮೊದಲ ದರ್ಜೆ, 36, 2 ನೇ ದರ್ಜೆ, 24 ಮಕ್ಕಳು ಪಾಸ್‌ ಆಗಿದ್ದಾರೆ,

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ, ಚೇರ್‌ಪರ್ಸ್‌ನ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಇವರು ಅಪ್ಪಾ ಪಬ್ಲಿಕ್‌ ಶಾಲೆಯ ಮಕ್ಕಳ ಫಲಿತಾಂಶಕ್ಕೆ ಸಂತಸ ವ್ಯಕ್ತಪಡಿಸಿದ್ದು ಮಕಕಳ ಮುಂದಿನ ಶೈಕ್ಷಣಿಕ ಪಯಣಕ್ಕೆ ಶುಭ ಕೋರಿದ್ದಾರೆ.