ಗ್ರಾಮೀಣರ ಸಮಸ್ಯೆ ಪರಿಹಸಲು ಕ್ರಮ ಕೈಗೊಳ್ಳಿ

| Published : May 16 2025, 02:09 AM IST

ಸಾರಾಂಶ

ಬಸ್ಸಿನ ವ್ಯವಸ್ಥೆ ಸುಗಮಗೊಳಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಈಡೇರಿಸಿ ಕೊಡುವ ಬಗ್ಗೆ ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಅವಲತ್ತುಕೊಂಡ ಸಮಸ್ಯೆಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಅವರು ಅಧಿಕಾರಿಗಳಿಗೆ ಈ ಬಗ್ಗೆ ನಿಗಾ ಇರಿಸಿ ಪರಿಹರಿಸುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮ ಊರಿಗೆ ನಮ್ಮ ಶಾಸಕರು ಅಭಿಯಾನದ ಮೂಲಕ ಗ್ರಾಮಸ್ಥರ ಕಷ್ಟ ಆಲಿಸುವ ಕಾರ್ಯಕ್ರಮವನ್ನು ಗುರುವಾರ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಡಚಲಹಳ್ಳಿ, ಜರಬಂಡಹಳ್ಳಿ, ನುಲುಗುಮ್ಮನಹಳ್ಳಿ ಗ್ರಾಮಗಳಲ್ಲಿ ಶಾಸಕ ಪ್ರದೀಪ್ಈಶ್ವರ್ ಸಮ್ಮುಖದಲ್ಲಿ ನಡೆಯಿತು.

ತಾಲೂಕು ಆಡಳಿತ ವ್ಯವಸ್ಥೆಯ 36 ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸ್ಥಳದಲ್ಲಿ ಬಂದ ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸಮಸ್ಯೆ ಪರಿಹರಿಸುವಂತೆ ಶಾಸಕರು ಸೂಚಿಸಿದರು.

ಶಾಸಕರಿಗೆ ಆರತಿ ಬೆಳಗಿ ಸ್ವಾಗತ

ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಡಚಲಹಳ್ಳಿ ,ಜರಬಂಡಹಳ್ಳಿ, ನುಲುಗುಮ್ಮನಹಳ್ಳಿ ಗ್ರಾಮಗಳಲ್ಲಿ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಅಡಿಯಲ್ಲಿ ಶಾಸಕರು ತಮ್ಮ ಗ್ರಾಮಕ್ಕೆ ಬಂದೇ ಬರುತ್ತಾರೆ ಎಂಬುದನ್ನು ಮೊದಲೇ ಅರಿತಿದ್ದ ಗ್ರಾಮಸ್ಥರು ಊರಿನ ಪ್ರವೇಶ ದ್ವಾರದಲ್ಲಿಯೇ ಅವರನ್ನು ಸ್ವಾಗತಿಸಿ ಪಟಾಕಿಗಳನ್ನು ಸಿಡಿಸಿ,ಆರತಿ ನೀಡಿ ತಿಲಕ ಹಚ್ಚಿ ಅದ್ದೂರಿ ಸ್ವಾಗತ ಕೋರಿದರು.

ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಸಮಸ್ಯೆ, ಸ್ಮಶಾನಗಳ ಒತ್ತುವರಿ ಜಾಗ ತೆರುವು, ಚರಂಡಿ, ವಿದ್ಯತ್ ದೀಪ, ವಸತಿ,ನಿವೇಶನ, ಖಾತೆ ಮುಂತಾದ ಸಮಸ್ಯೆಗಳನ್ನು ಶಾಸಕರಲ್ಲಿ ಗ್ರಾಮೀಣ ಜನತೆ ತೋಡಿಕೊಂಡರು.

ಬಸ್‌ ವ್ಯವಸ್ಥೆ ಸುಮಗಕ್ಕೆ ಮನವಿ

ಬಸ್ಸಿನ ವ್ಯವಸ್ಥೆ ಸುಗಮಗೊಳಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಈಡೇರಿಸಿ ಕೊಡುವ ಬಗ್ಗೆ ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಅವಲತ್ತುಕೊಂಡ ಸಮಸ್ಯೆಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಅವರು ಅಧಿಕಾರಿಗಳಿಗೆ ಈ ಬಗ್ಗೆ ನಿಗಾ ಇರಿಸಿ ಪರಿಹರಿಸುವಂತೆ ಸೂಚಿಸಿದರು. ಗ್ರಾಮದ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸಲು ಶಾಸಕ ಪ್ರದೀಪ್ ಈಶ್ವರ್ ಗ್ರಾಮಗಳ ಹಲವರ ಮುಖಂಡರ ಸಲಹೆ ಸೂಚನೆಗಳನ್ನು ಪಡೆದರು.

ಈ ವೇಳೆ ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ನಗರಾಭಿವೃದ್ದಿ ಪ್ರಾಧಿಖಾರದ ಸದಸ್ಯರಾದ ಪೆದ್ದಣ್ಣ, ಹಮೀಮ್, ಮುಖಂಡರಾದ ಅರವಿಂದ್, ಜಿ.ಉಮೇಶ್, ಲಕ್ಷ್ಮೀನಾರಾಯಣ, ರಮೇಶ್ ಬಾಬು, ರಾಜಣ್ಣ,ಡ್ಯಾನ್ಸ್ ಶ್ರೀನಿವಾಸ್, ವಿನಯ್ ಬಂಗಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಬಾಕ್ಸ್‌........................

ಶಾಸಕರಿಗೆ ಪೊಲೀಸ್‌ ಬೆಂಗಾವಲು

ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳಿ ತಾಲೂಕಿನ ಕಾರಹಳ್ಳಿಯ ಖಾಸಗಿ ತೋಟದ ಮನೆಯಲ್ಲಿ ಶಾಸಕ ಪ್ರದೀಪ್ಈಶ್ವರ್ ವಿರುದ್ದ ಸ್ವಪಕ್ಷೀಯರೆ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಶಾಸಕರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಶಾಸಕರು ಪ್ರಯಾಣಿಸಿದ ಎಲ್ಲಾ ಗ್ರಾಮಗಳಲ್ಲಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ನಾಲ್ವರು ಪಿಎಸ್ಐಗಳು ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರ ಭದ್ರತೆ ಕಲ್ಪಿಸಲಾಗಿತ್ತು.

ಆದರೆ ಈ ವರೆಗೂ ಶಾಸಕರು ಬೇಟಿ ನೀಡಿದ್ದ ಗ್ರಾಮಗಳಿಗೆ ಒರ್ವ ಸಬ್ ಇನ್ಸ್ ಪೆಕ್ಟರ್ ಮತ್ತು ನಾಲ್ಕಾರು ಪೋಲಿಸರು ಬಿಟ್ಟರೆ ಯಾರು ಇರುತ್ತಿರಲಿಲ್ಲಾ. ಇಂದು ಮಾತ್ರ ನೂರಕ್ಕೂ ಹೆಚ್ಚು ಪೋಲಿಸರಿಂದ ಬಿಗಿ ಭದ್ರತೆ ಇದ್ದಿದು ವಿಶೇಷ ವಾಗಿತ್ತು. ಶಾಸಕ ಪ್ರದೀಪ್ಈಶ್ವರ್ ಅವರನ್ನು ಸುದ್ದಿಗಾರರು ಮಾತನಾಡಿಸಲು ಯತ್ನಿಸಿದಾಗ ಮುಂದಿನ ಗ್ರಾಮದಲ್ಲಿ ಮಾತನಾಡುತ್ತೇನೆ ಎಂದು ಮಾತನಾಡದೇ ನುಣಚಿ ಕೊಂಡರು.