ಪೌರಾಯುಕ್ತ ಜಿ.ಎನ್.ಛಲಪತಿ ನೇತೃತ್ವದಲ್ಲಿ ಅಕ್ರಮ ಶೆಡ್ ಗಳ ತೆರವು

| Published : Nov 20 2025, 12:00 AM IST

ಸಾರಾಂಶ

ಗಾಂಧಿನಗರದ ವಾರ್ಡ್‌ ನಂ.16 ರ ಊಲವಾಡಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್‌ಗಳನ್ನು ಹಾಗೂ ಚರಂಡಿಗಳ ಮೇಲೆ ನಿರ್ಮಾಣ ಮಾಡಿಕೊಂಡಿದ್ದ ಶೌಚಾಲಯ, ಮನೆಯ ಕಾಂಪೌಂಡ್‌ಗಳು, ಪೆಟ್ಟಿಗೆ ಅಂಗಡಿಗಳನ್ನು ಇತ್ಯಾದಿಗಳನ್ನು ನಿರ್ಮಾಣ ಮಾಡಿಕೊಂಡಿದ್ದರು.

ಚಿಂತಾಮಣಿ: ಗಾಂಧಿನಗರದ ವಾರ್ಡ್‌ ನಂ.16 ರ ಊಲವಾಡಿ ರಸ್ತೆಯ ಎರಡು ಬದಿಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ಖುದ್ದು ನಗರಸಭೆಯ ಪೌರಾಯುಕ್ತ ಜಿ.ಎನ್.ಛಲಪತಿ ನೇತೃತ್ವದಲ್ಲಿ ಜೆಸಿಬಿಗಳ ಸಹಾಯದಿಂದ ತೆರವುಗೊಳಿಸಲಾಯಿತು. ಈ ವೇಳೆ ಪೌರಾಯುಕ್ತರು ಮಾತನಾಡಿ, ಲಾಟರಿ ಮೂಲಕ ಪ್ರತಿ ವಾರಕ್ಕೆ ಒಂದು ವಾರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಹಿಂದೆ ಕನ್ನಂಪಲ್ಲಿ, ಇಂದು ಗಾಂಧಿನಗರವನ್ನು ಆಯ್ಕೆ ಮಾಡಿಕೊಂಡಿದ್ದು ಅದರಂತೆ ಲಾಟರಿ ಮೂಲಕ ಆಯ್ಕೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಅಕ್ರಮವಾಗಿ ನಿರ್ಮಾಣಗೊಂಡ ಶೆಡ್, ಕಟ್ಟಡಗಳನ್ನು ತೆರವುಗೊಳಿಸುವುದು ಹಾಗೂ ಯುಜಿಡಿ, ಕುಡಿಯುವ ನೀರಿನ ಸಮಸ್ಯೆ, ಕಂದಾಯ ಸೇರಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತಿದೆಯೆಂದರು.

ಗಾಂಧಿನಗರದ ವಾರ್ಡ್‌ ನಂ.16 ರ ಊಲವಾಡಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್‌ಗಳನ್ನು ಹಾಗೂ ಚರಂಡಿಗಳ ಮೇಲೆ ನಿರ್ಮಾಣ ಮಾಡಿಕೊಂಡಿದ್ದ ಶೌಚಾಲಯ, ಮನೆಯ ಕಾಂಪೌಂಡ್‌ಗಳು, ಪೆಟ್ಟಿಗೆ ಅಂಗಡಿಗಳನ್ನು ಇತ್ಯಾದಿಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಈ ಹಿಂದೆ ೩ ತಿಂಗಳ ಕಾಲಾವಕಾಶ ನೀಡಿದ್ದು, ತೆರವುಗೊಳಿಸದ ಹಿನ್ನೆಲೆ ಖುದ್ದು ನಗರಸಭೆ ಸಿಬ್ಬಂದಿಯೊಂದಿಗೆ ಬಂದು ತೆರವುಗೊಳಿಸಲಾಯಿತು ಎಂದರು.