ಪರಿಶಿಷ್ಟರಿಗೆ ಮೀಸಲು: ದಸಂಸಕ ಹೋರಾಟದ ಫಲ

| Published : Mar 14 2025, 01:31 AM IST

ಪರಿಶಿಷ್ಟರಿಗೆ ಮೀಸಲು: ದಸಂಸಕ ಹೋರಾಟದ ಫಲ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ 2 ಕೋಟಿವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆ ಹೋರಾಟದ ಫಲವಾಗಿದೆ ಎಂದು ಡಿಎಸ್‌ಎಸ್‌ಕೆ ರಾಜ್ಯ ಸಂಚಾಲಕ ಆಯುಷ್ಮಾನ್ ಅಣ್ಣಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೊಸಕೋಟೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ 2 ಕೋಟಿವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆ ಹೋರಾಟದ ಫಲವಾಗಿದೆ ಎಂದು ಡಿಎಸ್‌ಎಸ್‌ಕೆ ರಾಜ್ಯ ಸಂಚಾಲಕ ಆಯುಷ್ಮಾನ್ ಅಣ್ಣಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗುತ್ತಿಗೆಯಲ್ಲಿ ಸರಕು, ಸೇವೆ, ಸಂಗ್ರಹಣೆ, ಹೊರಗುತ್ತಿಗೆ ಪೂರೈಕೆಯಲ್ಲಿ ಪರಿಶಿಷ್ಟ ಸಮುದಾಯದವರಿಗೆ ಶೇ. 24.10ರಷ್ಟು ಮೀಸಲಾತಿ ನೀಡಲು ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವನ್ನು 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಬೇಕು'''''''' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ೩೨ ಸಚಿವರಿಗೂ ಡಿಎಸ್‌ಎಸ್‌ಕೆ ಸಮಿತಿ ಪದಾಧಿಕಾರಿಗಳು ಎರಡು ತಿಂಗಳಿನಿAದ ಮನವಿಯನ್ನು ಸಲ್ಲಿಸಿದ್ದೆವು. ಅದರ ಫಲವಾಗಿ ನಮ್ಮ ಮನವಿಯನ್ನು ಪುರಸ್ಕರಿಸಿ ಈ ಭಾರಿಯ ಬಜೆಟ್‌ನಲ್ಲಿ ಸುಮಾರು 2 ಕೋಟಿವರೆಗಿನ ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಆರ್ಥಿಕ ತಜ್ಞರಾಗಿ ಬಡವರ, ಹಿಂದುಳಿದವರ, ಶೋಷಿತರ, ದಲಿತರ ಪರವಾದ ಯೋಜನೆಗಳೊಂದಿಗೆ ತಮ್ಮ 16ನೇ ಬಜೆಟ್ ಮಂಡಿಸಿ ಮತ್ತೊಮ್ಮೆ ಅಹಿಂದ ನಾಯಕನಾಗಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ಬಾಕ್ಸ್ ...............

ಕನ್ನಡಪ್ರಭ ವರದಿಗಳ ಸಹಕಾರಕ್ಕೆ ಕೃತಜ್ಞತೆ

ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆ ಹೋರಾಟದ ವರದಿಗಳನ್ನು ನಿರಂತರವಾಗಿ ಪ್ರಕಟಿಸುವ ಮೂಲಕ ನಮ್ಮ ಹೋರಾಟಕ್ಕೆ ಕನ್ನಡಪ್ರಭ ಪತ್ರಿಕೆಯ ವರದಿಗಳು ಸಹ ಪರಿಣಾಮಕಾರಿಯಾಗಿ ಸಹಕಾರಿಯಾಗಿದೆ. ಆದ್ದರಿಂದ ಕನ್ನಡಪ್ರಭ ಪತ್ರಿಕೆಗೂ ಡಿಎಸ್‌ಎಸ್‌ಕೆ ರಾಜ್ಯ ಸಂಚಾಲಕ ಆಯುಷ್ಮಾನ್ ಅಣ್ಣಯ್ಯ ಅಭಿನಂದಿಸಿದರು.

ಫೋಟೋ: 12 ಎಸ್‌ಎಲ್‌ಬಿ 2

ಬಜೆಟ್‌ನಲ್ಲಿ ಪರಿಶಿಷ್ಟರಿಗೆ ಮೀಸಲು ಘೋಷಣೆಗಾಗಿ ಒತ್ತಯಿಸಿ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವರದಿ.