ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಪಟ್ಟಣದಿಂದ ತಿಪಟೂರಿಗೆ ಹೋಗುವಂತಹ ಈ ಶೆಟ್ಟಿಕೆರೆ ರಸ್ತೆ ಹಾಳಾಗಿದ್ದನ್ನು ಗಮನಿಸಿ ೫ ಕೋಟಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ತಾಲೂಕಿನ ಶೆಟಿಕೆರೆಯಲ್ಲಿ ಭಾನುವಾರ ೫.೩೦ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆ ನೆರೆವೆರಿಸಿ ಮಾತನಾಡಿದ ಅವರು ಆಡಳಿತದಲ್ಲಿರುವ ಸರ್ಕಾರ ತಮ್ಮ ಪಕ್ಷದವರಿಗೆ ೫೦ ಕೋಟಿ ಅನುದಾನ ನೀಡಿದರೆ ವಿರೋಧ ಪಕ್ಷದ ಶಾಸಕರಿಗೆ ೨೫ಕೋಟಿ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಿದೆ. ಹೀಗೆ ನೀಡಿರುವಂತಹ ೨೫ಕೋಟಿ ಅನುದಾನದಲ್ಲಿ ಬಹಳ ವರ್ಷಗಳಿಂದ ಹಾಳಾಗಿರುವಂತಹ ಈ ಶೆಟ್ಟಿಕೆರೆ ರಸ್ತೆಯ ಅಭಿವೃದ್ದಿಗೆ ೫.೩೦ಕೋಟಿ ನೀಡಿದ್ದು, ಇದರೊಂದಿಗೆ ಗಣಿಬಾದಿತ ಪ್ರದೇಶಾಭಿವೃದ್ದಿ ಯೋಜನೆಯ ಹಣದಿಂದಲು ಈ ರಸ್ತೆಯನ್ನು ಅಭಿವೃದ್ದಿ ಪಡಿಸಿ ಈ ಭಾಗದಲ್ಲಿ ಓಡಾಡುವಂತಹ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಲೋಕೊಪಯೋಗಿ ಇಲಾಖೆಯ ಎಇಇ ತಿಮ್ಮಯ್ಯ ಮಾತನಾಡಿ ಒಟ್ಟು ೫.೩೦ಕೋಟಿ ವೆಚ್ಚದಲ್ಲಿ ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿಗೆ ಹೋಗುವಂತಹ ಈ ರಸ್ತೆಯಲ್ಲಿ ೫ ಕಿ.ಮೀ ಯಿಂದ ೮.೫ಕಿ.ಮೀ ವರೆಗೆ ಕಾಮಗಾರಿ ಮಾಡಲಿದ್ದು ಇದರಲ್ಲಿ ಒಟ್ಟು ೩.೧ಕಿ.ಮೀ ರಸ್ತೆ ಅಭಿವೃದ್ದಿ ಮಾಡಲಿದ್ದು ಶೆಟ್ಟಿಕೆರೆ ಯಿಂದ ವಡೇರಹಳ್ಳಿ, ಬಾಚಿಹಳ್ಳಿ, ಸಿದ್ದರಾಮನಗರದವರೆಗೆ ನಡೆಯಲಿದೆ ಒಟ್ಟು ರಸ್ತೆಯಲ್ಲಿ ೧.೧ಕಿ.ಮೀ.ಕಾಂಕ್ರೀಟ್‌ರಸ್ತೆ ಮಾಡಲಾಗುವುದು ಕಾರಣ ರಸ್ತೆ ಪಕ್ಕದಲ್ಲಿ ರಸ್ತೆ ಇರುವುದರಿಂದ ಇದು ಹಾಳಾಗುವುದು ಹೆಚ್ಚು ಅದ್ದರಿಂದ ಇಲ್ಲಿ ಕಾಂಕ್ರೀಟ್ ರಸ್ತೆಯನ್ನು ಉಳಿದ ೨ ಕಿ.ಮೀ ಡಾಂಬರ ರಸ್ತೆಯನ್ನು ನಿರ್ಮಿಸಲಾಗುವುದು ೭ ಮೀಟರ್ ಅಗಲದ ರಸ್ತೆ ನಿರ್ಮಿಸಲಾಗುವುದು ರಸ್ತೆಯ ಅಕ್ಕಪಕ್ಕದ ರೈತರು ರಸ್ತೆಯನ್ನು ನಿರ್ಮಿಸುವಾಗ ಸಹಕಾರ ನೀಡಬೇಕೆಂದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್ ಸೇರಿದಂತೆ ಮುಖಂಡರುಗಳಾದ ಮಹೇಶ್, ದಯಾನಂದ್, ಚಂದ್ರಕಾಂತ್,ಹಾಲಿನಡೈರಿ ಅದ್ಯಕ್ಷ ಬೈರೇಶ್, ಜಿಲ್ಲಾ ಪತ್ರಬರಹಗಾರ ಎಸ್.ಎಂ.ಪ್ರಕಾಶ್, ಸಿದ್ದರಾಮಯ್ಯ ಸೇರಿದಂತೆ ಇತರರು ಇದ್ದರು.