ರಾಮನಗರ: ನಗರದ ರೈಲ್ವೆ ನಿಲ್ದಾಣದ ಬಳಿಯಿಂದ ಚರ್ಚ್‌ವರೆಗಿನ ರಸ್ತೆ ವಿಸ್ತರಣೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನಗರಸಭೆ ಪರಿಮಿತಿಯಲ್ಲಿ ನಡೆಯುತ್ತಿರುವ ಯುಐಡಿಎಫ್ ಅನುದಾನದಲ್ಲಿ ಅವಶ್ಯಕವಾಗಿ ಆಗಬೇಕಿರುವ ರಸ್ತೆ ವಿಸ್ತರಣೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ಜನರು ಓಡಾಡಲು ಬಹಳ ತೊಂದರೆಯಿತ್ತು. ಅದನ್ನು ಗಮನಿಸಿ ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು. ಬೆಸ್ಕಾಂಗೆ ಪತ್ರ ಬರೆದು ಟ್ರಾನ್ಸ್ ಫಾರ್ಮರ್ ಸ್ಥಳ ಬದಲಾಯಿಸಲು ಪತ್ರ ಬರೆದು ಸುಸಜ್ಜಿತ ರಸ್ತೆ ನಿರ್ಮಿಸಿ ಎಂದು ಎಂಜಿನಿಯರ್‌ಗಳಿಗೆ ತಿಳಿಸಿದರು.ನಗರೋತ್ಥಾನ ಕೆಲಸ ನಡೆದಿರುವ ರೈಲ್ವೆ ನಿಲ್ದಾಣದಿಂದ ಚರ್ಚ್, ಹಳೇ ಸರ್ಕಾರಿ ಆಸ್ಪತ್ರೆ, ಬಾಲಗೇರಿಗೆ ಸಂಪರ್ಕಿಸುವ ರಸ್ತೆಗೆ ಸುಗಮ ಸಂಚಾರ ವ್ಯವಸ್ಥೆಗೆ ಈ ರಸ್ತೆ ನಿರ್ಮಾಣದಿಂದ ಅನುಕೂಲವಾಗುತ್ತದೆ ಎಂದ ಅವರು ಗುಣಮಟ್ಟದ ಕಾಮಗಾರಿ ಜೊತೆಗೆ ಕಾಂಕ್ರೀಟ್ ರಸ್ತೆಯನ್ನು ನೀರಿನಿಂದ ಕ್ಯೂರಿಂಗ್ ಮಾಡಿ ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.
ಇದೇ ವೇಳೆ ನಗರದಲ್ಲಿ ಯುಐಡಿಎಫ್ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭೆ ಸದಸ್ಯರಾದ ಆಯಿಷಾಬಾನು, ಅಜ್ಮತ್ , ಅಣ್ಣು, ಮೋಹಿನ್ ಖುರೇಷಿ, ಜಯಲಕ್ಷ್ಮಮ್ಮ, ಬೈರೇಗೌಡ, ಆಯುಕ್ತ ಡಾ.ಜಯಣ್ಣ, ಎಇಇ ವಿಶ್ವನಾಥ್, ಎಂಜಿನಿಯರ್ ನಿರ್ಮಲಾ, ಹಿಂದುಳಿದ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜು, ಮುಖಂಡರಾದ ಗುರುಪ್ರಸಾದ್, ಜಗದೀಶ್, ರಶೀದ್, ಅನಿಲ್ ಜೋಗೇಂದರ್, ಶಫಿ, ಪ್ರಸನ್ನಕುಮಾರ್, ನರಸಿಂಹಯ್ಯ, ಶಿವಶಂಕರ್, ಚಲುವರಾಜು, ದಾಸ್, ಗುಡ್ಡೆವೆಂಕಟೇಶ್, ವಸೀಂ , ಇನಾಯತ್ , ಕುಮಾರ್ ಮತ್ತಿತರರು ಇದ್ದರು.14ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ರೈಲ್ವೆ ನಿಲ್ದಾಣದ ಬಳಿಯಿಂದ ಚರ್ಚ್ ವರೆಗಿನ ರಸ್ತೆ ವಿಸ್ತರಣೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.