ಪೋತಂಗಲದಲ್ಲಿ ಮೀನುಗಳಿಗೆ ಕೊಳೆತ ಕೋಳಿ, ದನದ ಮಾಂಸ

| Published : Jan 25 2025, 01:00 AM IST

ಸಾರಾಂಶ

ಕಾಗಿಣಾ-ಮುಲ್ಲಾಮಾದಿ ನದಿ ದಂಡೆಯ ಜಮೀನಿನಲ್ಲಿ ತೆಲಂಗಾಣ ರಾಜ್ಯದ ಮೀನು ಮಾರಾಟಗಾರರು ಅಕ್ರಮವಾಗಿ.ಮೀನುಗಳಿಗೆ ಕೊಳೆತ ಕುರಿಕೋಳಿ, ದನದ ಮಾಂಸ ಆಹಾರವನ್ನು ನೀಡಲಾಗುತ್ತಿದೆ.ಇದರಿಂದಾಗಿ ಗ್ರಾಮದಲ್ಲಿ ಗಬ್ಬುವಾಸನೆ ಹರಡಿ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ.

ತೆರವಿಗೆ ಜಟ್ಟೂರ ಗ್ರಾಪಂ ಸದಸ್ಯ ನರೇಶ ಗುತ್ತೆದಾರ ಆಗ್ರಹ

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಪೋತಂಗಲ ಗ್ರಾಮದ ಕಾಗಿಣಾ-ಮುಲ್ಲಾಮಾದಿ ನದಿ ದಂಡೆಯ ಜಮೀನಿನಲ್ಲಿ ತೆಲಂಗಾಣ ರಾಜ್ಯದ ಮೀನು ಮಾರಾಟಗಾರರು ಅಕ್ರಮವಾಗಿ.ಮೀನುಗಳಿಗೆ ಕೊಳೆತ ಕುರಿಕೋಳಿ, ದನದ ಮಾಂಸ ಆಹಾರವನ್ನು ನೀಡಲಾಗುತ್ತಿದೆ.ಇದರಿಂದಾಗಿ ಗ್ರಾಮದಲ್ಲಿ ಗಬ್ಬುವಾಸನೆ ಹರಡಿ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ. ತಕ್ಷಣ ಇದನ್ನು ನಿಲ್ಲಿಸಿ ಜನರ ಆರೋಗ್ಯವನ್ನು ಕಾಪಾಡಬೇಕೆಂದು ಜಟ್ಟೂರ ಗ್ರಾಪಂ ಸದಸ್ಯ ನರೇಶ ಗುತ್ತೆದಾರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೋತಂಗಲ ಗ್ರಾಮದ ಹತ್ತಿರ ಮುಲ್ಲಾಮಾರಿ-ಕಾಗಿಣಾ ನದಿ ಹರಿಯುತ್ತದೆ.ಕಳೆದ೧೦ವರ್ಷಗಳಿಂದ ನದಿ ದಂಡೆಯ ಜಮೀನುಗಳಲ್ಲಿ ಅಕ್ರಮವಾಗಿ ಹೊಂಡ ತೋಡಿಸಿ ಕಾಗಿಣಾ ನದಿ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ತೆಲಂಗಾಣ ರಾಜ್ಯದ ಮೀನು ಮಾರಾಟಗಾರರು ಇಲ್ಲಿನ ರೈತರ ಜಮೀನು ಲೀಜ ಮೇಲೆ ಪಡೆದುಕೊಂಡು ಹೊಂಡ ತೋಡಿಸಿ ರೂಪಚಂದ ಮತ್ತು ಪಂಕಜ ತಳಿಗಳ ಮೀನು ಸಾಕಾಣಿಕೆ ಮಾಡಲಾಗುತ್ತಿದೆ ತೆಲಂಗಾಣ ರಾಜ್ಯದವರು ಪೊತಂಗಲ ಗ್ರಾಮದಲ್ಲಿ ಮೀನು ಸಾಕಾಣಿಕೆಯಲ್ಲಿ ಮೀನುಗಳಿಗೆ ಆಹಾರವಾಗಿ ದವಸ ಧಾನ್ಯಗಳನ್ನು ಕೊಡದೆ ಕೋಳಿ, ದನದ ಮಾಂಸ ಹಾಗೂ ಎಲಬು(ವೇಸ್ಟೇಜ)ತಂದು ಮೀನುಗಳಿಗೆ ಆಹಾರವನ್ನು ಕೊಡುತ್ತಿದ್ದಾರೆ.ಕೆಲವು ವರ್ಷಗಳ ಹಿಂದೆ ಕ್ಯಾಟಫಿಶ ಸಹಾ ಇದರಲ್ಲಿ ಸಾಕಾಣಿಕೆ ಮಾಡಲಾಗುತ್ತಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಅದರ ಸಾಕಾಣಿಕೆ ನಿಲ್ಲಿಸಲಾಗಿದೆ ಎಂದು ಹೇಳಿದರು.

ಮೀನು ಮಾರಾಟವು ಒಂದು ವಾಣಿಜ್ಯ ಉದ್ದಮ ಆಗಿರುವುದರಿಂದ ತೆಲಂಗಾಣ ಮೀನು ಸಾಕಾಣಿಕೆ ಮತ್ತು ಮಾರಾಟಗಾರರು ಮೀನುಗಳಿಗೆ ಕುರಿಕೋಳಿ,ದನದ ಮೂಳೆಗಳು ಮತ್ತು ಘನತಾಜ್ಯ ಆಹಾರ ಹೈದ್ರಾಬಾದ್‌, ವಿಕಾರಾಬಾದ, ತಾಂಡೂರ, ಕೊಡಂಗಲ, ಜಹೀರಾಬಾದ, ಬಶಿರಾಬಾದ ಮುಂತಾದ ಕಡೆಗಳಿಂದ ಗೂಡ್ಸ್‌ಗಳಲ್ಲಿ ಕೊಳೆತ ಮಾಂಸವನ್ನು ತುಂಬಿಕೊಂಡು ಮೀನುಗಳಿಗೆ ಆಹಾರ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಗಬ್ಬು ವಾಸನೆ ಕಲುಷಿತ ವಾತಾವಾರಣ ಉಂಟಾಗಿದೆ.

ವಿಪರೀತ ಹೊಲಸು ವಾಸನೆಯಿಂದಾಗಿ ವೃದ್ಧರಲ್ಲಿ ಚಿಕ್ಕಮಕ್ಕಳಲ್ಲಿ ಚಳಿಜ್ವರ ಕಂಡು ಬರುತ್ತಿದೆ.ಹೊಲಸು ನೀರು ನದಿಗೆ ಹರಿದು ಬಿಡುತ್ತಿರುವುದರಿಂದ ನೀರು ಸೇವಿಸಿದ ದನಕರುಗಳಿ ರೋಗಗಳಿಂದ ನರಳಿ ಸಾಯುತ್ತಿವೆ ಎಂದು ಜಟ್ಟೂರ ಗ್ರಾಪಂ ಸದಸ್ಯ ನರೇಶ ಗುತ್ತೆದಾರ ದೂರಿದ್ದಾರೆ.

ಪೋತಂಗಲ ಮೀನುಸಾಕಾಣಿಕೆ ವೇಸ್ಟವೇಜದಿಂದ ಜನರ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿರುವುದರಿಂದ ಅದನ್ನು ಕೂಡಲೇ ನಿಲ್ಲಿಸಬೇಕು ಮತ್ತು ವೃದ್ದರ,ಹೆಣ್ಣುಮಕ್ಕಳ,ಚಿಕ್ಕಮಕ್ಕಳ,ವಯೋವೃದ್ದ ಆರೋಗ್ಯವನ್ನು ಕಾಪಾಡಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.