ಸಾರಾಂಶ
ಷೇರು ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಕಮಿಷನ್ ಪಡೆಯಬಹುದು ಎಂಬ ಆಸೆ ತೋರಿಸಿ ವೈದ್ಯರೊಬ್ಬರಿಗೆ ಬರೋಬ್ಬರಿ ₹2.40 ಕೋಟಿ ಪಂಗನಾಮ ಹಾಕಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಕಮಿಷನ್ ಪಡೆಯಬಹುದು ಎಂಬ ಆಸೆ ತೋರಿಸಿ ವೈದ್ಯರೊಬ್ಬರಿಗೆ ಬರೋಬ್ಬರಿ ₹2.40 ಕೋಟಿ ಪಂಗನಾಮ ಹಾಕಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ನಗರದ ವೈದ್ಯ (ಹೆಸರನ್ನು ಗೌಪ್ಯವಾಗಿಡಲಾಗಿದೆ)ರೊಬ್ಬರಿಗೆ ವಾಟ್ಸಾಪ್, ಟೆಲಿಗ್ರಾಂ ಚಾಟ್ ಮಾಡಲು ಶುರು ಮಾಡಿದ್ದ ಅಪರಿಚಿತನೊಬ್ಬ ಕೆಲ ದಿನಗಳಲ್ಲೇ ಫೇಸ್ ಬುಕ್ ಮೂಲಕ ಸ್ನೇಹಿತನಾಗಿದ್ದಾನೆ. ಅನಂತರ ಸಿಎಂಸಿ ಮಾರ್ಕೆಟ್ ಎಂಬ ಜಾಲತಾಣದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ವೈದ್ಯರಿಗೆ ಹೇಳಿ, ಇಬ್ಬರೂ ಸೇರಿಕೊಂಡು ಹಣ ಹೂಡಿಕೆ ಮಾಡೋಣ ಎಂಬುದಾಗಿ ನಯವಾದ ಮಾತುಗಳಲ್ಲೇ ವೈದ್ಯನನ್ನು ನಂಬಿಸಿದ್ದಾನೆ ಎಂದು ಹೇಳಲಾಗಿದೆ.ಆನ್ ಲೈನ್ ವಂಚಕನು ವಾಟ್ಸಪ್‌ನಲ್ಲಿ ಕಳಿಸಿದ್ದ ಲಿಂಕ್ ಮೂಲಕ ಸಿಎಂಸಿ ಮಾರ್ಕೆಟ್ ವೆಬ್ ಸೈಟ್‌ನಲ್ಲಿ ಕಳೆದ ಫೆ.14ರಿಂದ ಮೇ 15ರವರೆಗೆ ಒಟ್ಟು ₹2,40,92,150 ಅನ್ನು ವೈದ್ಯರು ಹೂಡಿಕೆ ಮಾಡಿಕೊಂಡೇ ಬಂದಿದ್ದಾರೆ. ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಸಲ ಹಣ ವರ್ಗಾವಣೆ ಮಾಡಿರುವ ವೈದ್ಯರು ಮಾ.11ರಿಂದ ₹5 ಲಕ್ಷಗಳನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ.
ಒಮ್ಮೆ ₹5 ಲಕ್ಷ ಹಿಂಪಡೆ ವೈದ್ಯರು ಹಣ ವಿತ್ ಡ್ರಾ ಮಾಡಲು ನಡೆಸಿದ ಹತ್ತಾರು ಪ್ರಯತ್ನಗಳು ವಿಫಲವಾಗಿದ್ದರಿಂದ ಅನುಮಾನಗೊಂಡಿದ್ದಾರೆ. ಬಳಿಕ ಸೀದಾ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.- - -
(ಸಾಂದರ್ಭಿಕ ಚಿತ್ರ);Resize=(128,128))
;Resize=(128,128))
;Resize=(128,128))