ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ತಾಲೂಕಿನ ಪ್ರತಿ ಗ್ರಾಮಗಳಲ್ಲಿನ ನಾಗರೀಕರು ಗಣತಿ ನಮೂನೆಗಳನ್ನು ಭರ್ತಿ ಮಾಡಿ ಬಿಎಲ್ಒಗಳಿಗೆ ನೀಡಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಹನುಮಂತಪ್ಪ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ದ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಮತಪಟ್ಟಿ ಪರಿಷ್ಕರಣೆ ಆರಂಭವಾಗಿದೆ. ಜೂ.30 ರಿಂದ ಜು.29ರ ವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಬ್ಬರೂ ಅಗತ್ಯ ದಾಖಲಾತಿಗಳನ್ನು ಬಿಎಲ್‌ಒಗಳಿಗೆ ನೀಡಿ ನಿಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಾಗಿದೆ.

ಈ ಪ್ರಕ್ರಿಯೆಯನ್ನು ಯಾರೊಬ್ಬರು ನಿರ್ಲಕ್ಷ್ಯ ಮಾಡದೆ ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಕಡ್ಡಾಯವಾಗಿ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಹಿ ಹಾಕಿ ಅವರಿಗೆ ಒಂದು ನೀಡಿ ನೀವೊಂದು ವಾಪಸ್ ಪಡೆಯಬೇಕು ಎಂದರು.


ಮತದಾರರು ಆಧಾರ್ ಕಾರ್ಡ್, ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಬೇಕು. ಈಗಾಗಲೇ ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿ ಮನೆ ಮನೆಗೂ ಬಿಎಲ್‌ಒಗಳು ಭೇಟಿ ನೀಡಿ ನೀಡುತ್ತಿದ್ದಾರೆ. ನಿರ್ಲಕ್ಷ ವಹಿಸಿದೆ ಮತ ಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು.

ಈ ಕುರಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಕಲಚೇತನರು ಹಾಗೂ ಇನ್ನಿತರರು ಬೈಕ್ ರ್‍ಯಾಲಿ ನಡೆಸಿದರು. ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಎಸ್‌ಐಆರ್ ಬಗ್ಗೆ ಜಾಗೃತಿ ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ತಾಪಂನ ವ್ಯವಸ್ಥಾಪಕ ನಂದೀಶ್, ವಿ.ಬಿ.ರಾಮ್ ಜೀ ಸಹಾಯಕ ನಿರ್ದೇಶಕ ಗಣೇಶ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ನವೀನ್ ಕುಮಾರ್, ಎಂಆರ್‌ಡಬ್ಲ್ಯೂ ದಾದಾಪೀರ್, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಾದ ಕರಿಬಸಪ್ಪ, ಗುಂಡಪ್ಪ, ಕುಮಾರಸ್ವಾಮಿ, ಬೀರಲಿಂಗಪ್ಪ, ಬಾಂಡ್ರಾವಪ್ಪ, ಪಾಲಯ್ಯ, ಪ್ರದೀಪ್, ಇನ್ನಿತರ ಪಿಡಿಒಗಳು, ಗ್ರಾಪಂಗಳ ಸಿಬ್ಬಂದಿ, ಯು.ಆರ್.ಡಬ್ಲ್ಯೂ.ಸುರೇಶ್, ವಿ.ಆರ್.ಡಬ್ಲ್ಯೂಗಳಾದ ಶೇಖರಪ್ಪ, ತಿಪ್ಪೇರುದ್ರಪ್ಪ, ಶಿವಮ್ಮ, ಮಂಜುನಾಥ, ಪಾರ್ವತಿ, ರಾಮಲಿಂಗಪ್ಪ, ಶಿವರಾಜ್, ಬಸವರಾಜ್, ಹನುಮಯ್ಯ, ಶಿವಲಿಂಗಮ್ಮ ಮೊಹಮದ್ ಹುಸೇನ್, ರಾಮಣ್ಣ, ದಾನಸ್ವಾಮಿ ಇದ್ದರು.