ಮಹಿಳೆಯರ ಆರ್ಥಿಕ ಅಭಿವೃದ್ದಿ, ಸ್ವಾವಲಂಬನೆಗೆ ಸಂಜೀವಿನಿ ಒಕ್ಕೂಟ ಸಹಕಾರಿ: ಎಚ್.ಸಿ.ಷಡಕ್ಷರಿ

| Published : Oct 01 2024, 01:21 AM IST

ಮಹಿಳೆಯರ ಆರ್ಥಿಕ ಅಭಿವೃದ್ದಿ, ಸ್ವಾವಲಂಬನೆಗೆ ಸಂಜೀವಿನಿ ಒಕ್ಕೂಟ ಸಹಕಾರಿ: ಎಚ್.ಸಿ.ಷಡಕ್ಷರಿ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆಸಂಘದ ಮಹಿಳೆಯರಿಗೆ ಅರ್ಥಿಕ ಅಭಿವೃದ್ಧಿ ಹಾಗೂ ಸ್ವಾವಲಂಬನೆಗೆ ಸಂಜೀವಿನಿ ಒಕ್ಕೂಟಗಳು ಸಹಕಾರಿಯಾಗಲಿವೆ ಎಂದು ತಾಲೂಕು ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಸಿ.ಷಡಕ್ಷರಿ ಹೇಳಿದ್ದಾರೆ.

- ಗುಳ್ಳದಮನೆ ಗ್ರಾಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಂಘದ ಮಹಿಳೆಯರಿಗೆ ಅರ್ಥಿಕ ಅಭಿವೃದ್ಧಿ ಹಾಗೂ ಸ್ವಾವಲಂಬನೆಗೆ ಸಂಜೀವಿನಿ ಒಕ್ಕೂಟಗಳು ಸಹಕಾರಿಯಾಗಲಿವೆ ಎಂದು ತಾಲೂಕು ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಸಿ.ಷಡಕ್ಷರಿ ಹೇಳಿದ್ದಾರೆ.

ತಾಲೂಕಿನ ಗುಳ್ಳದಮನೆ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಗುಳ್ಳದಮನೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಒಕ್ಕೂಟದ ರಚನೆ, ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟ ದಲ್ಲಿ ನಿರ್ವಹಿಸಿದ ಹಣಕಾಸು ವ್ಯವಹಾರ, ಖರ್ಚು ವೆಚ್ಚಗಳು ಹಾಗೂ ಒಕ್ಕೂಟದ ಕಾರ್ಯಕಾರಿ ಸಮಿತಿ ಬದಲಾವಣೆ ನಿಯಮಗಳು ಹಾಗೂ ಒಕ್ಕೂಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಮ್.ಬಿ.ಕೆ, ಎಲ್ ಸಿಆರ್ ಪಿ, ಕೃಷಿಸಖಿ, ಪಶುಸಖಿ ಹಾಗೂ ಸ್ವಚ್ಛವಾಹಿನಿ ಮಹಿಳಾ ವಾಹನ ಚಾಲಕಿ ಕಾರ್ಯ ವೈಖರಿ ಬಗ್ಗೆ ಅವರು ತಿಳಿಸಿದರು.

ಚಿಕ್ಕಮಗಳೂರು ಜಿಪಂ ಜಿಲ್ಲಾ ವ್ಯವಸ್ಥಾಪಕ ಮಂಜೇಗೌಡ್ರು ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿ ಮಹಿಳೆ ಒಕ್ಕೂಟದ ವ್ಯಾಪ್ತಿ ಹಾಗೂ ಸಂಜೀವಿನಿ ಯೋಜನೆಯಲ್ಲಿ ದೊರೆಯುವ ಸಮುದಾಯ ಬಂಡವಾಳ ನಿಧಿ, ದುರ್ಬಲ ವರ್ಗದವರ ನಿಧಿ, ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮ ಮುಂತಾದ ಯೋಜನೆಗಳ ಸದುಪಯೋಗಿಸಿ, ಸಂಜೀವಿನಿ ಯೋಜನೆ ಉದ್ದೇಶ ಸಾಕಾರಗೊಳಿಸಲು ಒಕ್ಕೂಟ ಪ್ರಯತ್ನಿಸ ಬೇಕೆಂದು ತಿಳಿಸಿದರು. ಗುಳ್ಳದಮನೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಮಂಜುಳ.ಜಿ ಅಧ್ಯಕ್ಷತೆ ವಹಿಸಿದ್ದರು. ಗುಳ್ಳದಮನೆ ಸಂಜೀವಿನಿ ಗ್ರಾಪಂಮಟ್ಟದ ಒಕ್ಕೂಟ (ಜಿ ಪಿ ಎಲ್ ಎಫ್) ₹ 2,13,243 ಲಾಭಾಂಶದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಮಹಾಸಭೆಗೆ ತಿಳಿಸಲಾಯಿತು.

ಒಕ್ಕೂಟದಲ್ಲಿ ಒಟ್ಟು 5 ವಾರ್ಡ್ ಗಳ ರಚನೆಯಾಗಿದ್ದು, ಪ್ರತಿ ವಾರ್ಡ್ ನಿಂದ 3 ಜನ ಪದಾಧಿಕಾರಿಗಳನ್ನು ಆಯ್ಕೆಮಾಡಿ ಒಟ್ಟು 15 ಜನರ ಕಾರ್ಯಕಾರಿ ಸಮಿತಿ ರಚಿಸಿ ಅದರಲ್ಲಿ ಒಕ್ಕೂಟಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಗುಳ್ಳದಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ, ಗ್ರಾಪಂ ಸದಸ್ಯರಾದ ಕರಿಯಮ್ಮ, ಚಂದ್ರಮ್ಮ, ಕೆಂಚೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದಮ್ಮ, ಊರಿನ ಮುಖಂಡರಾದ ಮಂಜಪ್ಪ, ರಾಮಚಂದ್ರಪ್ಪ, ಭೈರಪ್ಪ, ಸಿದ್ದಪ್ಪ, ಕೃಷ್ಣ ಮೂರ್ತಿ, ತಾಲೂಕು ಎನ್ ಆರ್ ಎಲ್ ಎಮ್ ಹಾಗೂ ಒಕ್ಕೂಟದ ಸಿಬ್ಬಂದಿ, ಎಲ್ಲಾ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.

30ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಗುಳ್ಳದಮನೆ ಗ್ರಾಮದಲ್ಲಿ ನಡೆದ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ತಾಪಂ ತಾಲೂಕುಕಾರ್ಯಕ್ರಮ ವ್ಯವಸ್ಥಾಪಕ ಎಚ್.ಸಿ.ಷಡಕ್ಷರಿ ಮಾತನಾಡಿದರು. ಗುಳ್ಳದಮನೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷ ಮಂಜು, ಜಿಪಂ ಜಿಲ್ಲಾ ವ್ಯವಸ್ಥಾಪಕ ಮಂಜೇಗೌಡ ಮತ್ತಿತರರು ಇದ್ದರು.