ರೈತರು ರಸ್ತೆಗೆ ಜಾಗ ನೀಡಿದರೆ ಉತ್ತಮ ಮಾರ್ಗ ನಿರ್ಮಾಣ: ಶಾಸಕ ಕೆ.ಎಸ್.ಆನಂದ್

| Published : Oct 01 2024, 01:20 AM IST

ರೈತರು ರಸ್ತೆಗೆ ಜಾಗ ನೀಡಿದರೆ ಉತ್ತಮ ಮಾರ್ಗ ನಿರ್ಮಾಣ: ಶಾಸಕ ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಬಿ.ಕೋಡಿಹಳ್ಳಿ, ಮುಂಡ್ರೆ ಮತ್ತಿತರ ಗ್ರಾಮಗಳಿಂದ ಬೀರೂರು ಕಡೆ ಧಾವಿಸುವ ವಾಹನ ಸವಾರರಿಗೆ ಕಿರಿದಾಗಿದ್ದ ರೈಲ್ವೆ ಬ್ರಿಡ್ಜ್ ನಡಿ ರಸ್ತೆಯಿಂದ ಸಂಚಾರ ಕಷ್ಟ ಸಾಧ್ಯವಾಗಿತ್ತು. ಇದನ್ನು ಸರಿಪಡಿಸುವ ಸಲುವಾಗಿ ಕೋಡಿಹಳ್ಳಿಯಿಂದ ಬೀರೂರು ಮಾರ್ಗಕ್ಕೆ ಬದಲಾಗಿ 710 ಮೀ. ಕಾಂಕ್ರೀಟ್ ರಸ್ತೆಗೆ ಸುಮಾರು ₹ 35ಲಕ್ಷ ಅನುದಾನ ನೀಡಲಾಗಿದ್ದು, ಸದ್ಯದಲ್ಲಿಯೇ ಈ ಕಾಮಗಾರಿ ಮುಕ್ತಾಯವಾಗಿ ಉತ್ತಮ ರಸ್ತೆ ಲಭಿಸಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಬಿ.ಕೋಡಿಹಳ್ಳಿಯಿಂದಾ ಬೀರೂರು ಕಡೆಯ 710ಮೀ ಸಿಸಿ ರಸ್ತೆಗೆ ₹ 35ಲಕ್ಷ ಅನುದಾನ

ಕನ್ನಡಪ್ರಭ ವಾರ್ತೆ ಬೀರೂರು.

ಬಿ.ಕೋಡಿಹಳ್ಳಿ, ಮುಂಡ್ರೆ ಮತ್ತಿತರ ಗ್ರಾಮಗಳಿಂದ ಬೀರೂರು ಕಡೆ ಧಾವಿಸುವ ವಾಹನ ಸವಾರರಿಗೆ ಕಿರಿದಾಗಿದ್ದ ರೈಲ್ವೆ ಬ್ರಿಡ್ಜ್ ನಡಿ ರಸ್ತೆಯಿಂದ ಸಂಚಾರ ಕಷ್ಟ ಸಾಧ್ಯವಾಗಿತ್ತು. ಇದನ್ನು ಸರಿಪಡಿಸುವ ಸಲುವಾಗಿ ಕೋಡಿಹಳ್ಳಿಯಿಂದ ಬೀರೂರು ಮಾರ್ಗಕ್ಕೆ ಬದಲಾಗಿ 710 ಮೀ. ಕಾಂಕ್ರೀಟ್ ರಸ್ತೆಗೆ ಸುಮಾರು ₹ 35ಲಕ್ಷ ಅನುದಾನ ನೀಡಲಾಗಿದ್ದು, ಸದ್ಯದಲ್ಲಿಯೇ ಈ ಕಾಮಗಾರಿ ಮುಕ್ತಾಯವಾಗಿ ಉತ್ತಮ ರಸ್ತೆ ಲಭಿಸಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಬಿ.ಕೋಡಿಹಳ್ಳಿ , ನಾಗದೇವನಹಳ್ಳಿ ಗೇಟ್‌ನಿಂದ ಲಿಂಗದಹಳ್ಳಿ ರಸ್ತೆ ಮೂಲಕ ಬೀರೂರು ಕಡೆಗೆ ಸಂಪರ್ಕ ನೀಡುವ ಕಾಂಕ್ರಿಟ್ ರಸ್ತೆ ಗುದ್ದಲಿ ಪೂಜೆ , ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಹಲವಾರು ವರ್ಷಗಳಿಂದ ಹಲವಾರು ರಾಜಕೀಯ ನಾಯಕರ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದ ಪರಿಣಾಮ ಇಲ್ಲಿನ ರೈತರಿಗೆ ಸಾಕಷ್ಟು ತೊಂದರೆಯಾಗಿತ್ತು ಎಂಧರು.ಪಟ್ಟಣ ದಿನಕಳೆದಂತೆ ಬೆಳೆಯುತ್ತಿದ್ದು ಈ ಮಾರ್ಗದಲ್ಲಿರುವ ರೈತರು ಬದುಗಳಲ್ಲಿ ಸ್ವಲ್ಪ ಜಾಗ ನೀಡಿ ವಿದ್ಯುತ್ ಕಂಬ ನಿಮ್ಮ ಜಮೀನುಗಳಲ್ಲಿ ಹಾಕಿ ದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜಾಗ ಸಿಕ್ಕಿ, ರಸ್ತೆ ಅಗಲೀಕರಣವಾಗುತ್ತದೆ. ಅದಕ್ಕೆ ಬೇಕಾದ ಅನುದಾನವನ್ನು ಶಾಸಕರ ನಿಧಿಯಿಂದ ಹಾಕುತ್ತೇನೆ ಎಂದರು.ಇಲ್ಲಿಗೆ ಸಂಪರ್ಕ ನೀಡುವ ರಸ್ತೆಗೆ ರೈಲ್ವೆ ಅಂಡರ್ ಪಾಸ್ ಕಿರಿದಾಗಿದ್ದು, ಇದರ ಅಗಲೀಕರಣಕ್ಕೆ ಇತ್ತೀಚೆಗೆ ಆಗಮಿಸಿದ್ದ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ನವರಿಗೆ ಬಿ.ಕೋಡಿಹಳ್ಳಿ ಜನರ ಜೊತೆ ಮನವಿ ನೀಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಈಗಾಗಲೇ ಕ್ಷೇತ್ರದಲ್ಲಿ ನೀರಾವರಿ ಕಾಮಗಾರಿಗಳು ನಡೆಯುತ್ತಿದ್ದು, ದೊಡ್ಡಘಟ್ಟದಿಂದ ದೇವನಕರೆಯಲ್ಲಿ ನೀರು ತುಂಬಿಸಿ ಸುಮಾರು 36 ಕೆರೆ ಗಳಿಗೆ ನೀರು ಕೊಡುವ ಯೋಜನೆ ಇದೆ. ಈ ಕೆರೆಯಲ್ಲಿ ಸದಾ ನೀರು ತುಂಬಿ ಶೇ 0.22ಟಿಎಂಸಿ ನಿರಂತರವಾಗಿದ್ದು ಮದಗದಕೆರೆಯ ಮುಕ್ಕಾಲು ಭಾಗ ದಷ್ಟು ಶೇಖರಣೆ ಇರುತ್ತದೆ. ಬೇರೆ ಕೆರೆಗೆ ನೀರು ಹರಿಸಲು ಈ ಕೆರೆಯೇ ಪ್ರಮುಖವಾಗಿದ್ದು ಕೆರೆ ಅಗಲೀಕರಣಕ್ಕೆ 30 ಭಾಗ ಆಳವಾಡಿ ಇಲ್ಲಿನ ಸುತ್ತಮುತ್ತಲಿನ ರೈತರ ಕೊಳವೆ ಬಾವಿ ಮತ್ತು ಕುಡಿವ ನೀರಿಗೆ ಅಭಾವವಾಗದಂತೆ ಎಚ್ಚರ ವಹಿಸುವ ಜೊತೆ ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ಬದ್ದನಾಗಿದ್ದೇನೆ ಎಂದರು.ಹೊಗರೇಹಳ್ಳಿ ಶಶಿಕುಮಾರ್ ಮಾತನಾಡಿ, ಇಂತಹ ಕುಗ್ರಾಮಗಳ ಸಮಸ್ಯೆಯನ್ನು ಶಾಸಕ ಆನಂದ್ ಗುರುತಿಸಿ ರೈತರ ಸಮಸ್ಯೆಗಳಿಗೆ ಧ್ವನಿ ಯಾಗುತ್ತಿರುವುದು ಉತ್ತಮ ಬೆಳವಣಿಗೆ, ಮುಂದಿನ ದಿನಗಳಲ್ಲಿ ಕೆರೆ ಸೇರಿದಂತೆ ನಮ್ಮೆಲ್ಲ ಸಮಸ್ಯೆಗಳನ್ನು ಆಲಿಸುವ ನಂಬಿಕೆ ಇದೆ ಎಂದರು.ಕೆ.ಆರ್.ಐ.ಡಿಯಲ್ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎನ್.ಅಶ್ವಿನಿ, ಬಳ್ಳಿಗನೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಶಿಲ್ಪ. ರಾಮಪ್ಪ, ಚಂದ್ರಪ್ಪ, ಸುರೇಶ್, ಪಿಡಿಒ ಶಿವಕುಮಾರ್, ರಾಘವೇಂದ್ರ, ಹರೀಶ್, ತಾಪಂ ಮಾಜಿ ಅಧ್ಯಕ್ಷ ದಾಸಯ್ಯನ ಗುತ್ತಿ ಚಂದ್ರಪ್ಪ, ಕಂಸಾಗರ ಸೋಮಶೇಖರ್, ಆನಂದ್, ಕೀರ್ತಿ ಯತೀಶ್, ಬಿ.ಕೋಡಿಹಳ್ಳಿ ಗ್ರಾಮಸ್ಥರು ಹಾಗೂ ಪುರಸಭೆ ಸದಸ್ಯರು ಇದ್ದರು.30 ಬೀರೂರು 1ಬಿ.ಕೋಡಿಹಳ್ಳಿಯಿಂದ ಬೀರೂರು ಸಂಪರ್ಕಿಸುವ 35ಲಕ್ಷರೂ ಮೌಲ್ಯದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಸೋಮವಾರ ಚಾಲನೆ ನೀಡಿದರು. ಕೆ.ಆರ್.ಐ.ಡಿಯಲ್ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎನ್.ಅಶ್ವಿನಿ, ಬಳ್ಳಿಗನೂರು ಗ್ರಾ.ಪಂ.ಅಧ್ಯಕ್ಷೆ ರತ್ನಮ್ಮ, ಹೊಗರೇಹಳ್ಳಿ ಶಶಿಕುಮಾರ್ ಇದ್ದರು.