ಸಂತೆ ಪುನಾರಂಭ: ದಾಖಲೆ ಪ್ರಮಾಣದ ತೆಂಗಿನ ಕಾಯಿ ಮಾರಾಟ

| Published : Oct 25 2024, 12:48 AM IST

ಸಂತೆ ಪುನಾರಂಭ: ದಾಖಲೆ ಪ್ರಮಾಣದ ತೆಂಗಿನ ಕಾಯಿ ಮಾರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ಗುರುವಾರ ಪುನರಾರಂಭ ಗೊಂಡ ತೆಂಗಿನ ಕಾಯಿ ಸಂತೆಯಲ್ಲಿ ದಾಖಲೆ ಪ್ರಮಾಣದ ತೆಂಗಿನ ಕಾಯಿ ಮಾರಾಟವಾಗಿ ತೆಂಗು ಬೆಳೆಗಾರರಲ್ಲಿ ಹರುಷ ಮೂಡಿಸಿದೆ.

₹ 25ಕ್ಕೆ ಒಂದು ಕಾಯಿ ಹರ್ಷಗೊಂಡ ರೈತರು

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ಗುರುವಾರ ಪುನರಾರಂಭ ಗೊಂಡ ತೆಂಗಿನ ಕಾಯಿ ಸಂತೆಯಲ್ಲಿ ದಾಖಲೆ ಪ್ರಮಾಣದ ತೆಂಗಿನ ಕಾಯಿ ಮಾರಾಟವಾಗಿ ತೆಂಗು ಬೆಳೆಗಾರರಲ್ಲಿ ಹರುಷ ಮೂಡಿಸಿದೆ.

ಸ್ಥಗಿತವಾಗಿದ್ದ ಈ ಸಂತೆ ಪುನಾರಂಭ ಗೊಡಿದ್ದಷ್ಟೆ ಅಲ್ಲದೆ, 1 ತೆಂಗಿನ ಕಾಯಿಗೆ 25 ರು.ನಂತೆ 26 ಸಾವಿರ ತೆಂಗಿನಕಾಯಿಗಳ ಭರ್ಜರಿ ಖರೀದಿ ನಡೆದಿದೆ.

ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರ ಒತ್ತಾಸೆ ಮೇರೆಗೆ ತಾಲೂಕಿನ ಅಂತರಘಟ್ಟೆಯಲ್ಲಿ ಪ್ರತಿ ಗುರುವಾರ ಮತ್ತು ಬೀರೂರಿನ ಎಪಿಎಂಸಿ ಆವರಣದಲ್ಲಿ ಪ್ರತಿ ಶನಿವಾರ ತೆಂಗಿನ ಸಂತೆ ನಡೆಸಲು ಎಪಿಎಂಸಿ ಕಾರ್ಯದರ್ಶಿ ಚೈತ್ರ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ತೆಂಗಿನ ಸಂತೆ ನಡೆಸಲು ಮೂಲ ಸೌಕರ್ಯಗಳ ಒದಗಿಸಿ ಸುತ್ತಮುತ್ತಲಿನ ರೈತರಿಗೆ ಖರೀದಿದಾರರಿಗೆ ಮಾಹಿತಿ ನೀಡಿದ್ದರು.ಗುರುವಾರ ಬೆಳಗಿನ ಜಾವ 4 ಗಂಟೆಗೆ ಆರಂಭವಾದ ತೆಂಗಿನ ಸಂತೆ 10 ಗಂಟೆ ವೇಳೆಗೆ ಸುಮಾರು 26 ಸಾವಿರ ತೆಂಗಿನ ಕಾಯಿ ವಹಿವಾಟು ನಡೆದು ದಾಖಲೆಯಾಗಿದೆ. ಕನಿಷ್ಠ 22 ರು ನಿಂದ 25 ರು. ತನಕ ತೆಂಗಿನಕಾಯಿ ಖರೀದಿ ನಡೆದಿದ್ದು ನೂರಾರು ರೈತರು ತಂದಿದ್ದ ಕಾಯಿಗಳನ್ನು ಉತ್ತಮ ಬೆಲೆಗೆ ನೀಡುವ ಮೂಲಕ ಅಧಿಕಾರಿ ವರ್ಗ ಹಾಗೂ ಶಾಸಕರಿಗೆ ಧನ್ಯವಾದ ಸಲ್ಲಿಸಿದರು. ಕೊರೊನಾ ಬಳಿಕ ತೆಂಗಿನ ಕಾಯಿ ಬೆಲೆ ಕುಸಿತ ಕಂಡು ತೆಂಗಿನಕಾಯಿ ಖರೀದಿಯಲ್ಲಿ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದರು. ತೆಂಗಿನ ಸಂತೆಯಲ್ಲಿ ಉತ್ತಮ ಬೆಲೆ ಸಿಕ್ಕಿರುವುದಕ್ಕೆ ಉತ್ಸಾಹದಲ್ಲಿದ್ದ ರೈತರು ಈ ಸಂತೆ ಪುನಃ ನಿಲ್ಲದಂತೆ ನಾವುಗಳು ನಡೆಸಿಕೊಂಡು ಹೋಗುತ್ತೇವೆ ಅಧಿಕಾರಿಗಳ ಸಹಕಾರ ಮುಖ್ಯ ಎಂದು ಕಲ್ಕೆರೆಯ ರೈತ ರುದ್ರಪ್ಪ ತಿಳಿಸಿದರು.

ಈ ತೆಂಗಿನ ಸಂತೆ ಆರಂಭವಾಗಿರುವುದರಿಂದ ಪಕ್ಕದ ಹೊಸದುರ್ಗ ತಾಲೂಕು, ಅಜ್ಜಂಪುರ, ಕಡೂರು ತಾಲೂಕಿನ ತೆಂಗು ಬೆಳೆಗಾರರಿಗೆ ಸಹಕಾರಿಯಾಗಲಿದೆ ಎಂದು ಆನಿವಾಳದ ರೈತ ಲೋಕೇಶ್ವರಯ್ಯ ತಿಳಿಸಿದರು. ಒಟ್ಟಾರೆ ಶಾಸಕರ ಆಶಯ, ಎಪಿಎಂಸಿ ಇಲಾಖೆಯ ಅಧಿಕಾರಿ ಸಿಬ್ಬಂದಿ ಶ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

24ಕೆಕೆಡಿಯು1ಕಡೂರು ತಾಲೂಕು ಅಂತರಘಟ್ಟೆ ಗ್ರಾಮದ ಎಪಿಎಂಸಿ ಆವರಣದಲ್ಲಿ ಗುರುವಾರ ಆರಂಭಗೊಂಡ ತೆಂಗಿನಕಾಯಿ ಸಂತೆಯಲ್ಲಿ ರೈತರು ವ್ಯಾಪಾರದಲ್ಲಿ ತೊಡಗಿಕೊಂಡಿರುವುದು.