ಸಾರಾಂಶ
ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಚುಕ್ಕೆ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದು 8 ಜನರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸದ್ಯ 3 ಜನರನ್ನು ಬಂಧಿಸಿದ್ದಾರೆ.
- ಅರಣ್ಯ ಅಧಿಕಾರಿಗಳ ಕಾರ್ಯಚರಣೆ । 3ವ್ಯಕ್ತಿಗಳ ಬಂಧನ
ಕನ್ನಡ ಪ್ರಭ ನರಸಿಹಂರಾಜಪುರತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಚುಕ್ಕೆ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದು 8 ಜನರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸದ್ಯ 3 ಜನರನ್ನು ಬಂಧಿಸಿದ್ದಾರೆ.
ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಭಂದಿಗಳು ಖಚಿತ ಮಾಹಿತಿ ಮೇರೆಗೆ ಅರಣ್ಯದಲ್ಲಿ ಹುಡುಕಾಟ ನಡೆಸಿದಾಗ ಜಿಂಕೆ ಮಾಂಸ ಹಾಗೂ ಜಿಂಕೆ ಕೊಂದ 8 ಆರೋಪಿಗಳು ಕಣ್ಣಿಗೆ ಬಿದ್ದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಭಂದಿಗಳು ಆರೋಪಿಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ 5 ಆರೋಪಿಗಳು ಪರಾರಿಯಾಗಿದ್ದು 3 ಆರೋಪಿಗಳು ಸೆರೆ ಸಿಕ್ಕಿದ್ದಾರೆ.ಸೆರೆ ಸಿಕ್ಕ ಆರೋಪಿಗಳನ್ನು ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಬಿಳಾಲುಕೊಪ್ಪ ಗ್ರಾಮದ ಲಕ್ಕುಂದ ಮಂಜುನಾಥ, ಲಕ್ಕುಂದದ ಅಣ್ಣಪ್ಪ ಹಾಗೂ ಬಿಳಾಲುಕೊಪ್ಪ ಗ್ರಾಮದ ಮಂಜುನಾಥ ಎಂದು ಗುರುತಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಉಳಿದ 5 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಅರಣ್ಯ ಇಲಾಖೆಯವರು ಬಲೆ ಬೀಸಿದ್ದಾರೆ. ಸ್ಥಳದಲ್ಲಿದ್ದ ಜಿಂಕೆ ಮಾಂಸ,1 ನಾಡ ಕೋವಿ,1 ಚೀಲ, ಕತ್ತಿ, 3 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಕೊಪ್ಪದ ಡಿ.ಎಪ್.ಓ.ಎಲ್. ನಂದೀಶ್ ಮಾರ್ಗದರ್ಶನದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಎನ್. ಪ್ರವೀಣ ಕುಮಾರ್ ನೇತ್ರತ್ವದಲ್ಲಿ ಅರಣ್ಯ ಇಲಾಖೆಯ ವಿವಿಧ ಶಾಖ ಉಪವಲಯ ಅರಣ್ಯಾಧಿಕಾರಿಗಳಾದ ಅರುಣ ಬಾರಂಗಿ, ಅಕ್ಷತ, ಶ್ರೀನಿವಾಸ್, ಮಾರುತಿ ಮಾಳಿ, ಗಸ್ತು ಅರಣ್ಯ ಪಾಲಕರಾದ ಎಚ್.ಎಂ. ಪ್ರವೀಣ್, ಮಂಜಯ್ಯ,ಸಂಪ್ರೀತ. ಶ್ರೀಕಾಂತ ಭಾಗವಹಿಸಿದ್ದರು.