ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಹಿರಿಯ ವಿತರಕರಿಗೆ ಸನ್ಮಾನ

| Published : Feb 26 2025, 01:03 AM IST

ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಹಿರಿಯ ವಿತರಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಜಿಲ್ಲೆಯ ಹಿರಿಯ ವಿತರಕರಿಗೆ ಕೊಡುವ "ಹಿರಿಯ ಸಾಧಕರು " ಪ್ರಶಸ್ತಿಗೆ ಜಿಲ್ಲೆಯ ಪ್ರತಿ ತಾಲೂಕಿನಿಂದ ಒಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ಒಕ್ಕೂಟವು ತಿಳಿಸಿದೆ. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಸಮ್ಮೇಳನವನ್ನು ಮಾ.೨ರಂದು ಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪತ್ರಿಕಾ ವಿತರಕರನ್ನು ಗುರುತಿಸಿ ಅವರಿಗೆ ಹಿರಿಯ ಸಾಧಕರು ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಜಿಲ್ಲೆಯ ಹಿರಿಯ ವಿತರಕರಿಗೆ ಕೊಡುವ "ಹಿರಿಯ ಸಾಧಕರು " ಪ್ರಶಸ್ತಿಗೆ ಜಿಲ್ಲೆಯ ಪ್ರತಿ ತಾಲೂಕಿನಿಂದ ಒಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ಒಕ್ಕೂಟವು ತಿಳಿಸಿದೆ.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಸಮ್ಮೇಳನವನ್ನು ಮಾ.೨ರಂದು ಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪತ್ರಿಕಾ ವಿತರಕರನ್ನು ಗುರುತಿಸಿ ಅವರಿಗೆ ಹಿರಿಯ ಸಾಧಕರು ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ. ಪ್ರಭಾಕರ್ ನೆರವೇರಿಸಲಿದ್ದು, ಪ್ರಶಸ್ತಿಗೆ ಹಾಸನದ ರಾಮಚಂದ್ರ, ಚನ್ನರಾಯಪಟ್ಟಣ ಗುಂಡಣ್ಣ, ಹೊಳೆನರಸೀಪುರ ರಂಗಸ್ವಾಮಿ, ಅರಕಲಗೂಡು ಎನ್. ಅಣ್ಣಯ್ಯ, ಅರಸೀಕೆರೆ ಕೆ. ಜಿ. ವೆಂಕಟೇಶ್, ಬೇಲೂರು ಮಹಾವೀರ, ಆಲೂರು ಕೆ. ಬಿ. ಕಲ್ಯಾಣ ಕುಮಾರ್, ಸಕಲೇಶಪುರ ಶೇಖ್ ಅಹಮ್ಮದ್ ಆಯ್ಕೆಯಾಗಿದ್ದು, ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕೃತರ ಜೊತೆ ಕುಟುಂಬವನ್ನು ಗೌರವಿಸಲಾಗುವುದು.