ಕನ್ನಡಪ್ರಭ ವಾರ್ತೆ ರಾಮದುರ್ಗ

ಜಿಲ್ಲೆಯ ನೇಕಾರರ ಸೀರೆಗಳಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ನೇಕಾರಿಕೆಯ ಜೊತೆಗೆ ನೇಕಾರರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳೆಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್‌ ಪ್ರೀತಿ ಕಾಮಕರ ಹೇಳಿದರು.ನಗರದ ರಾಧಾಪೂರ ಪೇಟೆಯಲ್ಲಿ ತಾಲೂಕಾಡಳಿತ, ದೇವಾಂಗ ಸಮಾಜ ಹಾಗೂ ನೇಕಾರ ಸಮುದಾಯಗಳ ನೇತೃತ್ವದಲ್ಲಿ ಆಯೋಜಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1047ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿಯೇ ಓರ್ವ ಹಿಂದುಳಿದ ವರ್ಗದ ಸಾಮಾನ್ಯ ಮಹಿಳೆ ಉನ್ನತ ಸ್ಥಾನ ಪಡೆದಿರುವುದು ಇದೇ ಮೊದಲು. ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ತಲುಪಲು ರಾಮದುರ್ಗ ಸಮಾಜ ಬಾಂಧವರ ಆಶೀರ್ವಾದ ನನ್ನ ಮೇಲಿದೆ. ಅಧಿಕಾರ ಶಾಶ್ವತ ಅಲ್ಲ. ಸಿಕ್ಕ ಅವಕಾಶ ಬಳಸಿಕೊಂಡು, ಸಮಾಜ ಸಂಘಟನೆ ಹಾಗೂ ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದು ಸಮಾಜದ ಋಣ ತೀರಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ನಾಗನೂರ ಬಸವಾಶ್ರಮದ ಕಾರ್ಯದರ್ಶಿ ನಿವೇದಿತಾ.ಡಿ.ಪಿ ಮಾತನಾಡಿ, ಕನ್ನಡದ ಮೊಟ್ಟ ಮೊದಲ ವಚನಕಾರ ದೇವರ ದಾಸಿಮಯ್ಯ ಅವರು, ಹೆಣ್ಣು, ಗಂಡು, ಮೇಲು-ಕೀಳು, ಜಾತಿ-ಪಂಥ ಆಚರಣೆಗಳ ಬೇಧಗಳನ್ನು ಗುರುತಿಸಿ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಅನ್ಯಾಯಗಳನ್ನು ಧಿಕ್ಕರಿಸಿದರು. ಅಲ್ಲದೇ, ಅದರ ಬಗ್ಗೆ ವಚನಗಳ ಮೂಲಕ ಎಳೆ ಎಳೆಯಾಗಿ ತೋರಿಸಿದ್ದಾರೆ. ಸುರಪುರ ತಾಲೂಕು ಮುದನೂರಿನಲ್ಲಿ ಬೇಸಾಯ ಹಾಗೂ ನೇಯ್ಗೆಯ ಕಾಯಕದೊಂದಿಗೆ ತನ್ನ ಕಣಜದಲ್ಲಿದ್ದ ಇಳೆಯ ಬೆಳೆಯನ್ನು ಬಳಸಿ, ಜನರಿಗೆ ಹಂಚುವ ಮೂಲಕ ದಾಸೋಹ ಪರಿಕಲ್ಪನೆ ಬಿತ್ತಿದ ಶರಣರಲ್ಲಿ ದೇವರ ದಾಸಿಮಯ್ಯ ಮೊದಲಿಗ ಎಂದು ಹೇಳಿದರು.ಗ್ರೇಡ್-2 ತಹಸೀಲ್ದಾರ್ ಸಂಜಯ್ ಖಾತೇದಾರ, ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಪ್ಪ ಮುರುಡಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗಜಾನನ ಗುಂಜೇರಿ ಸೇರಿ ಹಲವರು ಮಾತನಾಡಿದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವೇದಮೂರ್ತಿ ಶಂಕ್ರಯ್ಯಸ್ವಾಮಿ ದೇವಾಂಗಮಠ, ವೇದಮೂರ್ತಿ ನಿರಂಜನಸ್ವಾಮಿ ದೇವಾಂಗಮಠ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯೆ ರೇಶ್ಮಾ ಕಾಮಕರ, ರಾಜ್ಯ ದೇವಾಂಗ ಸಂಘದ ನಿರ್ದೇಶಕ ಶಿವಾನಂದ ಬಳ್ಳಾರಿ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಸೂಳಿಭಾಂವಿ, ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕು ಅಧ್ಯಕ್ಷ ನಾರಾಯಣ ಹೂಲಿ, ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ಕುಬೇರ ಗರಡಿಮನಿ, ಮುಖಂಡರಾದ ಏಕನಾಥ ಕೊಣ್ಣೂರ, ನೇಮಣ್ಣ ಆರಿ, ಮನೋಹರ ಹೊನ್ನುಂಗರ, ದಾಮೋದರ ರಾಮದುರ್ಗ, ಶ್ರೀಕಾಂತ ಮುಗಳಿ ಸೇರಿದಂತೆ ಸಮಾಜದ ಬಾಂಧವರು ಮುಖಂಡರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಥಮೇಶ ಯಾದವಾಡ ಪ್ರಾರ್ಥಿಸಿದರು. ಪತ್ರಕರ್ತ ರಾಮಚಂದ್ರ ಯಾದವಾಡ ಸ್ವಾಗತಿಸಿದರು. ಶಿಕ್ಷಕ ಎಸ್.ಎಂ ಕಲ್ಲೂರ ಕಾರ್ಯಕ್ರಮ ನಿರೂಪಿಸಿದರು. ವಿನೋದ ಕರದಿನ ವಂದಿಸಿದರು.-----ಕೋಟ್‌ರಾಜ್ಯದಲ್ಲಿಯೇ ಓರ್ವ ಹಿಂದುಳಿದ ವರ್ಗದ ಸಾಮಾನ್ಯ ಮಹಿಳೆ ಉನ್ನತ ಸ್ಥಾನ ಪಡೆದಿರುವುದು ಇದೇ ಮೊದಲು. ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ತಲುಪಲು ರಾಮದುರ್ಗ ಸಮಾಜ ಬಾಂಧವರ ಆಶೀರ್ವಾದ ನನ್ನ ಮೇಲಿದೆ. ಅಧಿಕಾರ ಶಾಶ್ವತ ಅಲ್ಲ. ಸಿಕ್ಕ ಅವಕಾಶ ಬಳಸಿಕೊಂಡು, ಸಮಾಜ ಸಂಘಟನೆ ಹಾಗೂ ಸಾಮಾಜಿಕ ಯೋಜನೆಗಳನ್ನು ಜಾರಿ ಮೂಲಕ ಸಮಾಜದ ಋಣ ತೀರಿಸುವೆ.ಪ್ರೀತಿ ಕಾಮಕರ, ಪಾಲಿಕೆ