ಕನ್ನಡಪ್ರಭ ವಾರ್ತೆ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ಅಂಗವಾಗಿ, ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ರವಿವಾರ ಲಕ ಪುಷ್ಪ ಜಿಲ್ಲಾರ್ಚನೆ, ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಶಿವದೀಕ್ಷೆಯಂತಹ ಮಹತ್ವದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.ಪಾಳಾದ ಶ್ರೀ ಡಾ.ಗುರುಲಿಂಗ ಶಿವಾಚಾರ್ಯರು ಮತ್ತು ಪರ್ವತೆಶ್ವರ್ ಶಿವಾಚಾರ್ಯರು ಬೆಳಗುಂಪ ಶ್ರೀಗಳ ನೇತೃತ್ವದಲ್ಲಿ ನಸುಕಿನ ಜಾವ 5 ಗಂಟೆಯಿಂದಲೇ ಶರಣರ ಕರ್ತೃ ಗದ್ದುಗೆಗೆ ಬಿಲ್ವಾರ್ಚನೆ ಮತ್ತು ವಿಶೇಷ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 12ಕ್ಕೆ ಪೀಠಾಧಿಪತಿ ದೊಡ್ಡಪ ಅಪ್ಪ ಮತ್ತು ಮಾತೋಶ್ರೀ ಡಾ. ದಾಕ್ಷಾಯಣಿ ಅಪ್ಪ ಸಮ್ಮುಖದಲ್ಲಿ ಮಹಾ ಮಂಗಳಾರತಿ ನೆರವೇರಿತು. ಅನುಭವ ಮಂಟಪದಲ್ಲಿ ಸುಮಾರು 1000ಕ್ಕೂ ಭಕ್ತರು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡರು. ಆಸಕ್ತ ಶಿವಭಕ್ತರಿಗೆ ಶಿವದೀಕ್ಷೆ ನೀಡಲಾಯಿತು.ಮುಖಂಡ ಶ್ರೀಧರ ಎಂ.ನಾಗನಹಳ್ಳಿ, ಉಪಾಧ್ಯಕ್ಷ ಕಲ್ಯಾಣರಾವ ಪಾಟೀಲ್ ಕಣ್ಣಿ, ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವಂಕರ್, ಕಾರ್ಯದರ್ಶಿ ಮಹೇಶ್ಚಂದ್ರ ಪಾಟೀಲ್ ಕಟ್ಟೆ, ಪ್ರಮುಖರಾದ ಗುರುರಾಜ ಅಂಬಾಡಿ, ಗುರುರಾಜ್ ಸುಂಟಿನೂರ, ಪ್ರಜ್ವಲ್ ಕೊರಳ್ಳಿ, ಆಣ್ಣಾರಾಯಹಿರೇಗೌಡ, ಆಕಾಶ ಕುಲಕರ್ಣಿ, ಸಚಿನ್, ಶ್ರೀಕಾಂತ ಬಿರಾದಾರ, ಮಹೇಶ ಬಾಳಿ, ವೀರೇಶ್ ಬೇರನ್ ಇತರರಿದ್ದರು.ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ಅಂಗವಾಗಿ ಶ್ರೀ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ 5ನೇ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ, ಇಷ್ಟಲಿಂಗ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.ಚಿ.ದೊಡ್ಡಪ್ಪ ಅಪ್ಪ ಜನ್ಮದಿನದ ನಿಮಿತ್ತ ದೇವಸ್ಥಾನದ ಆವರಣದಲ್ಲಿರುವ ಡಾ.ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು. ಸುಮಾರು 1000ಕ್ಕೂ ಹೆಚ್ಚಿನ ಜನರು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು. ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ, ಶ್ರೀ ದೊಡ್ಡಪ್ಪ ಅಪ್ಪ ಇಷ್ಟಲಿಂಗ ಪೂಜೆಯಲ್ಲಿ ನೇತೃತ್ವ ವಹಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ, ಬಸವರಾಜ ದೇಶಮುಖ, ಅಲ್ಲಮಪ್ರಭು ದೇಶಮುಖ, ಪ್ರಮುಖರಾದ ಸೇರಿ ಹಲವರು ಭಾಗವಹಿಸಿದ್ದರು. ಇಷ್ಟಲಿಂಗ ಪೂಜೆಗೆ ಆಗಮಿಸಿದ ಭಕ್ತರಿಗೆ ವೇದಿಕೆಯಿಂದಲೇ ಇಷ್ಟಲಿಂಗ, ವಿಭೂತಿ, ಬಿಲ್ವಪತ್ರಿ, ಪುಷ್ಪ, ದೂಪ ಸೇರಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ, ಆಸಕ್ತ ಶಿವಭಕ್ತರಿಗೆ ಶಿವದಿ, ಲಿಂಗದೀಕ್ಷೆ ನೀಡಲಾಯಿತು.ವೀರಶೈವ ಲಿಂಗಾಯತ ಯುವ ಪೀಳಿಗೆಗೆ ಲಿಂಗ ಪೂಜಾ ಪದ್ಧತಿ, ಭಸ್ಮಧಾರಣೆ, ಲಿಂಗಧಾರಣೆಯ ಮಹತ್ವ, ಅಷ್ಟಾವರಣಗಳ ಅರಿವು ನೀಡುವುದಕ್ಕಾಗಿ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ನೆರವೇರಿದೆ ಎಂದು ಯುವ ಮುಖಂಡ ನಾಗನಹಳ್ಳಿ ಶ್ರೀಧರ್ ಮಲ್ಲಿನಾಥ್ ಹೇಳಿದರು.ಸಂಸ್ಥಾನಕ್ಕೆ ಬೆಳಗ್ಗೆಯಿಂದಲೇ ಆಗಮಿಸಿದ ಸಾವಿರಾರು ಭಕ್ತರು, ಜನಪ್ರತಿನಿಧಿಗಳು ಅಪ್ಪಾಜಿಯವರಿಗೆ ಜನ್ಮದಿನದ ಶುಭಾಶಯ ಕೋರಿ ಆಶೀರ್ವಾದ ಪಡೆದರು. ಪೂಜ್ಯರಿಂದ ಲಿಂಗಪೂಜೆ, ಸಮಾಜದ ಆಚರಣೆಗಳ ಮಹತ್ವ, ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಗಿದೆ. ಶರಣ ಸಂಸ್ಥಾನದ ಆಶೀರ್ವಾದದಿಂದ ಧರ್ಮಕಾರ್ಯಕ್ಕೆ ಶಕ್ತಿ ಬರುತ್ತಿದೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಉಪಾಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಕಣ್ಣಿ ಹೇಳಿದರು.