ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು:
ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಷಣ್ಮುಖ ಗೋವಿಂದರಾಜ್ ನಟನೆಯ ’ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಹಾಡಿನ ಚಿತ್ರೀಕರಣ ಮಲ್ಲಂದೂರಿನ ಸುತ್ತಮುತ್ತಲು ನಡೆಯಿತು.ಎಂ.ಜಿ.ಪಿ ಎಕ್ಸ್. ಎಂಟರ್ ಪ್ರೈಸಸ್‌ಯಡಿ ವಿ. ಮಾದೇಶ್ ನಿರ್ಮಾಣದ ಚಿತ್ರದಲ್ಲಿ ತಾಯಿ ಮಗನ ಭಾಂದವ್ಯದ ಕಥಾನಕ ವಿದೆ. ಮಲೆನಾಡಿನ ವಾತಾವರಣ ಆಧಾರಿತ ಸಿನಿಮಾ ಇದಾಗಿದ್ದು ಈಗಾಗಲೇ ಬೆಂಗಳೂರು ಉಡುಪಿಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ ಮುಂದಿನ 15 ದಿನಗಳು ಚಿಕ್ಕಮಗಳೂರು ಸುತ್ತಮುತ್ತ ಮೂರನೇ ಹಂತದ ಶೂಟಿಂಗ್ ನಡೆಸುತ್ತಿದೆ. ಚಿತ್ರಕ್ಕೆ ಕಡಬ ಅಶೋಕ್ ನಿರ್ದೇಶನವಿದ್ದು, ಸಹ ನಿರ್ದೇಶಕಿಯಾಗಿ ಶ್ವೇತಾ, ಛಾಯಾಗ್ರಾಹಣ ಸಿದ್ದು ನಿರ್ವಹಿಸಿದ್ದು ವಿಶೇಷ ಪಾತ್ರದಲ್ಲಿ ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಚಿಕ್ಕಮಗಳೂರಿನ ಹಿರಿಯ ಛಾಯಾಗ್ರಾಹಕ ಎ.ಎನ್. ಮೂರ್ತಿ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದು ಊರಿನ ಪಟೇಲರ ಪಾತ್ರದಲ್ಲಿ ನಟಿಸಿರುವ ಮೂರ್ತಿ ಖಡಕ್ ಡೈಲಾಗ್ ಗಳೊಂದಿಗೆ ಚಿತ್ರದಲ್ಲಿ ಮಿಂಚಲಿದ್ದಾರೆ. ಹಿರಿಯ ನಟ ರಾಮಕೃಷ್ಣ, ಭವ್ಯ, ಎಂ.ಎಸ್. ಉಮೇಶ್, ಸಂದೀಪ್ ಮಲಾನಿ, ಮೂಗು ಸುರೇಶ್, ಡಿ. ಕೌಶಿಕ್, ಮುತ್ತುರಾಮ್ ತನುಶ್ರೀ ಸೇರಿದಂತೆ ಹಲವು ಕಲಾವಿದರು ’ನಿಂಬಿಯಾ ಬನಾದ ಮ್ಯಾಗ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಣ್ಣಾವ್ರ ಮೊದಲ ಮಗಳು ಲಕ್ಷ್ಮೀ ಹಿರಿಯ ಪುತ್ರರಾದ ಷಣ್ಮುಖ ಗೋವಿಂದ್ ರಾಜ್ ತಾಯಿಯ ಪಾತ್ರದಲ್ಲಿ ನಟಿ ಸಂಗೀತ ಕಾಣಿಸಿಕೊಳ್ಳಲಿದ್ದಾರೆ.
ಪೋಟೋ ಪೈಲ್ ನೇಮ್ 1 ಕೆಸಿಕೆಎಂ 5ಡಾ. ರಾಜ್ ಕುಟುಂಬದ ಷಣ್ಮುಖ ಗೋವಿಂದರಾಜ್ ನಟನೆಯ ’ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಹಾಡಿನ ಚಿತ್ರೀಕರಣ ಮಲ್ಲಂದೂರಿನ ಸುತ್ತಮುತ್ತಲು ನಡೆಯಿತು.