ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣ ಹಲವಾರು ವರ್ಷಗಳಿಂದ ಅಭಿವೃದ್ಧಿಗೊಳ್ಳದೆ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದ್ದು, ಇದೀಗ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ
ಕನ್ನಡಪ್ರಭ ವಾರ್ತೆ, ಹನೂರು
ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣ ಹಲವಾರು ವರ್ಷಗಳಿಂದ ಅಭಿವೃದ್ಧಿಗೊಳ್ಳದೆ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದ್ದು, ಇದೀಗ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ.ಗಿಡಗಂಟಿಗಳು, ಸರಿಸೃಪಗಳ ಅವಾಸಸ್ಥಾನವಾಗಿರುವ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಿ ವರ್ಷಪೂರ್ತಿ ಕ್ರೀಡಾ ಚಟುವಟಿಕೆಗಳು ನಡೆಸಲು ಯೋಗ್ಯವಾದ ಕ್ರೀಡಾಂಗಣ ರೂಪಿಸಲು ಕೆಲವೇ ದಿನಗಳಲ್ಲಿ ಶಾಸಕರು ಶಂಕುಸ್ಥಾಪನೆ ನೆರವೇರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಕ್ರೀಡಾಸಕ್ತರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಕ್ರೀಡಾಂಗಣ ಅಭಿವೃದ್ಧಿಯಾದರೆ ಬ್ಯಾಡ್ಮಿಂಟನ್ , ಪುಟ್ ಬಾಲ್ , ಲಾಂಗ್ ಜಂಪ್- ಹೈ ಜಂಪ್ ಗಳು ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಈ ಕ್ರೀಡಾಂಗಣ ಸಜ್ಜುಗೊಳ್ಳಲು ಮಾಸ್ಟರ್ ಪ್ಲಾನ್ ಸಿದ್ಧಯಾಗಿದೆ.ಮಾಸ್ಟರ್ ಪ್ಲಾನ್ ನಲ್ಲಿ ಏನಿದೆ:
ಕ್ರೀಡಾ ಚಟುವಟಿಕೆ ವೀಕ್ಷಣೆಗೆ ವೀಕ್ಷಕರ ಗ್ಯಾಲರಿ, ಬ್ಯಾಡ್ಮಿಂಟನ್ ಕೋರ್ಟ್, ಬಾಸ್ಕೆಟ್‌ಬಾಲ್ ಕೋರ್ಟ್, ಫುಟ್ಬಾಲ್ ಕೋರ್ಟ್, ಸಾರ್ವಜನಿಕ ಶೌಚಾಲಯ, ಬೈಕ್ ಪಾರ್ಕಿಂಗ್, ಕಾರು ಹಾಗೂ ಭಾರೀ ವಾಹನಗಳ ಪಾರ್ಕಿಂಗ್, 400 ಮೀ. ಓಟದ ಟ್ರ್ಯಾಕ್, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಪ್ಲಾನ್ ರೆಡಿಯಾಗಿದೆ.ತಾಲೂಕು ಕೇಂದ್ರದಲ್ಲಿರು ಮಲೆ ಮಹದೇಶ್ವರ ಕ್ರೀಡಾಂಗಣವು ಮುಖ್ಯ ರಸ್ತೆಯಲ್ಲಿ ಇದೆ. ಆದರೆ, ಮೂಲಸೌಕರ್ಯ ಕೊರತೆ ಹಿನ್ನಲೆ ಕ್ರೀಡಾಸಕ್ತರು ಆಟೋಟ ಸ್ಪರ್ಧೆ ಆಯೋಜನೆಗೆ, ಕ್ರೀಡಾಕೂಟ ನಡೆಸಲು ಪರದಾಡುವ ಸ್ಥಿತಿ ಇತ್ತು. ರಾಜಕೀಯ ಕಾರ್ಯಕ್ರಮಗಳು ನಡೆದಾಗಲೂ ಕೂಡ ಕ್ರೀಡಾಂಗಣದ ಅವ್ಯವಸ್ಥೆಗೆ ಆಯೋಜಕರು ರೋಸಿ ಹೋಗುತ್ತಿದ್ದರು. ಈಗ ಕ್ರೀಡಾಂಗಣಕ್ಕೆ ಶುಕ್ರದೆಸೆ ಆರಂಭಗೊಂಡಿದ್ದು ಕೆಲವೇ ತಿಂಗಳುಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ರೆಡಿಯಾಗುವ ನಿರೀಕ್ಷೆ ಗರಿಗೆದರಿದೆ...................
ಕೋಟ್....ಹನೂರು ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಪಡಿಸಲು ಕ್ರೀಡಾಪಟುಗಳು ಮನವಿ ಮಾಡಿದ್ದರು. ಅಧಿಕಾರಿಗಳ ಜೊತೆ ಸಾಕಷ್ಟು ಸಭೆ ಮಾಡಿ ಮಾಸ್ಟರ್ ಪ್ಲಾನ್ ಸಿದ್ಧ ಮಾಡಿಸಲಾಗಿದೆ. ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು, ತಾಲೂಕು ಕ್ರೀಡಾಂಗಣ ಹಲವು ಪ್ರತಿಭೆಗಳಿಗೆ ಸಹಾಯಕವಾಗಲಿದೆ.
ಎಂ.ಆರ್. ಮಂಜುನಾಥ್, ಶಾಸಕ...........
ಕೋಟ್....ಹನೂರಿನ ಮಲೆ ಮಹದೇಶ್ವರ ಕ್ರೀಡಾಂಗಣ ಅಭಿವೃದ್ಧಿ ಆಗಬೇಕೆನ್ನುವುದು ಸಾಕಷ್ಟು ವರ್ಷಗಳ ಬೇಡಿಕೆ. ಶೀಘ್ರವೇ ಕ್ರೀಡಾಂಗಣ ಅಭಿವೃದ್ಧಿ ಮಾಡಿದರೇ ನೂರಾರು ಕ್ರೀಡಾಪಟುಗಳು ಅಭ್ಯಾಸ ನಡೆಸಲು ನೆರವಾಗಲಿದೆ.
ಮಹೇಶ್, ಕ್ರೀಡಾಪಟು-----
14ಸಿಎಚ್ಎನ್16 - ಹನೂರು ಮಲೆ ಮಹದೇಶ್ವರ ಕ್ರೀಡಾಂಗಣ.----------------------
14ಸಿಎಚ್ಎನ್17- ಹನೂರು ಮಲೆ ಮಹದೇಶ್ವರ ಕ್ರೀಡಾಂಗಣದ ಮಾಸ್ಟರ್ ಪ್ಲಾನ್.------ಮಂಜುನಾಥ್, ಶಾಸಕ