ಕರ್ನಾಟಕ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Aug 13 2025, 12:30 AM IST

ಸಾರಾಂಶ

ಕರ್ನಾಟಕ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಅಂತ್ಯಂತ ಕೆಳ ಹಂತದಿಂದ ಬೆಳೆದು ರಾಷ್ಟ್ರವೇ ಮೆಚ್ಚುವಂತಹ ಮಾದರಿ ಆಡಳಿತ ನೀಡಿದಂತಹ ಮೇರು ವ್ಯಕ್ತಿತ್ವ. ಸದಾ ನೊಂದವರ, ದಲಿತ ದಮನಿತರ, ಹಿಂದುಳಿದವರ, ಮಹಿಳೆಯರ, ಆರ್ಥಿಕ ದುರ್ಬಲರ ಪರವಾಗಿ ನೂರಾರು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದಂತಹ ಅನುಭವಿ ರಾಜಕಾರಣಿ.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಅಂಗವಾಗಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರ ಅಭಿಮಾನಿಗಳ ಬಳಗದಿಂದ ನಗರದ ಶ್ರೀರಾಂಪುರದ ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್‌ನ ವಿಶೇಷ ಮಕ್ಕಳ ಶಾಲೆಯ ಶ್ರೇಯೋಭಿವೃದ್ಧಿಗಾಗಿ 50 ಸಾವಿರ ರು. ಆರ್ಥಿಕ ಸಹಾಯ ಮತ್ತು ಸಿಹಿ ವಿತರಿಸಲಾಯಿತು.

ಎಂ.ಕೆ ಸೋಮಶೇಖರ್ ಅಭಿಮಾನಿಗಳ ಬಳಗ, ಶಾಸಕ ಎಂ.ಕೆ. ಸೋಮಶೇಖರ್, ಗುತ್ತಿಗೆದಾರರಾದ ಅಂಬಿಕಾ ಶಿವರಾಜು, ಆಶ್ರಯ ಸಮಿತಿ ಮಾಜಿ ಸದಸ್ಯ ಶಿವಕುಮಾರ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಜೆ. ವಿನಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಶಿಂಷಾ ದಿನೇಶ್, ಭಾಗ್ಯ ಚಂದ್ರಶೇಖರ್ ಆರ್ಥಿಕ ಸಹಾಯ ನೀಡಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಶ್ರೀರಾಂಪುರದ ನವಚೇತನ ಬಸವೇಶ್ವರ ಟ್ರಸ್ಟ್ ವಿಶೇಷ ಶಾಲೆಯ ಅಧ್ಯಕ್ಷ ಮಾಕಿ ಮರೀಗೌಡ ಮತ್ತು ಅವರ ಸಿಬ್ಬಂದಿ ಸೇವೆ ನಿಜಕ್ಕೂ ಶ್ಲಾಘನೀಯ. ಇವತ್ತಿನ ಕಾಲಘಟ್ಟದಲ್ಲಿ ಒಂದು ಮಗುವನ್ನು ಸಾಕುವುದೇ ಕಷ್ಟ ಎನ್ನುವಾಗ 60ಕ್ಕೂ ಹೆಚ್ಚು ವಿಶೇಷ ಮಕ್ಕಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಮಾನವೀಯ ಸೇವೆ ಮಾಡುತ್ತಿರುವುದು ನಿಜವಾದ ದೇವರ ಸೇವೆ. ಬಡವರು, ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿ ಹೆಚ್ಚಾಗಿದ್ದು, ತಮ್ಮ ಕೆಲಸ ತಾವೇ ಮಾಡಿಕೊಳ್ಳಲಾಗದಂತಹ ಅಸಹಾಯಕ ಸ್ಥಿತಿಯಲ್ಲಿರುವ ಮಕ್ಕಳನ್ನು ನೋಡಿದಾಗ ಮನ ಕಲಕುತ್ತದೆ. ಅಂತಹ ಮಕ್ಕಳ ಸೇವೆ ಮತ್ತು ವಿದ್ಯಾಭ್ಯಾಸ ಕೊಡುತ್ತಿರುವುದು ಅರ್ಥಪೂರ್ಣ ಸೇವೆ, ಎಲ್ಲ ಶಿಕ್ಷಕರು, ಸಿಬ್ಬಂದಿಗೆ ಸಂಸ್ಥೆಯ ಅಧ್ಯಕ್ಷರಾದ ಮಾಕಿ ಮರಿಗೌಡ ಅವರಿಗೆ ವಿಶೇಷ ಅಭಿನಂದನೆಗಳು ಎಂದರು.

ಕರ್ನಾಟಕ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಅಂತ್ಯಂತ ಕೆಳ ಹಂತದಿಂದ ಬೆಳೆದು ರಾಷ್ಟ್ರವೇ ಮೆಚ್ಚುವಂತಹ ಮಾದರಿ ಆಡಳಿತ ನೀಡಿದಂತಹ ಮೇರು ವ್ಯಕ್ತಿತ್ವ. ಸದಾ ನೊಂದವರ, ದಲಿತ ದಮನಿತರ, ಹಿಂದುಳಿದವರ, ಮಹಿಳೆಯರ, ಆರ್ಥಿಕ ದುರ್ಬಲರ ಪರವಾಗಿ ನೂರಾರು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದಂತಹ ಅನುಭವಿ ರಾಜಕಾರಣಿ. ತಮ್ಮ ರಾಜಕೀಯ ಜೀವನದಲ್ಲಿ ಎಂದು ಸಹ ಯಾವುದೇ ಮುಲಾಜಿಗೆ ಒಳಗಾಗದೇ ಕಪ್ಪು ಚುಕ್ಕೆ ಇಲ್ಲದೇ ಶುದ್ಧ ಮತ್ತು ಶ್ರೇಷ್ಠ ಅಧಿಕಾರ ನೆಡೆಸಿದ ಸಮರ್ಥ ಮುಖ್ಯಮಂತ್ರಿ. ಅಂತಹ ಸಾಮಾಜಿಕ ನ್ಯಾಯದ ಹರಿಕಾರ, ಸಮ ಸಮಾಜದ ಆಶಯಗಳನ್ನು, ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆ ಮೈಗೂಡಿಸಿಕೊಂಡು ತಮ್ಮ ರಾಜಕೀಯ ಚಾಣಕ್ಷತನದಿಂದಲೇ ಜನಪ್ರಿಯತೆ ಗಳಿಸಿದ ನಾಯಕ. ಅಂತಹ ಮಹಾನಾಯಕರ ಹುಟ್ಟುಹಬ್ಬದ ಹಿನ್ನೆಲೆ ನಾವು ಅವರ ದಾರಿಯನ್ನು ಅನುಸರಿಸಬೇಕಿದೆ.

ಅವರ ಆಡಳಿತ ವೈಖರಿ, ಆರ್ಥಿಕ ಶಿಸ್ತು, ಸಂಘಟನೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಅದರ ಹಿನ್ನೆಲೆ ಇಂದು ಶ್ರೀರಾಂಪುರದ ಶ್ರೀ ಬಸವೇಶ್ವರ ನವಚೇತನ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಆರ್ಥಿಕ ಸಹಾಯ ಮಾಡುವ ಮೂಲಕ ಮಕ್ಕಳಿಗೆ ಸಿಹಿ ವಿತರಣೆ ಮಾಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸಲು ನಾವಿಂದು ಸೇರಿದ್ದೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ಜೋಗಿ ಮಹೇಶ್, ಮುಖಂಡರಾದ ರವಿಶಂಕರ್, ವಿಜಯ್ ಕುಮಾರ್, ವಿಶ್ವನಾಥ್, ಆಶ್ರಯ ಸಮಿತಿ ಮಾಜಿ ಸದಸ್ಯ ಶಿವಕುಮಾರ್, ಮಂಜುನಾಥ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ನಗರಪಾಲಿಕೆ ಮಾಜಿ ಸದಸ್ಯ ಆರ್.ಎಚ್. ಕುಮಾರ್, ಮುಖಂಡರಾದ ವೀಣಾ, ಲತಾ ಮೋಹನ್, ಶಂಕರ್ ಬಾಸ್, ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ಕುಮಾರ್, ಭಾಗ್ಯ ಚಂದ್ರಶೇಖರ್, ಮಧುರಾಜ್, ಗಣೇಶ್, ಯುವ ಕಾಂಗ್ರೆಸ್ ರಾಕೇಶ್, ನಾಸೀರ್ ಇದ್ದರು.