ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಹಿನ್ನಲೆಯುಳ್ಳ ಲಕ್ಷಾಪತಿ ಹಾಲೇವಾಡಿ ಮಠದಲ್ಲಿ ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವ, ರೇಣುಕಾಚಾರ್ಯರ ಯುಗಮಾನೋತ್ಸವ, ಮಠದ ವಂಶಜರ ಸ್ಮರಣೆ, ಗದ್ದುಗೆಗಳ ಅನಾವರಣ ಹಾಗೂ ಧರ್ಮಜಾಗೃತಿ ಸಮಾವೇಶ ಮೇ ೭ರಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಶ್ರೀಮಠದ ಡಾ. ಎಸ್.ಜಿ. ಹಾಲೇವಾಡಿಮಠ ತಿಳಿಸಿದರು.ಪಟ್ಟಣದ ಲಿಂ. ವೀರಗಂಗಾಧರ ಕಲ್ಯಾಣಮಂಟಪದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮತ್ತು ಜಿ.ಎಂ. ಮಹಾಂತಶೆಟ್ಟರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಅಂದು ಬೆಳಗ್ಗೆ ೯ಕ್ಕೆ ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಲಿದೆ. ಮೇ 7ರಂದು ಬೆಳಗ್ಗೆ ೧೧ಕ್ಕೆ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಿನ್ನೆಲೆ ರೇಣುಕರ ಮಂಗಲ ಮಹಾಮೂರ್ತಿ ಮತ್ತು ಜಗಜ್ಯೋತಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆಯು ಹಾಲೇವಾಡಿಮಠದಿಂದ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಸಕಲ ವಾದ್ಯಮೇಳದೊಂದಿಗೆ ನೆರವೇರಲಿದೆ. ಸಂಜೆ ೪ಕ್ಕೆ ಪಟ್ಟಣದ ಸೋಮೇಶ್ವರ ತೇರಿನ ಮನೆ ಪ್ರಾಂಗಣದಲ್ಲಿ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ. ನೇತೃತ್ವವನ್ನು ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಸಮ್ಮುಖವನ್ನು ನೊಣವಿನಕೆರೆಯ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿ ಶಿವಾಚಾರ್ಯರು, ಬನ್ನಿಕೊಪ್ಪ, ಗಂಜಿಗಟ್ಟಿ, ಸಿದ್ದರಬೆಟ್ಟ, ಕರೇವಾಡಿಮಠ ಸೇರಿ ವಿವಿಧ ಮಠಾಧೀಶರು ಉಪಸ್ಥಿತರಿರುವರು.
ಅಧ್ಯಕ್ಷತೆಯನ್ನು ಶಾಸಕ ಡಾ. ಚಂದ್ರು ಲಮಾಣಿ ವಹಿಸುವರು. ಉದ್ಘಾಟನೆಯನ್ನು ಸಂಸದ ಬಸವರಾಜ ಬೊಮ್ಮಾಯಿ ನೆರವೇರಿಸುವರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಭಾವಚಿತ್ರ ಬಿಡುಗಡೆಗೊಳಿಸುವರು. ಡಾ. ಸಿದ್ದಲಿಂಗೇಶ ಸಜ್ಜನಶೆಟ್ಟರ ಉಪನ್ಯಾಸ ನೀಡುವರು. ತಾಲೂಕಿನ ಶಾಸಕರು ಮಾಜಿ ಶಾಸಕರು, ಗಣ್ಯರು, ಹಿರಿಯರು, ಭಕ್ತರು ಭಾಗವಹಿಸಿಲಿದ್ದಾರೆ ಎಂದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಲಕ್ಷ್ಮೇಶ್ವರದ ಸೊಪ್ಪಿನಕೇರಿ ಓಣಿಯ ಹಾಲೇವಾಡಿಮಠ ಮತ್ತು ಲಿಂ. ವೀರಗಂಗಾಧರ ಜಗದ್ಗುರುಗಳಿಗೆ ಅವಿನಾಭಾವ ಸಂಬಂಧವಿದೆ. ಹಾಲೇವಾಡಿಮಠದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಜತೆಗೆ ಬಸವಣ್ಣನವರ ಜಯಂತ್ಯುತ್ಸವ ನಡೆಸುತ್ತಿರುವುದು ಶ್ಲಾಘನೀಯ ಎಂದರು.ಪೂರ್ವಭಾವಿ ಸಭೆಯಲ್ಲಿ ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಆನಂದ ಮೆಕ್ಕಿ, ಬಂಗಾರೆಪ್ಪ ಮುಳಗುಂದ, ಬಸವರಾಜ ಮೆಣಸಿನಕಾಯಿ, ರುದ್ರಮುನಿ ಘಂಟಾಮಠ, ಅಶೋಕ ಬಿಸೆರೊಟ್ಟಿ, ಶಿವಯೋಗಿ ಅಂಕಲಕೋಟಿ, ಗುರುಶಾಂತಯ್ಯ ಬಾಳೇಹಳ್ಳಿಮಠ, ವೀರಭದ್ರಯ್ಯ ಹಿರೇಮಠ ಸೇರಿ ಅನೇಕರಿದ್ದರು.ಮೇ ೭ರಂದು ಲಕ್ಷ್ಮೇಶ್ವರದಲ್ಲಿ ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವ
ಅಂದು ಬೆಳಗ್ಗೆ ೯ಕ್ಕೆ ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಲಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.