ನವಲಗುಂದ:
ಎಸ್‌ಐಆರ್ ಹೆಸರಲ್ಲಿ ಕೇಂದ್ರ ಸರ್ಕಾರವೂ ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಹುನ್ನಾರ ನಡೆಸುತ್ತಿದೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಮಾಡಿರುವುದು ಕಣ್ಮುಂದೆ ಇದೆ. ಆದಕಾರಣ ಎಸ್‌ಐಆರ್ ನಡೆಸುವ ವೇಳೆ ಕಾಂಗ್ರೆಸ್ ಬಿಎಲ್‌ಎಗಳು ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.ಪಟ್ಟಣದಲ್ಲಿ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ಬಿ.ಎಲ್.ಎ.-1 ಮತ್ತು ಬಿ.ಎಲ್.ಎ.-2 ಗಳಿಗೆ ಮತದಾರರ ಪಟ್ಟಿ ಪರೀಷ್ಕರಣೆ- 2026 (SIR) ಕುರಿತು ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿವಿಧ ರಾಜ್ಯಗಳಲ್ಲಿ ಎಸ್ಐಆರ್ ಮೂಲಕವೇ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಿಸಿದ ಉದಾಹರಣೆಗಳು ಸಾಕಷ್ಟಿವೆ. ಆದಕಾರಣ ಕಾಂಗ್ರೆಸ್ ಮತಗಳು ಡಿಲೀಟ್ ಆಗದಂತೆ ನೋಡಿಕೊಳ್ಳಬೇಕೆಂದರು.ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿನ ಅರ್ಹ ಮತದಾರರನ್ನು ಎಸ್‌ಐಆರ್‌ನಿಂದಾಗಿ ಡಿಲೀಟ್ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮುಂದಿದೆ. ಸಂವಿಧಾನದ ಅಡಿಪಾಯವನ್ನೇ ಕೆಡವಿ ಹಾಕುವ ಪ್ರಜಾ ತಾಂತ್ರಿಕ ಪ್ರಕ್ರಿಯೆಯನ್ನೇ ಅಪಹರಣ ಮಾಡುವ 12 ಕೋಟಿಗಿಂತ ಹೆಚ್ಚು ಜನರನ್ನು ಅನಾಥರನ್ನಾಗಿಸುವ ದೊಡ್ಡ ಸಂಚು ನಡೆದಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ,, ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ ಮಾತನಾಡಿದರು. ಮತದಾರರ ಪಟ್ಟಿ ಪರೀಕ್ಷಣೆ ಕುರಿತು ತರಬೇತಿದಾರ ಮುತ್ತುರಾಜ್ ಹಾಗೂ ಸಿ.ಜಿ. ಪಾಟೀಲ ತರಬೇತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಮಂಜುನಾಥ ಮಾಯಣ್ಣವರ, ವಿಕಾಸ್ ತದ್ದೇವಾಡಿ, ಸದುಗೌಡ ಪಾಟೀಲ ವೇದಿಕೆಯಲ್ಲಿದ್ದರು.