ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್, ಸೋಕರ್ ಯುನೈಟೆಡ್ ಅಮ್ಮತಿ ರನ್ನರ್ಸ್

| Published : Nov 16 2025, 02:45 AM IST

ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್, ಸೋಕರ್ ಯುನೈಟೆಡ್ ಅಮ್ಮತಿ ರನ್ನರ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಮೊಗೇರ ಫುಟ್ಬಾಲ್‌ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯಲ್ಲಿ ಒಟ್ಟು 7 ತಂಡಗಳು ಚಾಂಪಿಯನ್‌ ಟ್ರೋಫಿಗಾಗಿ ಸೆಣಸಾಡಿದವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಎಸ್ ಕೆ ಎಫ್ ಸಿ ಮರಗೋಡು ಇವರ ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸೋಕರ್ ಯುನೈಟೆಡ್ ಅಮ್ಮತಿ ರನ್ನರ್ಸ್ ಸ್ಥಾನ ಕ್ಕೆ ತೃಪ್ತಿ ಪಟ್ಟು ಕೊಂಡಿತು, ಹಾಗೆಯೆ 3 ಹಾಗೂ 4 ಸ್ಥಾನವನ್ನು ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ತಂಡ ಹಾಗೂ ಎಂ, ಎಫ್, ಸಿ ಅಮ್ಮತಿ ತಂಡ ಪಡೆದುಕೊಂಡಿತು.

ನ. 8 ಹಾಗೂ 9 ರಂದು ಮರಗೋಡುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಸ್ ಕೆ ಎಫ್ ಸಿ ಮರಗೋಡು ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ಏಳು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ಹಾಗೂ ಸೋಕರ್ ಯುನೈಟೆಡ್ ಅಮ್ಮತಿ ತಂಡದ ನಡುವೆ ನಡೆದ ರೋಚಕ ಹಣಹಣಿ ಯಲ್ಲಿ 2 ತಂಡವು ಪೂರ್ಣ ಅವಧಿಯಲ್ಲಿ 1-1 ಗೋಲ್ ಗಳ ಸಮಬಲ ಸಾಧಿಸಿ ಪೆನಲ್ಟಿಯತ್ತ ಸಾಗಿತು, ಪೆನಲ್ಟಿ ಶೂಟೌಟ್ ನಲ್ಲಿ ಸೋಕರ್ ಯುನೈಟೆಡ್ ಅಮ್ಮತಿ ತಂಡವು 4-2 ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.

ರೋಚಕ ಹಣಾಹಣಿ:

ದ್ವಿತೀಯ ಸೆಮಿ ಫೈನಲ್ ಪಂದ್ಯವು ಅತಿಥೇಯ ಎಸ್ ಕೆ ಎಫ್ ಸಿ ಹಾಗೂ ಎಂ, ಎಫ್ ಸಿ ತಂಡದ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಎಸ್ ಕೆ ಎಫ್ ಸಿ ,ತಂಡವು 4-0 ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.

ಫೈನಲ್ ಪಂದ್ಯವು ಅತಿಥೇಯ ಎಸ್ ಕೆ ಎಫ್ ಸಿ ಹಾಗೂ ಸೋಕರ್ ಯುನೈಟೆಡ್ ಅಮ್ಮತಿ, ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಸ್ ಕೆ ಎಫ್ ಸಿ ಮರಗೋಡು ತಂಡವು ಸೋಕರ್ ಯುನೈಟೆಡ್ ಅಮ್ಮತಿ, ವಿರುದ್ಧ 2-1ಅಂತರದಲ್ಲಿ ಗೆದ್ದು ಎಸ್ ಕೆ ಎಫ್ ಸಿ ಮರಗೋಡು ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಸೀಸನ್-1 ರ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಎಂ ಎಫ್ ಸಿ ತಂಡದ ಶೇಷಪ್ಪ ಪಡೆದು ಕೊಂಡರೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಸೋಕರ್ ಯುನೈಟೆಡ್ ಅಮ್ಮತಿ, ತಂಡದ ಶಿವು ಪಡೆದು ಕೊಂಡರು, ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಯನ್ನು ಎಸ್ ಕೆಎಫ್ ಸಿ ತಂಡದ ರಮೇಶ್ ಪಡೆದು ಕೊಂಡರೆ , ಉದಯೋನ್ಮೋಖ ಪ್ರಶಸ್ತಿಯನ್ನು ಎಸ್ ಕೆಎಫ್ ಸಿ ತಂಡದ ಪ್ರವೀತ್ ಪಡೆದರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಸೋಕರ್ ಯುನೈಟೆಡ್ ಅಮ್ಮತಿ, ತಂಡದ ನಾಯಕ ರಕ್ಷಿತ್ (ರಕ್ಷಿ )ಪಡೆದು ಕೊಂಡರು.

ಕ್ರೀಡೆಯಿಂದ ಸಾಮಾಜಿಕ ಅಭಿವೃದ್ಧಿ:

ಎಸ್ ಕೆ ಎಫ್ ಸಿ ಫುಟ್ಬಾಲ್ ಆಯೋಜಕರಾದ ಎಂ.ಎಸ್. ವಿಜಯ್ ಇವರ ಸಮ್ಮುಖದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡರವರು “ಕ್ರೀಡೆ ಮಾನವನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಮೊಗೇರ ಸಮುದಾಯದ ಸಂಘಟನೆಗಳು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿ ಯುವಕರಲ್ಲಿ ಶಿಸ್ತು ಮತ್ತು ಸಹಕಾರದ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ” ಎಂದರು.

ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷರಾದ ಜನಾರ್ಧನ್ ಮರಗೋಡು ಮಾತನಾಡಿ, ಕ್ರೀಡೆಗಳು ಯುವಕರಲ್ಲಿ ಶಿಸ್ತಿನ ಮನೋಭಾವವನ್ನು ಬೆಳೆಯಿಸುತ್ತವೆ. ಗೆಲುವು–ಸೋಲುಗಳು ಸಹಜ, ಆದರೆ ಕ್ರೀಡಾಸ್ಫೂರ್ತಿ ಎಂದಿಗೂ ಉಳಿಯಬೇಕು. ಈ ಕ್ರೀಡಾಕೂಟದ ಮೂಲಕ ಯುವಕರು ತಮ್ಮ ಪ್ರತಿಭೆಯನ್ನು ತೋರಿಸಲು ವೇದಿಕೆ ಸಿಕ್ಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರಗೋಡು ಪಂಚಾಯಿತಿ ಉಪಾಧ್ಯಕ್ಷರಾದ ಕವಿತ ಪ್ರಕಾಶ್ ಮಾತನಾಡಿ ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು. ಪ್ರಥಮ ವರ್ಷದ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿಜಯ್ ಎಂ.ಎಸ್ ಮಾತನಾಡಿ ಈ ರೀತಿಯ ಕ್ರೀಡಾಕೂಟಗಳು ಕ್ರೀಡಾಭಿಮಾನಿಗಳಿಗೆ ಹೊಸ ಉತ್ಸಾಹ ನೀಡುತ್ತವೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಉತ್ಸಾಹದಿಂದ ನೀಡಲಿದೆ ಎಂದು ಕರೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಚಂದ್ರು ಎಂ. ಜಿ., ಕೊಡಗು ಜಿಲ್ಲಾ ಮೊಗೇರ ಫುಟ್ಬಾಲ್ ಅಧ್ಯಕ್ಷ, ಅಶೋಕ್. ಎಂ. ಎಂ., ಜನಾರ್ಧನ್ ಹೊಸ್ಕೇರಿ, ಪ್ರಕಾಶ್, ನೇತ್ರ ಉಮೇಶ್, ಚಂದ್ರಕಲಾ, ಹರೀಶ್, ಚಂದ್ರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು,

ಕ್ರೀಡಾ ಕೂಟಕ್ಕೆ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್, ಅರುಣ, ಧನುಷ್, ಜೀವನ್, ವಿನು, ಕಾರ್ಯನಿರ್ವಹಿಸಿದರೆ, ವೀಕ್ಷಕ ವಿವರಣೆಯನ್ನು, ರಮೇಶ್ ಹೆಬ್ಬಟ್ಟಗೇರಿ ನಡೆಸಿಕೊಟ್ಟರು.

ಸ್ಕೋರರ್ ಆಗಿ ಸಂಜಿತ್ ಹಾಗೂ ಮಂಜು ನಡೆಸಿಕೊಟ್ಟರು.

ಕ್ರೀಡಾ ಕೂಟದ ಬಹುಮಾನ ವಿತರಣೆ ಸಂದರ್ಭ : ಎಸ್. ಕೆ. ಎಫ್ ಸಿಯ ಆಯೋಜಕರಾದ ವಿಜಯ್. ಎಂ. ಎಸ್, ದೀಪಕ್, ಚಂಪಕ್, ಸಂಜಿತ್, ಚಂದ್ರ, ವಿಶ್ವನಾಥ್, ಅಜಯ್ ಪಾಲ್ಗೊಂಡಿದ್ದರು.