ಸಾರಾಂಶ
ಸಾಧನೆ ಮಾಡಲು ನಿರಂತರ ಪರಿಶ್ರಮ, ಪ್ರಜ್ಞೆ ಬಹಳ ಮುಖ್ಯ. ಅಂತಹ ಅಪರೂಪದ ಸಾಧಕರು ಅಶೋಕ ಬಾಬರ. ಬ್ಯಾಂಕ್ ಉದ್ಯೋಗಿಯಾಗಿ ಒಂದೂ ದಿನ ರಜೆ ಪಡೆಯದೇ ಸೇವೆ ಮಾಡಿದವರು. ಇಂತಹ ಅನೇಕ ಸಾಧಕರನ್ನು ಸಂಘ ಹೆಚ್ಚು ಗುರುತಿಸಲಿ.
ಧಾರವಾಡ:
ಎಲೆಮರೆಯ ಕಾಯಿಯಂತೆ ಸಮಾಜ ಮುಖಿಯಾಗಿ ಕಾರ್ಯಮಾಡುವ ಅನೇಕ ಸಾಧಕರು ಸಮಾಜದಲ್ಲಿದ್ದು, ಅಂತಹ ಸಾಧಕರ ನಿಸ್ವಾರ್ಥ ಹಾಗೂ ಅನುಪಮ ಸೇವೆ ಗುರುತಿಸಿ ಸನ್ಮಾನಿಸುವ ಪರಂಪರೆ ದೊಡ್ಡದು ಎಂದು ಚಿಂತಕ ವೀರೇಶ ಕೆಲಗೇರಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಧಕರ ಸನ್ಮಾನಕ್ಕೆ ಚಾಲನೆ ನೀಡಿ, ಸಾಧನೆ ಮಾಡಲು ನಿರಂತರ ಪರಿಶ್ರಮ, ಪ್ರಜ್ಞೆ ಬಹಳ ಮುಖ್ಯ. ಅಂತಹ ಅಪರೂಪದ ಸಾಧಕರು ಅಶೋಕ ಬಾಬರ. ಬ್ಯಾಂಕ್ ಉದ್ಯೋಗಿಯಾಗಿ ಒಂದೂ ದಿನ ರಜೆ ಪಡೆಯದೇ ಸೇವೆ ಮಾಡಿದವರು. ಇಂತಹ ಅನೇಕ ಸಾಧಕರನ್ನು ಸಂಘ ಹೆಚ್ಚು ಗುರುತಿಸಲಿ ಎಂದರು.
ಸನ್ಮಾನ ಸ್ವಿಕರಿಸಿದ ಅಶೋಕ ಬಾಬರ್, ನನ್ನ ಕೌಟುಂಬಿಕ ಬಾಂಧವ್ಯಕ್ಕಿಂತ ಹೆಚ್ಚು ಉದ್ಯೋಗವನ್ನು ಪ್ರೀತಿಸಿದ್ದೇನೆ. ನನ್ನ ಹಕ್ಕಿನ ರಜೆ ಹೊರತುಪಡಿಸಿ ಸುದೀರ್ಘ 30 ವರ್ಷ ಒಂದೂ ರಜೆ ಪಡೆಯದೇ ಕಾರ್ಯ ನಿರ್ವಹಿಸಿದ್ದೇನೆ. ಈ ಕಾರ್ಯ ಗುರುತಿಸಿ ವಿದ್ಯಾವರ್ಧಕ ಸಂಘ ಸನ್ಮಾನಿಸುತ್ತಿರುವುದು ನನ್ನ ಭಾಗ್ಯ ಎಂದು ಭಾವುಕರಾದರು.ಹುಬ್ಬಳ್ಳಿಯ ವಂದನಾ ನೂಲ್ವಿ ತಂಡದಿಂದ ಸಂಗೀತ ಜರುಗಿತು. ರಮೇಶ ರಾಠೋಡ ತಬಲಾ ಸಾಥ್, ಕಿರಣ ಹಾರ‍್ಮೋನಿಯಂ ಸಾಥ್ ನೀಡಿದರು. ರತಿಕಾ ನೃತ್ಯ ನಿಕೇತನ ಮಕ್ಕಳಿಂದ ಭರತನಾಟ್ಯ ಪ್ರದರ್ಶನಗೊಂಡಿತು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ಸನ್ಮಾನ ಪತ್ರ ಓದಿದರು.
;Resize=(128,128))
;Resize=(128,128))
;Resize=(128,128))
;Resize=(128,128))