ಸಾರಾಂಶ
ಪಂ.ಜವಾಹರ್ ಲಾಲ್ ನೆಹರು ಜಯಂತಿ ಅಂಗವಾಗಿ ಸರ್ಕಾರದ ಆದೇಶದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೂವಿನಹಡಗಲಿ: ಸರ್ಕಾರ ವಿವಿಧ ಯೋಜನೆಗಳ ಅನುಷ್ಠಾನ ತರುವ ಮೂಲಕ ಶೈಕ್ಷಣಿಕ ಪ್ರಗತಿಗೆ ದಾಪುಗಾಲು ಹಾಕುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಹೇಳಿದರು.
ತಾಲೂಕಿನ ಗುಡೇಕೋಟೆ ಕರಿಬಸಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಉತ್ತಂಗಿಯಲ್ಲಿ ಪೋಷಕ ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದರು.ಪಂ.ಜವಾಹರ್ ಲಾಲ್ ನೆಹರು ಜಯಂತಿ ಅಂಗವಾಗಿ ಸರ್ಕಾರದ ಆದೇಶದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು ಹೇಳಿದರು.
ಸರ್ಕಾರದಿಂದ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ, ಮೊಟ್ಟೆ, ಬಾಳೆ ಹಣ್ಣು ನೀಡುತ್ತಿದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯೋಜನೆ ರೂಪಿಸಿ ಜಾರಿಗೆ ತರಲಾಗುತ್ತಿದೆ. ಶಿಕ್ಷಕರು ಮಕ್ಕಳ ದೈಹಿಕ ಮಾನಸಿಕ ಆರೋಗ್ಯ ಬೆಳವಣಿಗೆಗೆ ನಿಗಾ ವಹಿಸಬೇಕು ಎಂದರು.ಕ್ರೀಡೆ ಸಾಂಸ್ಕೃತಿಕ ಸಾಹಿತ್ಯಿಕ ವಿಭಿನ್ನ ಸೃಜನಶೀಲ ಪ್ರತಿಭೆ ಅನಾವರಣಗೊಳಿಸಲು ಶ್ರಮಿಸಬೇಕೆಂದು ಹೇಳಿದರು.
ಎಸ್ ಡಿಎಂಸಿ ಅಧ್ಯಕ್ಷ ಎಸ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯ ಗುರು ಎಲ್.ಟಿ. ನಾಯಕ್, ಎಸ್ಡಿಎಂಸಿ ಸದಸ್ಯರಾದ ಎಂ.ಮಂಜುನಾಥ, ಕೆ.ಪ್ರಭು, ಬಿ.ಚಂದ್ರಶೇಖರ್ ಬಾಚೇನಹಳ್ಳಿ ಕೊಟ್ರೇಶ ,ಎನ್ಎಂ ಚೆನ್ನಯ್ಯ ,ಎಸ್ಎಂ ರೂಪ ಪ್ರೇಮ ಲೀಲಾ, ಕವಿತಾ ಕಾಟ್ರಹಳ್ಳಿ. ಕವಿತಾ ,ಬಸಮ್ಮ ಕಾಳಮ್ಮ ಇತರರಿದ್ದರು.ಎಸ್.ಷಣ್ಮುಖ, ಪ್ರಭುಗೌಡ, ವೀರಭದ್ರಯ್ಯ ಟಿ.ಎಂ. ನಿರ್ವಹಿಸಿದರು. ಗ್ರಾಮದ ಪಾಲಕರು ಪೋಷಕರು ಶಾಲಾ ಶಿಕ್ಷಕ ವೃಂದ ಹಾಗೂ ಅತಿಥಿ ಶಿಕ್ಷಕರು ಶಿಕ್ಷಣ ಪ್ರೇಮಿಗಳು ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))