ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ನ ೨೦೨೬-೨೭ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೋಮವಾರ ಸಾಕ್ಷಿ ಸಭಾಂಗಣದಲ್ಲಿ ನಡೆಯಿತು.ಇನ್ನರ್‌ವ್ಹೀಲ್ ಕ್ಲಬ್‌ನ ಜಿಲ್ಲಾ ಮಾಜಿ ಅಧ್ಯಕ್ಷೆ ಜಾಹ್ನವಿ ಮೂರ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆಯೇ ಇನ್ನರ್ ವೀಲ್ ಸಂಸ್ಥೆಯ ಮೂಲ ಧ್ಯೇಯ ಎಂದರು.
ನೂತನ ಅಧ್ಯಕ್ಷೆ ಲತಾ ಮಂಜು, ಕಾರ್ಯದರ್ಶಿ ವನಿತಾ ಜಯರಾಮ್, ಉಪಾಧ್ಯಕ್ಷೆ ಅರ್ಮಿತ ಕಿರಣ್ ಪದಾಧಿಕಾರಿಗಳಾಗಿ ಲತಾ, ದಿವ್ಯ, ರಾಜೇಶ್ವರಿ, ಪ್ರೇಮ, ಕಾವೇರಿ, ಮಮತ, ಶಿಲ್ಪಾ, ನಂದಿತ ಅಧಿಕಾರ ಸ್ವೀಕರಿಸಿದರು.ಕ್ಲಬ್ ವತಿಯಿಂದ ಹಿರಿಯ ತಜ್ಞ ವೈದ್ಯ ಕೃಷ್ಣನಂದಾ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ಹಿರಿಯ ಸದಸ್ಯರಾದ ಸಂದ್ಯಾರಾಣಿ ಅವರು ಇಬ್ಬರು ವಿದ್ಯಾರ್ಥಿಗಳಿಗೆ ೧೦ ಸಾವಿರ ರು. ಧನ ಸಹಾಯ ನಂದಿನ ಪ್ರಭುದೇವ್ ಅವರು ವಿದ್ಯಾರ್ಥಿಯೊಬ್ಬನ ಚಿಕಿತ್ಸೆಗೆ ೧೦ ಸಾವಿರ ರು. ಧನ ಸಹಾಯ ನೀಡಿದರು. ರೋಟರಿ ಅಧ್ಯಕ್ಷ ಬಿ.ಎಸ್. ಸುಂದರ್ ಕ್ಲಬ್‌ನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಅಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುವಿನಾ ಕೃಪಾಲ್ ಉಪಸ್ಥಿತರಿದ್ದರು. ಸ್ಮಿತಾ, ಆಶಾ, ಅನಿತಾ, ಪೂರ್ಣಿಮಾ, ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.