ತೂಗು ಸೇತುವೆಯ ಸರದಾರ ಎಂದೇ ಖ್ಯಾತರಾಗಿದ್ದ ಗಿರೀಶ್ ಭಾರದ್ವಾಜ್ 1987ರಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮಕ್ಕೆ ಪ್ರಥಮ ತೂಗು ಸೇತುವೆ ನಿರ್ಮಾಣ ಮಾಡಿದ್ದು ಈಗ ಇತಿಹಾಸ. ಆ ಮೂಲಕ ಕಾವೇರಿ ನಿಸರ್ಗಧಾಮವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಗಿರೀಶ್ ಭಾರದ್ವಾಜ್ ಅವರದ್ದು.

ಕುಶಾಲನಗರ: ತೂಗು ಸೇತುವೆಯ ಸರದಾರ ಎಂದೇ ಖ್ಯಾತರಾಗಿದ್ದ ಗಿರೀಶ್ ಭಾರದ್ವಾಜ್ 1987ರಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮಕ್ಕೆ ಪ್ರಥಮ ತೂಗು ಸೇತುವೆ ನಿರ್ಮಾಣ ಮಾಡಿದ್ದು ಈಗ ಇತಿಹಾಸ. ಆ ಮೂಲಕ ಕಾವೇರಿ ನಿಸರ್ಗಧಾಮವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಗಿರೀಶ್ ಭಾರದ್ವಾಜ್ ಅವರದ್ದು.ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾದ ತೂಗು ಸೇತುವೆ ವಿಶ್ವದಾದ್ಯಂತ ಪ್ರವಾಸಿಗರಿಗೆ ಕಾವೇರಿ ನಿಸರ್ಗಧಾಮದ ಸಂಪರ್ಕ ಸೇತುವಾಗಲು ಗಿರೀಶ್ ಭಾರದ್ವಾಜ್ ಕಾರಣಕರ್ತರಾಗಿದ್ದರು.ನಂತರ ತಮ್ಮ ವೃತ್ತಿ ಬದುಕಿನ ನೂರನೇ ಸೇತುವೆಯನ್ನು ಕುಶಾಲನಗರದ ಸಮೀಪ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಬಳಿ ನಿರ್ಮಿಸಿದ್ದರು.

ಕೊಡಗು ಜಿಲ್ಲೆಯ ಗುಡ್ಡೆ ಹೊಸೂರು ಸಮೀಪದ ತೆಪ್ಪದಖಂಡಿ ಸೇರಿದಂತೆ ಮಡಿಕೇರಿ ಸಮೀಪದ ಅಬ್ಬಿ ಫಾಲ್ಸ್ ತೂಗು ಸೇತುವೆ ನಿರ್ಮಾತೃ ಕೂಡ ಅವರೆ.

ತದನಂತರ ಕಾವೇರಿ ಕಾವೇರಿ ನಿಸರ್ಗಧಾಮ ಹಳೆಯ ಸೇತುವೆ ಶಿಥಿಲ ಹಿನ್ನೆಲೆಯಲ್ಲಿ 2008ರಲ್ಲಿ ಸಮೀಪದಲ್ಲಿಯೇ ನೂತನ ಸೇತುವೆ ನಿರ್ಮಾಣ ಮಾಡಿದ್ದರು. ನಾಲ್ಕು ವರ್ಷಗಳ ಹಿಂದೆ, 2022ರಲ್ಲಿ ಮತ್ತೆ ಈ ತೂಗು ಸೇತುವೆಯ ನಿರ್ವಹಣೆ ಕಾಮಗಾರಿ ಕೂಡ ಭಾರದ್ವಾಜ್ ಅವರೇ ನಿರ್ವಹಿಸಿದ್ದರು.

ತನ್ನ ಈ ತಾಂತ್ರಿಕತೆಯನ್ನು ಯುವಕರಿಗೆ ತಿಳಿಸಿಕೊಡುವ ಹಂಬಲ ಅವರಲ್ಲಿ ಇತ್ತು. ಆದರೆ ಯಾರು ಕೂಡ ಈ ಬಗ್ಗೆ ಆಸಕ್ತಿ ತೋರದ ಕಾರಣ ಈ ತಾಂತ್ರಿಕತೆ ತನ್ನಲ್ಲಿ ಉಳಿಯುವಂತಾಯ್ತು ಎನ್ನುವ ಕೊರಗು ಅವರಲ್ಲಿ ಇತ್ತು.

ಕುಗ್ರಾಮಗಳ ಸಂಪರ್ಕ ಸೇತು ಎನಿಸಿಕೊಂಡ ತೂಗು ಸೇತುವೆಯ ಸರದಾರ ಗಿರೀಶ್ ಭಾರದ್ವಾಜ್ ಅವರ ನಿಧನ ಈ ಭಾಗದ ಜನರಿಗೆ ತುಂಬಲಾರದ ನಷ್ಟ.