ಬೆಟ್ಟದ ಬೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ

| Published : May 29 2024, 12:49 AM IST

ಸಾರಾಂಶ

ದಾಬಸ್‌ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಟ್ಟಸಂದ್ರದ ಪುರಾಣ ಪ್ರಸಿದ್ಧ ಬೆಟ್ಟದ ಭೈರವ ಸ್ವಾಮಿ, ಸೋಮನಾಥೇಶ್ವರ, ಗಣೇಶನಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಮಾಡಿ ತಾಯಿ, ಪತ್ನಿ, ಮಗನೊಂದಿಗೆ ಬಂದು ಶಾಸಕ ಎನ್.ಶ್ರೀನಿವಾಸ್ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ನೆಲಮಂಗಲ ಪವಿತ್ರ ಪುಣ್ಯಭೂಮಿ. ಪುರಾಣ ಪ್ರಸಿದ್ಧ ದೇವಸ್ಥಾನ ಹಾಗೂ ಮಠಗಳಿವೆ. ಚುನಾವಣೆ ಪ್ರಚಾರದ ವೇಳೆ ಅನೇಕ ಗ್ರಾಮಗಳಲ್ಲಿ ಜನರು ನಿಮಗೆ ಒಳಿತಾಗಲಿ ಎಂದು ನನಗೆ ಆಶೀರ್ವಾದ ಮಾಡಿ ಶಾಸಕನನ್ನಾಗಿ ಮಾಡಿದರು. ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಶಕ್ತಿ ನೀಡಲು ಕ್ಷೇತ್ರದ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

ಬಿಟ್ಟಸಂದ್ರ ಗ್ರಾಮದಿಂದ ಬೆಟ್ಟದ ಭೈರವೇಶ್ವರಸ್ವಾಮಿಯ ದೇವಾಲಯದವರೆಗಿನ ರಸ್ತೆ ಅಭಿವೃದ್ಧಿಗೆ ಶಾಸಕರು 2 ಕೋಟಿ ಅನುದಾನದಲ್ಲಿ ಕಾಂಕ್ರೀಟ್ ಹಾಗೂ ಡಾಂಬರೀಕರಣಗೊಳಿಸುವ ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ನೆಲಮಂಗಲ ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಬಿಟ್ಟಸಂದ್ರ ಗ್ರಾಪಂ ಅಧ್ಯಕ್ಷ ಗಂಗರಂಗಯ್ಯ, ಮುಖಂಡರಾದ ಎಂ.ಕೆ.ನಾಗರಾಜು, ಟಿ.ನಾಗರಾಜು, ತಟ್ಟೆಕೆರೆಬಾಬು, ಕಾಂತರಾಜು, ರಂಗಸ್ವಾಮಿ, ಜಗದೀಶ್, ನಾರಾಯಣ್, ಬಿ.ಟಿ ರಾಮಚಂದ್ರ, ಮಿಲ್ಟ್ರೀಮೂರ್ತಿ, ಕೆ.ಕೃಷ್ಣಪ್ಪ, ಮುನಿಯಪ್ಪ, ಸಿ.ಎಂ.ಗೌಡ, ನಟರಾಜು, ಬೆಟ್ಟಸ್ವಾಮಿ, ಶಂಕರಪ್ಪ ಮತ್ತಿತರರಿದ್ದರು.