ಮಾನಸಿಕ, ದೈಹಿಕ ದೃಢತೆಗೆ ಕ್ರೀಡೆ ಸಹಕಾರಿ: ಹೇರೂರ

| Published : Aug 07 2025, 12:45 AM IST

ಸಾರಾಂಶ

ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆಗಳು ಅತ್ಯಂತ ಸಹಕಾರಿ. ಅವು ಸ್ಪರ್ಧಾತ್ಮಕ ಮನೋಭಾವ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ಬಳೂರ್ಗಿ ಗ್ರಾ.ಪಂ ಅಧ್ಯಕ್ಷೆ ಸವಿತಾ ರಮೇಶ ಹೇರೂರ ಹೇಳಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆಗಳು ಅತ್ಯಂತ ಸಹಕಾರಿ. ಅವು ಸ್ಪರ್ಧಾತ್ಮಕ ಮನೋಭಾವ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ಬಳೂರ್ಗಿ ಗ್ರಾ.ಪಂ ಅಧ್ಯಕ್ಷೆ ಸವಿತಾ ರಮೇಶ ಹೇರೂರ ಹೇಳಿದರು.

ಅಫಜಲ್ಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡ ಪ್ರಯುಕ್ತ ಶುಭ ಹಾರೈಸಿ ಮಾತನಾಡಿದ ಅವರು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಗೆದ್ದು ಪ್ರಶಸ್ತಿಗಳಿಗೆ ಭಾಜನರಾಗಿ ಊರಿನ ಹೆಸರು ಬೆಳಗುವಂತೆ ಮಾಡಲಿ ಎಂದು ಶುಭ ಹಾರೈಸಿದರು.

ಮುಖ್ಯಗುರು ಸಿದ್ದರಾಮ ಮಲ್ಲಾಬಾದ, ದೈಹಿಕ ಶಿಕ್ಷಕ ಗುಂಡಪ್ಪ ಪೂಜಾರಿ ಮಾತನಾಡಿ, ಬಾಲಕರ ಖೋಖೋ ನಲ್ಲಿ ಪ್ರಥಮ ಸ್ಥಾನ, ಬಾಲಕೀಯರ ಖೋಖೋ ನಲ್ಲಿ ದ್ವಿತಿಯ ಸ್ಥಾನ, 100 ಮೀಟರ್ ಓಟ ಬಾಲಕಿಯರ ವಿಭಾಗದಲ್ಲಿ ಪಾಯಲ್ ರಾಠೋಡ ಪ್ರಥಮ ಸ್ಥಾನ, 200 ಮಿಟರ್ ಬಾಲಕೀಯರ ಓಟದ ಸ್ಫರ್ಧೆಯಲ್ಲಿ ಲಕ್ಷ್ಮೀ ರಾಠೋಡ ದ್ವಿತೀಯ ಸ್ಥಾನ, 400 ಮೀಟರ್ ಬಾಲಕೀಯರ ಓಟದಲ್ಲಿ ಜಾನವಿ ರಾಠೋಡ ಪ್ರಥಮ, ಭವಾನಿ ಬಾಲಕುಂದಿ ತೃತೀಯ ಸ್ಥಾನ, 600 ಮೀಟರ್ ಬಾಲಕೀಯರ ಓಟದಲ್ಲಿ ನಂದಿನಿ ರಾಠೋಡ ಪ್ರಥಮ ಸ್ಥಾನ, ಉದ್ದ ಜೀಗಿತ ಬಾಲಕೀಯರ ವಿಭಾಗದಲ್ಲಿ ಪಾಯಲ್ ರಾಠೋಡ ದ್ವಿತೀಯ ಸ್ಥಾನ, 100 ಮೀಟರ್ ಬಾಲಕರ ಓಟದಲ್ಲಿ ರೋಹನ ರಾಠೋಡ ತೃತೀಯ ಸ್ಥಾನ, 200 ಮೀಟರ್ ಓಟದ ಸ್ಪರ್ಧೆಯಲ್ಲಿ ಶ್ರೀಶೈಲ್ ಚಾಕುಂಡಿ ತೃತೀಯ ಸ್ಥಾನ, 400 ಮೀಟರ್ ಓಟದಲ್ಲಿ ಪ್ರೇಮ್ ರಾಠೋಡ ದ್ವಿತೀಯ ಸ್ಥಾನ, 600 ಮೀಟರ್ ಓಟದಲ್ಲಿ ರೋಹನ್ ರಾಠೋಡ ಪ್ರಥಮ ಸ್ಥಾನ, ಪ್ರೇಮ್ ರಾಠೋಡ ದ್ವಿತೀಯ ಸ್ಥಾನ, 4*100 ರೀಲೆ ಓಟದಲ್ಲಿ ಶ್ರೀಶೈಲ್ ಚಾಕುಂಡಿ, ರೋಹನ ರಾಠೋಡ, ಅಜೀತ ರಾಠೋಡ, ಪ್ರೇಮ್ ರಾಠೋಡ, ಜಾನವಿ ರಾಠೋಡ, ಭವಾನಿ ಬಾಲಕುಂದಿ, ಪಾಯಲ್ ರಾಠೋಡ, ಲಕ್ಷ್ಮೀ ರಾಠೋಡ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಸಾಧನೆಗೆ ಮುಖಂಡ ರಮೇಶ ಹೇರೂರ, ಸದ್ದಾಂ ನಾಕೇದಾರ, ಶಾಲೆಯ ಶಿಕ್ಷಕರು, ಎಸ್‌ಡಿಎಂಸಿಯವರು, ಗ್ರಾಮಸ್ಥರು ಶ್ಲಾಘಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.