ಚನ್ನಗಿರಿ ಪಟ್ಟಣ ವಿರಕ್ತ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ

| Published : Dec 26 2024, 01:04 AM IST

ಚನ್ನಗಿರಿ ಪಟ್ಟಣ ವಿರಕ್ತ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತ ದೇವರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಚನ್ನಗಿರಿಯಲ್ಲಿ ಆರಂಭಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತ ದೇವರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಆರಂಭಿಸಲಾಯಿತು.

ಡಿ.22ರಂದು ಶ್ರೀ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಘಟ ಸ್ಥಾಪನೆ, ಡಿ.23ರಂದು ಮಹೇಶ್ವರ ಸ್ವಾಮಿ ಭಕ್ತರ ಮನೆಗಳಲ್ಲಿ ಹಬ್ಬದ ಆಚರಣೆ ನಡೆಸಲಾಯಿತು. ಡಿ.24ರ ಬೆಳಗ್ಗೆ ಶ್ರೀ ಹಾಲಸ್ವಾಮಿ ವಿರಕ್ತ ಮಠದಿಂದ ಲಿಂಗೈಕ್ಯ ಶ್ರೀ ಜಯದೇವ ಮಹಾಸ್ವಾಮೀಜಿ ಅವರ ಪಂಚಲೋಹದ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ಜಾನಪದ ಕಲಾ ತಂಡಗಳು, ಪೂರ್ಣಕುಂಭ ಹೊತ್ತ ಮುತ್ತೈದೆಯರು ಶ್ರೀ ಬಸವ ಜಯಚಂದ್ರ ಸ್ವಾಮಿಗಳ ಪಾದನಡಿಗೆಯೊಂದಿಗೆ ಪಟ್ಟಣದ ಹೊರವಲಯದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಗದ್ದಿಗೆ ಮಠಕ್ಕೆ ತೆರಳಲಾಯಿತು.

ಗದ್ದಿಗೆ ಮಠದಲ್ಲಿ ಡಿ.27ರ ಶುಕ್ರವಾರವರೆಗೆ ಶ್ರೀ ಶಿವಲಿಂಗೇಶ್ವರ, ಶ್ರೀ ಜಯದೇವ ಸ್ವಾಮಿಗಳವರ ಗದ್ದುಗೆ ಮತ್ತು ಶ್ರೀ ಮಹೇಶ್ವರ ಸ್ವಾಮಿಗೆ ತ್ರಿಕಾಲ ಪೂಜೆ, ಪ್ರಸಾದ ದಾಸೋಹ ನಡೆಯಲಿದೆ. ಶುಕ್ರವಾರ ಗದ್ದಿಗೆ ಮಠದಿಂದ ಸಂಜೆ 6 ಗಂಟೆಗೆ ಶ್ರೀ ಮಹೇಶ್ವರ ಸ್ವಾಮಿ ಮತ್ತು ಜಯದೇವ ಸ್ವಾಮಿಗಳವರ ಮೂರ್ತಿಗಳನ್ನು ಅಲಂಕೃತ ಪಲ್ಲಕ್ಕಿ ಹೊತ್ತು, ಶ್ರೀ ಬಸವ ಜಯಚಂದ್ರ ಸ್ವಾಮಿಗಳು ಪಾದಯಾತ್ರೆ ಮೂಲಕ ರಾಜಬೀದಿ ಉತ್ಸವ ನಡೆಸಲಾಗುವುದು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಪ್ರಮುಖರಾದ ರಾಜಶೇಖರಯ್ಯ, ಜವಳಿ ಮಹೇಶ್, ಜ್ಯೋತಿ ಪ್ರಸಾದ್, ಚಂದ್ರಯ್ಯ, ಹಾಲಸಿದ್ದಪ್ಪ, ಕೆ.ಪಿ.ಎಂ.ಗಿರೀಶ್, ಬೂದಿಸ್ವಾಮಿಹಿರೇಮಠ, ಎಚ್.ಬಿ.ರುದ್ರಯ್ಯ, ಎಲ್.ಎಂ.ರೇಣುಕಾ, ಸಂಗಯ್ಯ ಸೇರಿದಂತೆ ಸಮಾಜ ಬಾಂಧವರು ಹಾಜರಿದ್ದರು.

- - - -24ಕೆಸಿಎನ್ಜಿ3: