ನಿರ್ಗತಿಕ ಮಹಿಳೆಗೆ ಬಿ.ರೇವಣ್ಣ ಆರ್ಥಿಕ ನೆರವು

| Published : Dec 26 2024, 01:04 AM IST

ಸಾರಾಂಶ

ಸಣಬ ಗ್ರಾಮದಲ್ಲಿ ನಮಗೆ ಇರಲು ಮನೆಯಲ್ಲಿ ಸಣ್ಣ ಗುಡಿಸಲಿನಲ್ಲಿದ್ದೇನೆ. ಇತ್ತೀಚೆಗೆ ಗುಡಿಸಲಿನಲ್ಲಿ ಹಾವು ಸೇರಿಕೊಂಡು ಗುಡಿಸಲಿನಲ್ಲೂ ಇರಲು ಆಗುತ್ತಿಲ್ಲ. ಹಾಗಾಗಿ ಸಣ್ಣದೊಂದು ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಾಸ ಮಾಡಲು ಮನೆ ಇಲ್ಲದ ನಿರ್ಗತಿಕ ಮಹಿಳೆಗೆ ಸಮಾಜ ಸೇವಕ, ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಆರ್ಥಿಕ ನೆರವು ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರ ಸಭೆ ಮುಗಿಸಿ ಹೊರ ಬಂದ ವೇಳೆ ತಾಲೂಕಿನ ಸಣಬ ಗ್ರಾಮದ ನಿರ್ಗತಿಕ ಮಹಿಳೆ ಭಾಗ್ಯಮ್ಮ ಬಿ.ರೇವಣ್ಣರ ಕಾಲಿಗೆ ಬಿದ್ದು ತಮ್ಮ ಸಮಸ್ಯೆ ಹೇಳಿಕೊಂಡರು.

ಗ್ರಾಮದಲ್ಲಿ ನಮಗೆ ಇರಲು ಮನೆಯಲ್ಲಿ ಸಣ್ಣ ಗುಡಿಸಲಿನಲ್ಲಿದ್ದೇನೆ. ಇತ್ತೀಚೆಗೆ ಗುಡಿಸಲಿನಲ್ಲಿ ಹಾವು ಸೇರಿಕೊಂಡು ಗುಡಿಸಲಿನಲ್ಲೂ ಇರಲು ಆಗುತ್ತಿಲ್ಲ. ಹಾಗಾಗಿ ಸಣ್ಣದೊಂದು ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಬಿ.ರೇವಣ್ಣ ಅವರು ನಿರ್ಗತಿಕ ಮಹಿಳೆ ಭಾಗ್ಯಮ್ಮ ಅವರಿಗೆ ವೈಯುಕ್ತಿಕವಾಗಿ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು. ಇದೇ ವೇಳೆ ಶ್ರೀರಂಗಪಟ್ಟಣದ ತಾಲೂಕಿನ ಕೆಲವು ಮಹಿಳೆಯರು ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರಿಗೂ ಸಹ ವೈಯುಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದರು.

ಡಿ.29 ರಂದು ಶಿವರಾತ್ರಿಶ್ವರ ಶಿವಯೋಗಿಗಳ 1065ನೇ ಜಯಂತಿ

ಮಳವಳ್ಳಿ: ಪಟ್ಟಣದ ನಡೆಯಬೇಕಿದ್ದ ಜಗದ್ಗುರು ಶ್ರೀಶಿವರಾತ್ರಿಶ್ವರ ಶಿವಯೋಗಿಗಳ 1065ನೇ ಜಯಂತಿ ಮಹೋತ್ಸವವನ್ನು ಸಾಂಕೇತಿಕವಾಗಿ ಡಿ.29ರಂದು ಸುತ್ತೂರಿನಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಮೂರ್ತಿ ಹೇಳಿದರು.

ಸುತ್ತೂರು ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠದ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಗಳ ಜಯಂತಿ ಮಹೋತ್ಸವ ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಹಾಗೂ ರಾಜ್ಯದ ನಾನಾ ಮಠಾಧೀಶರ ಸಮ್ಮುಖದಲ್ಲಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ನಡೆಸಲು ಸಂಕಲ್ಪ ಮಾಡಲಾಗಿತ್ತು. ಆದರೆ, ಪೂಜ್ಯರ ಅಶಯದಂತೆ ಡಿ.29 ರಂದು ಸುತ್ತೂರಿನಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಡಿ.29 ರಂದು ಬೆಳಗ್ಗೆ 9 ಗಂಟೆಗೆ ಉತ್ಸವ ಮೂರ್ತಿ ಮೆರವಣಿಗೆಯೊಂದಿಗೆ ಜಯಂತಿ ಅರಂಭವಾಗಲಿದೆ ಎಂದು ಹೇಳಿದ್ದಾರೆ.