ಹನೂರಿನಲ್ಲಿ ಸಂಭ್ರಮ ಸಡಗರದೊಂದಿಗೆ ಎಲ್ಲೆಡೆ ಕ್ರಿಸ್ಮಸ್ ಆಚರಣೆ

| Published : Dec 26 2024, 01:04 AM IST

ಹನೂರಿನಲ್ಲಿ ಸಂಭ್ರಮ ಸಡಗರದೊಂದಿಗೆ ಎಲ್ಲೆಡೆ ಕ್ರಿಸ್ಮಸ್ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ವಿವಿಧಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಣೆ ನಡೆಯಿತು. ಹನೂರು ತಾಲೂಕಿನ ಪಟ್ಟಣ ಸೇರಿದಂತೆ ಸಂದನಪಾಳ್ಯ, ಸುಳ್ವಾಡಿ, ಮಾರ್ಟಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಮುದಾಯದವರು ವಿಶೇಷವಾಗಿ ಧಾರ್ಮಿಕ ಹಬ್ಬವನ್ನು ಆಚರಿಸಿದರು.

ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ವಿವಿಧಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಣೆ ನಡೆಯಿತು. ಹನೂರು ತಾಲೂಕಿನ ಪಟ್ಟಣ ಸೇರಿದಂತೆ ಸಂದನಪಾಳ್ಯ, ಸುಳ್ವಾಡಿ, ಮಾರ್ಟಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಮುದಾಯದವರು ವಿಶೇಷವಾಗಿ ಧಾರ್ಮಿಕ ಹಬ್ಬವನ್ನು ಆಚರಿಸಿದರು.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಮುದಾಯದವರು ಹಾಗೂ ಎಲ್ಲ ಧರ್ಮಗಳ ಜನರು ಕ್ರಿಸ್ಮಸ್ ಅನ್ನು ಡಿ.25 ರಂದು ವಿಶೇಷವಾಗಿ ಸುಳ್ವಾಡಿ ಸಂತ ಫಾತಿಮಾ ಮಾತೆಯ ಚರ್ಚಿನಲ್ಲಿ ರಾತ್ರಿ 11ಕ್ಕೆ ಹಾಡುಗಳೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಆರಂಭಗೊಂಡು ಬೆಳಗ್ಗೆ 11:30 ರಿಂದ ಜಾಗರಣೆ ಕ್ರಿಸ್ಮಸ್ ಬಲಿ ಪೂಜೆ ಸಾಂಪ್ರದಾಯದಂತೆ ಜರುಗಿತು. ಸುಳ್ವಾಡಿ ಚರ್ಚ್ ಫಾದರ್ ಟೆನ್ನಿ ಕುರಿಯನ್ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ನಂತರ ಎಲ್ಲರಿಗೂ ಕೇಕ್ ವಿತರಿಸಿ ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಪರಸ್ಪರವಾಗಿ ಹಂಚಿಕೊಂಡರು.

ಗೋದಾಮು ನಿರ್ಮಾಣ ಮಾಡಿರುವುದು ಎಲ್ಲರ ಗಮನ ಸೆಳೆಯಿತು. ಜೊತೆಗೆ ಸುಳ್ವಾಡಿ ಮತ್ತು ಮಾರ್ಟಳ್ಳಿ ಚರ್ಚ್‌ಗಳಲ್ಲೂ ಗೋದಾಮು ನಿರ್ಮಾಣ ಮಾಡಲಾಗಿತ್ತು. ಸಮುದಾಯದ ದೊಡ್ಡವರು ಮಕ್ಕಳು ಎಲ್ಲರೂ ಹೊಸ ಬಟ್ಟೆ ಧರಿಸಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಸಾಂಪ್ರದಾಯದಂತೆ ಕೇಕ್ ನೀಡುವ ಮೂಲಕ ವಿನಿಮಯ ಮಾಡಿಕೊಂಡರು.

ಹನೂರಿನಲ್ಲೂ ಕ್ರಿಸ್ಮಸ್ ವಿಶೇಷ ಆಚರಣೆ:

ಪಟ್ಟಣದ ಚೆರ್ಚ್‌ನಲ್ಲಿ ಫಾದರ್ ರೋಷನ್ ಬಾಬು ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ ಜಗಮಗಿಸಿದ ಕ್ಯಾಂಡಲ್ ಬೆಳಗುವಿಕೆ ನೋಟ ಕಣ್ಮನ ಸೆಳೆಯಿತು.