ದಿಂಡಿ ಉತ್ಸವ । ಇಂದು ವಿಠಲ ರಖುಮಾಯಿಗೆ ಪಂಚಾಮೃತ ಅಭಿಷೇಕ, ಬಲಿ ಪ್ರದಾನ
ಕನ್ನಡಪ್ರಭ ವಾರ್ತೆ, ಬೀರೂರುಪಟ್ಟಣದ ಕರಗಲ್ ಬೀದಿಯ ಶ್ರೀಪಾಂಡುರಂಗ ರಖುಮಾಯಿ ದೇವಸ್ಥಾನದ ನೂತನ ಗೋಪುರ ಕಲಶಾರೋಹಣ ಮತ್ತು ದಿಂಡಿ ಉತ್ಸವ ಆ. 20ರಿಂದ 24ರವರೆಗೆ ನಡೆಯಲಿವೆ.
ಗೋಪುರ ಕಲಶಾರೋಹಣದ ಪ್ರಯುಕ್ತ ಗುರುವಾರ (ಆ.20) ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ಧ್ವಜಾ ರೋಹಣ, ಪಂಚಗವ್ಯ ಪ್ರಾಶನ, ದೇವನಾಂದಿ, ಅಂಕುರಾರ್ಪಣ ನಂತರ ಶ್ರೀವಿಠಲ ರಖುಮಾಯಿಗೆ ಪಂಚಾಮೃತ ಅಭಿಷೇಕ, ಶ್ರೀ ಮಹಾಗಣಪತಿ ಹೋಮ, ನವಗ್ರಹ ಹೋಮ ಜರುಗಿದೆ. ಬೆಳಿಗ್ಗೆ 9.30ಕ್ಕೆ ಮಹಿಳೆಯರು ಶ್ರೀ ವೀರಭದ್ರ .ಮಿ ದೇವಾಲಯದಿಂದ ಗಂಗಾಕಲಶ ತರುವುದು, ಬಳಿಕ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯಿಂದ ಕೂರ್ಮ ಮತ್ತು ವಿಷ್ಣುಪಾದುಕೆಗಳ ಪೂಜೆ ಮತ್ತು ಕೊಡುಗೆ ನಡೆಯಲಿದೆ. ಸಂಜೆ 6ರಿಂದ ಕಲಶ ಸ್ಥಾಪನೆ, ಕ್ಷೀರಾಭಿಷೇಕ, ಪುಷ್ಪಾಧಿವಾಸ, ಧಾನ್ಯಾಧಿವಾಸ, ವಸ್ತ್ರಾಧಿವಾಸ, ಶಯ್ಯಾಧಿವಾಸ ಸೇವೆಗಳು ನಡೆದವು.ಶುಕ್ರವಾರ (ಆ. 21) ವಿಠಲ ರಖುಮಾಯಿಗೆ ಪಂಚಾಮೃತ ಅಭಿಷೇಕ, ಬಲಿ ಪ್ರದಾನ, ಮಧ್ಯಾಹ್ನ ಹನುಂತರರಾವ್ ರಂಗ ಧೋಳ್ ಅವರ ನೇತೃತ್ವದಲ್ಲಿ ಕಲಶಾರೋಹಣ, ಕದಳೀ ಕೂಷ್ಮಾಂಡ ಛೇದನ,ಕಲಶಾಭಿಷೇಕ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯುವುದು.
ಭಾನುವಾರ (ಆ. 23) ಬೆಳಿಗ್ಗೆ 8.30ರಿಂದ ಶ್ರೀವಿಠಲನಿಗೆ ಸಾರ್ವತ್ರಿಕ ಅಭಿಷೇಕ, ಸಹಸ್ರ ನಾಮಾರ್ಚನೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗದೊಂದಿಗೆ ದಿಂಡಿ ಉತ್ಸವಕ್ಕೆ ಚಾಲನೆನೀಡಲಾಗುವುದು. ಸಂಜೆ ಪೋತಿ ಸ್ಥಾಪನೆ, ನಾಮಜಪ, ಪ್ರವಚನ, ಪಂಢರಿ ಸಾಂಪ್ರದಾಯಿಕ ಕೀರ್ತನೆಯನ್ನುಶಿವಮೊಗ್ಗದ ವಿಠಲ್ ರಾವ್ ತೇಲ್ಕ ಹನುಮಂತ ರಾವ್ ರಂಗಧೋಳ್ ತಂಡದವರಿಂದ ನೆರವೇರಿಸಲಾಗುವುದು. ರಾತ್ರಿ ಜ ತಾಯಿ ಭಜನಾ ಮಂಡಳಿ ಬೀರೂರು ಮತ್ತು ಭವಾನಿ ಮಹಿಳಾ ಮಂಡಳಿ ಶಿವಮೊಗ್ಗ ಅವರಿಂದ ಏಕಕಾಲ ಭಜನೆ, ಪಂಚಪದಿ ಪಾವೊಲ್ ಭಜನೆ, ಮೈಸೂರಿನ ರಾಜೇಶ್ ಪಡಿಯಾ ತಂಡದವರಿಂದ ಸಂತವಾಣಿ ಕಾರ್ಯಕ್ರಮ ನಡೆಯುವುದು.
ಸೋಮವಾರ (ಆ. 24) ಬೆಳಿಗ್ಗೆ ಕಾಕಡಾರತಿ ನಂತರ, ಬೆಳ್ಳಿ ರಥದಲ್ಲಿ ಶ್ರೀವಿಠಲ್ ರಖುಮಾಯಿಯವರ ರಾಜಬೀದಿ ಉತ್ಸವ ಬಳಿಕ ಸಂತ ಪೂಜೆ, ಮಂಡಳಿಯವರಿಂದ ವಿಶೇಷ ಭಾರೋಡ್ ಕಾರ್ಯಕ್ರಮ ಮತ್ತು ತುಕಾರಾಮ್ ರಂಗಧೋಳ್ ಅವರಿಂದ ಕಾಲಾಕೀರ್ತನೆ, ಮಹಾಮಂಗಳಾರತಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಆ. 28ರಂದು ಶ್ರೀಸತ್ಯ ನಾರಾಯಣ ಸ್ವಾಮಿ ಪೂಜೆ, ನಂತರ ಗೋಪಾಲಕಾಲಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇದೇ ದಿನ 28ರಂದು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ .ನಂತರ ಗೋಪಾಲಕಾಲಾ ಏರ್ಪಡಿಸಲಾಗಿದೆ. ಇದೇ ದಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಕೋರಿದೆ.20 ಬೀರೂರು 1
ಬೀರೂರು ಕರಗಲ್ ಬೀದಿಯಲ್ಲಿ ನೆಲೆಸಿರುವ ಶ್ರೀಪಾಂಡುರಂಗ ರಖುಮಾಯಿ ಅಲಂಕೃತಗೊಂಡಿರುವುದು