ಸಾರಾಂಶ
ಯಡ್ರಾಮಿ ಸರ್ದಾರ್ ಶರಣಗೌಡ ವೃತ್ತದಿಂದ ಶ್ರೀರಾಮನ ಭಾವಚಿತ್ರ ಮೆರವಣಿಗೆ ಪ್ರಾರಂಭಿಸಲು ಹಿಂದು ಕಾರ್ಯಕರ್ತರು ಮುಂದಾದಾಗ ಪೊಲೀಸರು ತಡೆ ನೀಡಿದರು. ಇಷ್ಟಾದರೂ ಸಹ ಕಾರ್ಯಕ್ರಮ ಆಯೋಜಕರು ಪೊಲೀಸರ ಮಾತಿಗೆ ಕ್ಯಾರೆ ಎನ್ನದೇ ಮೆರವಣಿಗೆ ಪ್ರಾರಂಭಿಸಿದರು. ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ಅಲ್ಲಿ ಮತ್ತೆ ಪೊಲೀಸರು ಮೆರವಣಿಗೆ ಸ್ಥಗಿತಗೊಳಿಸಿದರು.
ಕನ್ನಡಪ್ರಭ ವಾರ್ತೆ ಯಡ್ರಾಮಿ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಿಮಿತ್ತ ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಿಂದೂಪರ ಕಾರ್ಯಕರ್ತರು ಆಯೋಜನೆ ಮಾಡಿದ್ದರು. ಬೆ.11ಕ್ಕೆ ಯಡ್ರಾಮಿಯ ಐತಿಹಾಸಿಕ ಕೇಂದ್ರ ರಾಮತೀರ್ಥದಲ್ಲಿ ಕಡಕೋಳ ಮಠದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು ಮತ್ತು ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ನಂತರ ಸರ್ದಾರ್ ಶರಣಗೌಡ ವೃತ್ತದಿಂದ ಶ್ರೀರಾಮನ ಭಾವಚಿತ್ರ ಮೆರವಣಿಗೆ ಪ್ರಾರಂಭಿಸಲು ಹಿಂದು ಕಾರ್ಯಕರ್ತರು ಮುಂದಾದಾಗ ಪೊಲೀಸರು ತಡೆ ನೀಡಿದರು. ಇಷ್ಟಾದರೂ ಸಹ ಕಾರ್ಯಕ್ರಮ ಆಯೋಜಕರು ಪೊಲೀಸರ ಮಾತಿಗೆ ಕ್ಯಾರೆ ಎನ್ನದೇ ಮೆರವಣಿಗೆ ಪ್ರಾರಂಭಿಸಿದರು. ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ಅಲ್ಲಿ ಮತ್ತೆ ಪೊಲೀಸರು ಮೆರವಣಿಗೆ ಸ್ಥಗಿತಗೊಳಿಸಿದರು.
ನಂತರ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮುಖಂಡರಾದ ಮಲ್ಲಿನಾಥಗೌಡ ಪಾಟೀಲ ಯಲಗೋಡ, ಶೋಭಾ ಬಾಣಿ, ಲಿಂಗನಗೌಡ ಪೊಲೀಸ್ ಪಾಟೀಲ ಸ್ಥಳಕ್ಕೆ ಆಗಮಿಸಿ ನೆರದಿದ್ದ ಹಿಂದುಪರ ಕಾರ್ಯಕರ್ತರಿಗೆ ಹುರುದುಂಬುವಂತೆ ಮಾಡಿದರು. ಮುಖಂಡರು ಮತ್ತು ಕಾರ್ಯಕರ್ತರಿಗೆ ಪಿಎಸ್ಸೈ ಸುಖಾನಂದ ಸಿಂಘೆ ಎಷ್ಟೇ ಮನವೊಲಿಸಲು ಮುಂದಾದರೂ ಸಹ ಕ್ಯಾರೆ ಎನ್ನದೆ ಜೈ ಶ್ರೀರಾಮ ಘೋಷಣೆ ಕೂಗುತ್ತಾ ಮತ್ತೆ ಮೆರವಣಿಗೆ ಪ್ರಾರಂಭಿಸಿದರು. ಇದರಿಂದಾಗಿ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತುಕೊಳ್ಳುವಂತಾಯಿತು. ನಂತರ ಹನುಮಾನ ದೇವಸ್ಥಾನದವರೆಗೆ ಮೆರವಣಿಗೆ ನಡೆದು ಸಮಾಪ್ತಿಗೊಂಡಿತು.