ಸಾರಾಂಶ
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಪೂಜೆ ಮತ್ತು ಅಂಜನಾದ್ರಿಯ ಆಂಜನೇಯಸ್ವಾಮಿಯ ಸನ್ನಿಧಾನದಲ್ಲಿ ಏಕಕಾಲಕ್ಕೆ ಪೂಜೆ ಸೇರಿದಂತೆ ಮಂಗಳರಾತಿ ನಡೆದಿರುವುದನ್ನು ವೀಕ್ಷಿಸಿರುವುದು ಭಕ್ತರ ಪುಣ್ಯವಾಗಿದೆ.
ಗಂಗಾವತಿ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಪೂಜೆ ಮತ್ತು ಅಂಜನಾದ್ರಿಯ ಆಂಜನೇಯಸ್ವಾಮಿಯ ಸನ್ನಿಧಾನದಲ್ಲಿ ಏಕಕಾಲಕ್ಕೆ ಪೂಜೆ ಸೇರಿದಂತೆ ಮಂಗಳರಾತಿ ನಡೆದಿರುವುದನ್ನು ವೀಕ್ಷಿಸಿರುವುದು ಭಕ್ತರ ಪುಣ್ಯವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹನುಮ ಜನಿಸಿದ ಸ್ಥಳ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಶಾಸಕರು ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ನಡೆದ ಪೂಜೆ ಮತ್ತು ಮಂಗಳಾರತಿ ಸಮಯದಲ್ಲಿ ರಾಮನ ಬಂಟನಾಗಿದ್ದ ಹನುಮ ಜನಸ್ಥಳದ ಅಂಜನಾದ್ರಿಯಲ್ಲಿ ಏಕಕಾಲಕ್ಕೆ ಪೂಜೆ ಸಲ್ಲಿಸಲಾಯಿತು ಎಂದರು.ಮೂರ್ತಿ ಪ್ರತಿಷ್ಠಾಪನೆಯಿಂದ ಕೇವಲ ಭಾರತ ದೇಶವಲ್ಲ, ಇಡೀ ವಿಶ್ವಕ್ಕೆ ಸಂತೋಷವಾಗಿದೆ. ಭಕ್ತರು ಜಯಘೋಷ ಹೇಳುವುದರ ಮೂಲಕ ರಾಮನಿಗೆ ಭಕ್ತಿ ಸಮರ್ಪಿಸಿದ್ದಾರೆ ಎಂದರು.ರಾಮನ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಸಂತೋಷ ಪಡುವ ಮೊದಲ ವ್ಯಕ್ತಿ ಎಂದರೆ ಅದು ಆಂಜನೇಯಸ್ವಾಮಿ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಿ ಉದ್ಘಾಟನೆ ಮಾಡಿರುವುದು ಇಡೀ ವಿಶ್ವಕ್ಕೆ ಸಂಭ್ರಮವಾಗಿದೆ ಎಂದರು.ರಾಮ ಭಕ್ತಿ ಎಂದರೆ ಅದು ರಾಷ್ಟ್ರಭಕ್ತಿ ಇದ್ದಂತೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಪ್ರಜೆಗಳು ಭಕ್ತಯಿಂದ ರಾಮನನ್ನು ಪೂಜೆಸುತ್ತಾರೆ ಎಂದರು.ಅಯೋಧ್ಯೆ ಹೇಗೆ ಅಭಿವೃದ್ಧಿಯಾಗಿದೆಯೋ ಅದೇ ರೀತಿ ಅಂಜನಾದ್ರಿ ಅಭಿವೃದ್ಧಿಗಾಗಿ ಆಂಜನೇಯ ಸ್ವಾಮಿ ಸೇವೆ ಮಾಡಿಸಿಕೊಳ್ಳುತ್ತಿದ್ದಾನೆ. ಅಂಜನಾದ್ರಿಯೂ ವಿಶ್ವಮಟ್ಟದಲ್ಲಿ ಅಭಿವೃವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು. ಹನುಮನ ಸೇವೆ ಮಾಡುವುದೇ ದೊಡ್ಡ ಪದವಿಯಾಗಿದೆ. ಇದಕ್ಕಿಂತ ಯಾವುದೂ ದೊಡ್ಡದಲ್ಲ ಎಂದರು.ಅಯ ಮಂಡಲ ಪೂಜೆ ಸಮಯದಲ್ಲಿ ಗಂಗಾವತಿ ಕ್ಷೇತ್ರದಿಂದ ತುಂಗಾಭದ್ರಾ ಜಲವನ್ನು 108 ಚಿನ್ನ ಲೇಪಿತ ಕಲಶಗಳಿಂದ ತೆಗೆದುಕೊಂಡು ಹೋಗುವುದಾಗಿ ಹೇಳಿದರು.ಮತ್ತೆ ಬಳ್ಳಾರಿಗೆ ಹೋಗುವೆ: ಹನುಮಂತನ ಆಶೀರ್ವಾದವಿದ್ದರೆ ನಾನು ಮತ್ತೆ ಶೀಘ್ರದಲ್ಲಿ ಬಳ್ಳಾರಿಗೆ ಹೋಗುತ್ತೇನೆ ಎಂದರು. ಈ ಸಂದರ್ಭದಲ್ಲಿ ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ, ಪುತ್ರಿ ಬ್ರಹ್ಮಣಿ ಇದ್ದರು.