ಆಡಳಿತಗಾರರಿಗೆ ಶ್ರೀಕೃಷ್ಣದೇವರಾಯ ಮಾದರಿ: ಎಚ್.ಬಿ. ಪಾಟೀಲ

| Published : Jan 18 2024, 02:02 AM IST

ಆಡಳಿತಗಾರರಿಗೆ ಶ್ರೀಕೃಷ್ಣದೇವರಾಯ ಮಾದರಿ: ಎಚ್.ಬಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕೃಷ್ಣದೇವರಾಯನ ಆಡಳಿತದಲ್ಲಿ ನಾಗರಿಕರ ಸಲಹೆಗಳನ್ನು, ಅವರಿಗೆ ಬೇಕಾದ ಸೌಲಭ್ಯ ಹಾಗೂ ಹಕ್ಕುಗಳನ್ನು ನೀಡುವ ಮೂಲಕ ಪಜಾಪಭುತ್ವ ಅಂಶಗಳನ್ನು ಕಾಣಬಹುದಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ:

ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯರ ಆಡಳಿವು ಕೇವಲ ಸೈನಿಕ ದಿಗ್ವಿಜಗಳಿಗೆ ಮಾತ್ರ ಸೀಮಿತವಾಗಿರದೆ, ಉತ್ತಮ ಆಡಳಿತ, ಕಲೆ, ಸಾಹಿತ್ಯ, ಪರಂಪರೆ, ವಾಸ್ತುಶಿಲ್ಪಕ್ಕೆ ಆದ್ಯತೆ ನೀಡುವ ಮೂಲಕ ಸುವರ್ಣಯುಗವಾಗಿತ್ತು. ಒಬ್ಬ ಆಡಳಿತಗಾರ ಹೇಗೆ ಸಮಾಜಕ್ಕೆ ಮಾದರಿಯಾಗಿರಬೇಕೆಂದು ತಮ್ಮ ಜನಪರ ಆಡಳಿತದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ. ಪಾಟೀಲ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾಬಳಗ’ದಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಶೀಕೃಷ್ಣ ದೇವರಾಯರ 553ನೇ ಜಯಂತ್ಯುತ್ಸವ’ ಕಾರ್ಯಕಮದಲ್ಲಿ ಭಾವಚಿತಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.

ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ ಮಾತನಾಡಿ, ಶ್ರೀಕೃಷ್ಣದೇವರಾಯನ ಆಡಳಿತದಲ್ಲಿ ನಾಗರಿಕರ ಸಲಹೆಗಳನ್ನು, ಅವರಿಗೆ ಬೇಕಾದ ಸೌಲಭ್ಯ ಹಾಗೂ ಹಕ್ಕುಗಳನ್ನು ನೀಡುವ ಮೂಲಕ ಪಜಾಪಭುತ್ವ ಅಂಶಗಳನ್ನು ಕಾಣಬಹುದಾಗಿದೆ ಎಂದರು.

ಹಲವಾರು ನೀರಾವರಿ ಯೋಜನೆಗಳನ್ನು ಮಾಡಿ ಕೃಷಿ ಅಭಿವೃದ್ಧಿ ಮತ್ತು ವಾಣಿಜ್ಯ ಅಭಿವೃದ್ಧಿಗೆ ಶಮಿಸಿದ್ದಾರೆ. ಇತಿಹಾಸತಜ್ಞರು ಅವರನ್ನು ಅತ್ಯಂತ ಸಮರ್ಥ, ದಕ್ಷ, ಮಾದರಿ ಆಡಳಿತಗಾರನೆಂದು ಗುರ್ತಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಿಕ್ಷಕ ರೋಹಿತ್ ಯರಪೂಲ್, ಸಿಬ್ಬಂದಿ ಸುನೀತಾ, ನಾಗಮ್ಮ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.