ಸಾರಾಂಶ
ಇಳಕಲ್ಲ: ನಗರದ ಮುರ್ತುಜಾ ಖಾದ್ರಿ ದರ್ಗಾದಲ್ಲಿನ ಹುಂಡಿಯ ಹಣ ಮತ್ತು ಚಿನ್ನ, ಬೆಳ್ಳಿ ಕಳ್ಳತನ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಿಯಾಜ್ ಬನ್ನು ಬಾಗಲಕೋಟೆ ಜಿಲ್ಲಾ ವಕ್ಫ್ ಸಮಿತಿಗೆ ದೂರು ನೀಡಿದ್ದಾರೆ. ಸಮಿತಿಗೆ ನಾನೇ ಅಧ್ಯಕ್ಷನಿದ್ದೇನೆ. ಮುಂದಿನ ತಿಂಗಳು ಉರುಸ್ ಇರುವುದರಿಂದ ಹುಂಡಿಯ ಹಣ ತೆಗೆದಿದ್ದೇವೆ. ಈ ವಿಷಯವಾಗಿ ಇಳಕಲ್ಲ ನಗರ ಪೊಲೀಸ್ ಠಾಣೆಗೆ ಮತ್ತು ಹುನಗುಂದ ಡಿವೈಎಸ್ಪಿ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಮುರ್ತುಜಾ ಖಾದ್ರಿ ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಸ್ಪಷ್ಟನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ಮುರ್ತುಜಾ ಖಾದ್ರಿ ದರ್ಗಾ ಆಡಳಿತಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ವಿವಾದ ತಾರಕಕ್ಕೇರಿದೆ. ದರ್ಗಾದಲ್ಲಿನ ಹುಂಡಿಯ ಹಣ ಮತ್ತು ಚಿನ್ನ, ಬೆಳ್ಳಿ ಕಳ್ಳತನ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಿಯಾಜ್ ಬನ್ನು ಬಾಗಲಕೋಟೆ ಜಿಲ್ಲಾ ವಕ್ಫ್ ಸಮಿತಿಗೆ ದೂರು ನೀಡಿದ್ದಾರೆ.ಜ.15ರಂದು ಬೆಳಗ್ಗೆ 11 ಗಂಟೆಗೆ ನಮಾಜ್ ಮಾಡಲು ಹೋದಾಗ ಇಬ್ಬರು ವ್ಯಕ್ತಿಗಳು ಹುಂಡಿ ಹಣವನ್ನು ಗೋಣಿ ಚೀಲದಲ್ಲಿ ತುಂಬುತ್ತಿರುವುದನ್ನು ನೋಡಿದ್ದೇನೆ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದರೂ ದೂರು ದಾಖಲಿಸಿಕೊಂಡಿಲ್ಲ ಎಂದು ರಿಯಾಜ್ ಬನ್ನು ಆರೋಪಿಸಿದ್ದಾರೆ.
ಈ ಬಗ್ಗೆ ಮುರ್ತುಜಾ ಖಾದ್ರಿ ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಅವರನ್ನು ಕೇಳಿದರೆ ಸಮಿತಿಗೆ ನಾನೇ ಅಧ್ಯಕ್ಷನಿದ್ದೇನೆ. ಮುಂದಿನ ತಿಂಗಳು ಉರುಸ್ ಇರುವುದರಿಂದ ಹುಂಡಿಯ ಹಣ ತೆಗೆದಿದ್ದೇವೆ. ಈ ವಿಷಯವಾಗಿ ಇಳಕಲ್ಲ ನಗರ ಪೊಲೀಸ್ ಠಾಣೆಗೆ ಮತ್ತು ಹುನಗುಂದ ಡಿವೈಎಸ್ಪಿ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.--------
ಮುರ್ತುಜಾ ಖಾದ್ರಿ ದರ್ಗಾ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ತೀರ್ಮಾನ ಬರಬೇಕಿದೆ. ಆದರೆ ಎರಡು ಸಮಿತಿಗಳು ಪರಸ್ಪರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು.- ಶಹಜಹಾನ್ ನಾಯಕ ಪಿಎಸ್‌ಐ ಇಳಕಲ್ಲ ನಗರ ಪೊಲೀಸ್ ಠಾಣೆ
-----2022ರಿಂದ ಮುರ್ತುಜಾ ಖಾದ್ರಿ ದರ್ಗಾಕ್ಕೆ ಯಾವುದೇ ಸಮಿತಿಯೂ ಇಲ್ಲ, ವಕ್ಫ್ ಸಮಿತಿ ವ್ಯಾಪ್ತಿಗೆ ಒಳಪಡುವುದರಿಂದ ಅದರದ ನಿರ್ಧಾರವೇ ಅಂತಿಮ. ದರ್ಗಾ ಹಣ ತೆಗೆದುಕೊಳ್ಳುವ ಅಧಿಕಾರ ಬೇರೆಯವರಿಗೆ ಇಲ್ಲ.
-ರಿಯಾಜ್ ಬನ್ನು ಸಾಮಾಜಿಕ ಹೊರಟಗಾರ.