ರಾಜ್ಯ ಸರ್ಕಾರ ಹಗರಣಗಳ ಸರಮಾಲೆ ಧರಿಸಿ ನಿಂತಿದೆ: ಶಾಸಕ ಹರತಾಳು ಹಾಲಪ್ಪ

| Published : Jul 29 2024, 12:51 AM IST

ರಾಜ್ಯ ಸರ್ಕಾರ ಹಗರಣಗಳ ಸರಮಾಲೆ ಧರಿಸಿ ನಿಂತಿದೆ: ಶಾಸಕ ಹರತಾಳು ಹಾಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸನಗರದ ಪಟ್ಟಣದ ಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ಹೊಸನಗರ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾಜಿ ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ರಾಜ್ಯದ ಇತಿಹಾಸದಲ್ಲೇ ಇಂತಹ ಕಡು ಭ್ರಷ್ಟ ಸರ್ಕಾರವನ್ನು ಜನತೆ ನೋಡಿಲ್ಲ. ಹಗರಣಗಳ ಸರಮಾಲೆನ್ನೇ ಧರಿಸಿ ನಿಂತು ಮಹಿಷಾಸುರನಂತೆ ವರ್ತಿಸುತ್ತಿದೆ. ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ, ಭಾಗ್ಯಯೋಜನೆಗಳಲ್ಲಿ ವಂಚನೆ, ಗ್ಯಾರಂಟಿಗಳ ವಿಫಲತೆ, ಕುಸಿದ ಆಡಳಿತ ಯಂತ್ರ, 40 ಪರ್ಸೆಂಟ್ ಭ್ರಷ್ಟಾಚಾರದ ಸುಳ್ಳು ಆರೋಪ ಬಿಜೆಪಿ ಮೇಲೆ ಹೊರಿಸಿ ಈಗ ನನಗೆ 50 ನಿನಗೆ 50 ಪರ್ಸೆಂಟ್ ಎನ್ನುವ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿದೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಪಟ್ಟಣದ ಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ಹೊಸನಗರ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ದೇಶ ಮೊದಲು ಎಂಬ ಉದ್ಘೋಷದೊಂದಿಗೆ ಹದಿನಾರು ಕೋಟಿ ಸದಸ್ಯರೊಂದಿಗೆ ಪ್ರಪಂಚದಲ್ಲೇ ಬಿಜೆಪಿ ಬಹುದೊಡ್ಡ ರಾಜಕೀಯ ಸಂಘಟನೆಯಾಗಿ ಬೆಳೆದಿದೆ. ದೇಶದಲ್ಲಿ ಇತರೆ ರಾಜಕೀಯ ಪಕ್ಷಗಳು ನಿರಂತರ ಗರೀಭಿ ಹಠಾವೋ ಘೋಷಣೆ ಸುತ್ತ ಗಿರವಿ ಸುತ್ತುತ್ತಿರುವಾಗ ಅದಕ್ಕೊಂದು ಪರಿಹಾರ ಮಾರ್ಗವಾಗಿ ಶೋಷಿತ, ಪೀಡಿತ, ದಲಿತರ ಉದ್ಧಾರದ ಕಾರ್ಯಗಳನ್ನು ನೀಡುತ್ತಾ ವಿಕಸಿತ ಭಾರತ ನಿರ್ಮಾಣದ ಕನಸು ನನಸಾಗುವ ಕಾಲಕ್ಕೆ ತಲುಪಿದ್ದೇವೆ ಎಂದರೆ ಇದಕ್ಕೆ ಪಕ್ಷದ ಗಟ್ಟಿಯಾದ ವೈಚಾರಿಕ ನೆಲೆಗಟ್ಟು ಕಾರಣ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅದನ್ನು ನೋಡಿ ಸಹಿಸಿಕೊಂಡು ಕೂರುವ ಜಯಮಾನ ಬಿಜೆಪಿಯದ್ದಲ್ಲ. ಅನ್ಯಾಯದ ವಿರುದ್ಧ ಹೋರಾಟ ನಡೆಸಿ ನ್ಯಾಯ ಒದಗಿಸುವ ಕಾರ್ಯ ಮಾಡಲು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಮುಂದಿನ ತಾಪಂ ಹಾಗೂ ಜಿಪಂ ಚುನಾವಣೆಗೆ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಉತ್ತಮ ಫಲಿತಾಂಶ ನೀಡಬೇಕು ಎಂದು ಹೇಳಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಮಾತನಾಡಿ, ಬಿಜೆಪಿ ಕಾರ್ಯಕರ್ತರ ತಳಹದಿಯ ಮೇಲೆ ಬೆಳೆದು ಬಂದ ಪಕ್ಷ. ಹಾಗಾಗಿ ನಮ್ಮ ಕಾರ್ಯಕ್ರಮಗಳೆಲ್ಲ ಯಶಸ್ವಿಯಾಗಿ ನಡೆಯುತ್ತವೆ. ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಪರಿಶ್ರಮ ಹಾಕಿದ ಕಾರ್ಯಕರ್ತರು ಕಾರಣ ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮಿತ್ರಪಕ್ಷದ ಸಹಕಾರದೊಂದಿದೆ ರಾಜ್ಯದೆಲ್ಲೆಡೆಯಲ್ಲಿ ಅಭೂತಪೂರ್ವ ಗೆಲುವು ಕಾಣಲಿದೆ ಎಂದರು.ರಾಜ್ಯ ಸರ್ಕಾರದ ವೈಪಲ್ಯ:

ಕುಂಠಿತವಾದ ರಾಜ್ಯದ ಅಭಿವೃದ್ಧಿ, ವಿಫಲವಾದ ಗ್ಯಾರಂಟಿ ಯೋಜನೆ, ಅನುದಾನದ ಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಗರಣಗಳ ಸರಮಾಲೆ, ಗೃಹ ನಿರ್ಮಾಣದ ಹಣ ವಾಪಾಸು ಪಡೆದಿದ್ದು ಇವುಗಳ ವಿರುದ್ಧ ಎನ್.ಆರ್.ದೇವನಂದ್ ನಿರ್ಣಯ ಮಂಡಿಸಿ, ನಾಗರತ್ನ ಅನುಮೋದಿಸಿದರು.ಶಾಸಕರ ವೈಪಲ್ಯ:

ನೆರೆ ಹಾವಳಿ, ಹೆಚ್ಚಿದ ಡೆಂಘೀ, ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳದೆ ವಿದೇಶದಲ್ಲಿ ಮೋಜು ನಡೆಸುತ್ತಿರುವ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಆಲವಳ್ಳಿ ವೀರೇಶ್ ನಿರ್ಣಯ ಮಂಡಿಸಿ ಸುರೇಶ್ ಸ್ವಾಮಿರಾವ್ ಅನುಮೋದಿಸಿದರು.ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ:

ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಂಚಿಹೋಗಿರುವ ಹೊಸನಗರ ವಿಧಾನಸಭಾ ಕ್ಷೇತ್ರ ಮರು ವಿಂಗಡಣೆ ಬಗ್ಗೆ ಬಿ.ಸ್ವಾಮಿರಾವ್ ನಿರ್ಣಯ ಮಂಡಿಸಿ ಕೆ ವಿ ಕೃಷ್ಣಮೂರ್ತಿ ಅನುಮೋದಿಸಿದರು. ಈ ಮೂರು ನಿರ್ಣಯಗಳನ್ನು ಸಭೆ ಧ್ವನಿಮತದಿಂದ ಅನುಮೋದಿಸಿತು.

ಸಭೆಯಲ್ಲಿ ಪಕ್ಷದ ಮುಖಂಡರಾದ ಉಮೇಶ್ ಕಂಚುಗಾರ್, ಗಣಪತಿ ಬೆಳಗೋಡು, ಆರ್. ಟಿ. ಗೋಪಾಲ್, ಯುವರಾಜ್, ಖಾಸಿಂ, ಎಂ. ಎನ್. ಸುಧಾಕರ್, ಶಿವನಂದ ಹಿರೇಮಣತಿ, ಶ್ರೀಪತಿರಾವ್, ಕಾಲ್ಸಸಿ ಸತೀಶ್, ಮಂಡನಿ ಮೋಹನ್, ಬಜಾಜ್ ಗುರು, ಸತ್ಯನಾರಾಯಣ, ಮಂಜುನಾಥ್ ಸಂಜೀವ, ಗಣೇಶ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.