ವಿಜ್ಞಾನ ಎಲ್ಲಿ ನಿಲ್ಲುವುದೋ ಅಲ್ಲಿ ಅಧ್ಯಾತ್ಮ ಹುಟ್ಟುವುದು

| Published : Jul 29 2024, 12:51 AM IST

ವಿಜ್ಞಾನ ಎಲ್ಲಿ ನಿಲ್ಲುವುದೋ ಅಲ್ಲಿ ಅಧ್ಯಾತ್ಮ ಹುಟ್ಟುವುದು
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಎಲ್ಲೇ ಹೋದರೂ ನಾವು ಸಾಗಿ ಬಂದ ದಾರಿಯನ್ನು ಮರೆಯಬಾರದು, ನಾವು ಎತ್ತರಕ್ಕೆ ಬೆಳದರೂ ಅದರ ಹಿಂದೆ ನಾವು ಅನುಭವಿಸಿದ ಕಷ್ಟ, ನೆರವಾದವರ ನೆರಳು ಇದ್ದೇ ಇರುತ್ತದೆ, ಅಹಂ ಬಿಟ್ಟು ಮುಂದೆ ಸಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರನಮ್ಮ ಸಂಪ್ರದಾಯ, ಪದ್ಧತಿ ಉಳಿಸಿಕೊಂಡು ಸಾಗಬೇಕು, ವಿಜ್ಞಾನ ಎಲ್ಲಿ ನಿಲ್ಲುವುದೋ ಅಲ್ಲೇ ನಮ್ಮ ಅಧ್ಯಾತ್ಮ ಹುಟ್ಟಲಿದೆ. ಪ್ರತಿಯೊಂದಕ್ಕೂ ವಿಜ್ಞಾನ ಲಿಂಕ್ ಮಾಡದೇ ಒಂದು ಗೂಡಿ ಅಖಂಡ ಭಾರತ ನಿರ್ಮಿಸೋಣ ಎಂದು ಓಮನ್‌ನ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಮತ್ತು ಅಪ್ಲೈಡ್ ಸಂಸ್ಥೆ ಪ್ರಾಧ್ಯಾಪಕ ಡಾ.ರಮೇಶ್ ನಾರಾಯಣ್ ತಿಳಿಸಿದರು.ನಗರದ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಕೋಲಾರ ಬ್ರಾಹ್ಮಣ ಸಂಘದಿಂದ ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ವೈದ್ಯಕೀಯ, ಪಿಹೆಚ್‌ಡಿ, ಕಲೆ,ಸಂಗೀತಾ ಸಾಹಿತ್ಯ, ವೇದ ಶಾಸ್ತ್ರ ಮತ್ತಿತರ ಕ್ಷೇತ್ರದಲ್ಲಿ ಉನ್ನತ ಶ್ರೇಣಿ ಪಡೆದ ವಿಪ್ರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಸಾಗಿ ಬಂದ ದಾರಿ ಮರೆಯದಿರಿ

ನಾವು ಎಲ್ಲೇ ಹೋದರೂ ನಾವು ಸಾಗಿ ಬಂದ ದಾರಿಯನ್ನು ಮರೆಯಬಾರದು, ನಾವು ಎತ್ತರಕ್ಕೆ ಬೆಳದರೂ ಅದರ ಹಿಂದೆ ನಾವು ಅನುಭವಿಸಿದ ಕಷ್ಟ, ನೆರವಾದವರ ನೆರಳು ಇದ್ದೇ ಇರುತ್ತದೆ, ಅಹಂ ಬಿಟ್ಟು ಮುಂದೆ ಸಾಗೋಣ ಎಂದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸೆಲ್ಕೋ ಫೌಂಡೇಷನ್ ಮತ್ತು ನಂಜಮ್ಮ ನಾರಾಯಣಶಾಸ್ತ್ರಿ ಟ್ರಸ್ಟ್ ನಿರ್ದೇಶಕ ಪ್ರದೀಪ್ ಮೂರ್ತಿ ಮಾತನಾಡಿ, ನಾವು ದೇಶಕ್ಕೆ ಆಸ್ತಿಯಾಗಬೇಕೆ ಹೊರತೂ ಸಮಾಜ ಮತ್ತು ಹೆತ್ತವರಿಗೆ ಹೊರೆಯಾಗಬಾರದು ಎಂದು ಕಿವಿಮಾತು ಹೇಳಿದರು.ಕಲಿಕೆಯ ವೇಗ ಹೆಚ್ಚಾಗಬೇಕು

ಭೌತಶಾಸ್ತ್ರ ಪ್ರಾಧ್ಯಾಪಕ ಹೆಚ್.ಆರ್.ಮಂಜುನಾಥ್ ಬ್ರಾಹ್ಮಣ ಸಂಘ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂದು ಸ್ಪರ್ಧಾತ್ಮಕ ಯುಗದಲ್ಲಿದ್ದೀರಿ, ನಿಮ್ಮ ಕಲಿಕೆಯ ವೇಗ ಹೆಚ್ಚಬೇಕು, ಸಾಧಕರಾಗಿ ಸಮಾಜವೇ ಗುರುತಿಸುವಂತೆ ಸಾಗಬೇಕು ಎಂದು ಕರೆ ನೀಡಿದರು.ಸನ್ಮಾನ ಸ್ವೀಕರಿಸಿದ ವಂಶೋಧಯ ಆಸ್ಪತ್ರೆ ಡಾ.ಸಾಗರ್‌ ಮತ್ತು ಕನ್ನಡ ಪ್ರಾಧ್ಯಾಪಕ ಡಾ.ಶ್ರೀನಿವಾಸ ಪ್ರಸಾದ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಪುಟ್ಟನರಸಿಂಹಯ್ಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕಾಗಿ ೫೦ ಸಾವಿರ ಪ್ರತಿ ವರ್ಷ ನೀಡುವುದಾಗಿ ತಿಳಿಸಿದರು. ಸಂಘದ ಸ್ಥಾಪಕ ಸದಸ್ಯರಾದ ಡಾ.ಪಿ.ಎಸ್.ಕೃಷ್ಣಮೂರ್ತಿ, ಪಿ.ಚಂದ್ರಪ್ರಕಾಶ್, ಜಯತೀರ್ಥರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರ ಬ್ರಾಹ್ಮಣ ಸಂಘದ ಅಧ್ಯಕ್ಷ ಉದಯಕುಮಾರ್ ವಹಿಸಿದ್ದರು. ವಿಜಯ ಪ್ರಭಂಜನ ನಿರೂಪಿಸಿ, ಪ್ರಜ್ವಲ್ ಪ್ರಾರ್ಥಿಸಿ, ವಕೀಲ ಬಿ.ವಿ.ಸವಿನಯ್ ಸ್ವಾಗತಿಸಿದರು.

.