ದೇಶ ಹಾಗೂ ರಾಜ್ಯಕ್ಕೆ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನಂತವರ ನಾಯಕತ್ವದ ಆಡಳಿತವಿಲ್ಲದೇ ಹೋಗಿದ್ದರೇ, ನಾವು, ನೀವೆಲ್ಲ ಕೊರೋನಾ ಸಾಂಕ್ರಾಮಿಕ ಕಾಲದಲ್ಲಿಯೇ ನಮ್ಮ ಜೀವನ ಅಂತ್ಯವಾಗಿರುತ್ತಿತ್ತು. ದೇಶ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಬಲಿಷ್ಠ ನಾಯಕತ್ವದ ಆಡಳಿತ ನಮ್ಮನ್ನು ಕಾಪಾಡಿದೆ ಎಂದು ಶಿಗ್ಗಾಂವಿ ಸವಣೂರು ಮತಕ್ಷೇತ್ರದ ಯುವ ನಾಯಕ ಭರತ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ: ದೇಶ ಹಾಗೂ ರಾಜ್ಯಕ್ಕೆ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನಂತವರ ನಾಯಕತ್ವದ ಆಡಳಿತವಿಲ್ಲದೇ ಹೋಗಿದ್ದರೇ, ನಾವು, ನೀವೆಲ್ಲ ಕೊರೋನಾ ಸಾಂಕ್ರಾಮಿಕ ಕಾಲದಲ್ಲಿಯೇ ನಮ್ಮ ಜೀವನ ಅಂತ್ಯವಾಗಿರುತ್ತಿತ್ತು. ದೇಶ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಬಲಿಷ್ಠ ನಾಯಕತ್ವದ ಆಡಳಿತ ನಮ್ಮನ್ನು ಕಾಪಾಡಿದೆ ಎಂದು ಶಿಗ್ಗಾಂವಿ ಸವಣೂರು ಮತಕ್ಷೇತ್ರದ ಯುವ ನಾಯಕ ಭರತ ಬೊಮ್ಮಾಯಿ ಹೇಳಿದರು.ಪಟ್ಟಣದ ಸವಣೂರು ರಸ್ತೆಯಲ್ಲಿನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗೃಹ ಕಚೇರಿಯಲ್ಲಿ ಚಿತ್ರದುರ್ಗದಲ್ಲಿ ಮೇ ೯ರಂದು ನಡೆಯುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಜೀವನದ ೫೦ನೇ ವರ್ಷಾಚರಣೆಯ ಅಭಿಮಾನೋತ್ಸವ ಕಾರ್ಯಕ್ರಮದ ಬಿಜೆಪಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.೫೦ ವರ್ಷಗಳ ಹಿಂದೆ ಕರ್ನಾಟಕ ರಾಜಕೀಯದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಕೇವಲ ಎರಡು ಮತಕ್ಷೇತ್ರಗಳಿಂದ ಮಾತ್ರ ಬಿಜೆಪಿ ಅಭ್ಯರ್ಥಿ ಗೆದ್ದು ಬರುತ್ತಿದ್ದರು. ಪುರಸಭೆಯ ಸದಸ್ಯರಾಗಿ ಗೆದ್ದು ಬಂದು ರಾಜಕೀಯ ಪ್ರವೇಶಿಸಿ ರಾಜ್ಯದ ಮುಖ್ಯಮಂತ್ರಿ ಪದವಿವರೆಗೂ ಸಾಗಿ ಒಳ್ಳೇಯ ಸಾಮಾಜಿಕ ಕಲ್ಪನೆಯಲ್ಲಿ ಆಡಳಿತ ನಡೆಸಿಕೊಂಡು ರಾಜ್ಯದ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು. ಅಭಿಮಾನೋತ್ಸವದಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬೇಕು. ಅಲ್ಲದೇ ತಾಲೂಕಿನಿಂದ ಕಾರ್ಯಕರ್ತರ ಪ್ರಯಾಣಕ್ಕೆ ಸಾಕಷ್ಟು ಬಸ್ ವ್ಯವಸ್ಥೆ ಕಲಿಸಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಿಗ್ಗಾಂವಿ ಸವಣೂರು ಮತಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ ಹರವಿ ಹಾಗೂ ಶಿವಪುತ್ರಪ್ಪ ಕಲಕೋಟಿ, ಮಲ್ಲಪ್ಪ ಹರಿಜನ, ಧರೆಪ್ಪಗೌಡ ಪಾಟೀಲ, ಶಿವನಗೌಡ ಪಾಟೀಲ, ಗಂಗಾಧರ ಬಾಣದ, ಶಶಿಧರ ಹೊನ್ನಣ್ಣವರ, ತಾಪಂ ಮಾಜಿ ಅಧ್ಯಕ್ಷ ಉಷಾ ಬಿಳಿಕುದರಿ, ನವೀನ ರಾಮಗಿರಿ, ಎಂ.ಎಸ್.ಪಾಟೀಲ, ಮಹಾಬಲೇಶ ಹೊನಕೇರಿ ಅಲ್ಲದೇ ನೂರಾರು ಕಾರ್ಯಕರ್ತರು ಯಡಿಯೂರಪ್ಪ ಅಭಿಮಾನಿಗಳು ಸಭೆಯಲ್ಲಿದ್ದರು.