ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು: ಸಂದೀಪ್

| Published : Jun 27 2025, 12:48 AM IST

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು: ಸಂದೀಪ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಕರ್ತವ್ಯ ಮತ್ತು ಜವಾಬ್ದಾರಿಯ ಬಗ್ಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಯ ಪ್ರೌಢಶಾಲಾ ಜೀವನವು ದೊಡ್ಡ ಸಂಪುಟವಿದ್ದಂತೆ ಹಾಗೂ ನಿಮ್ಮ ತಂದೆ- ತಾಯಿಯನ್ನು ನೋಡಿಕೊಳ್ಳುವ ಜೊತೆಗೆ ನಿಮ್ಮ ಶಿಕ್ಷಕರನ್ನು ಮರೆಯಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ರೂಪಾನಗರದ ದೀಪಾ ಶಾಲೆಯಲ್ಲಿ 2025- 26ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಹಾಗೂ ದೀಪಾ ಹಸಿರು ಪಡೆಯನ್ನು ಗುರುವಾರ ಉದ್ಘಾಟಿಸಲಾಯಿತು.

ವಿದ್ಯಾರ್ಥಿ ಸಂಘ ಉದ್ಘಾಟಿಸಿದ 14ಕೆಎಆರ್ ಬಿಎನ್ ಎನ್ ಸಿಸಿ ಆಡಳಿತಾಧಿಕಾರಿ ಆರ್.ಎಚ್. ಸಂದೀಪ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಅಧ್ಯಯನ ಮಾತ್ರವಲ್ಲ, ಸಮಾಜದ ಸಂಘ ಜೀವಿಯಾಗಿ, ಪ್ರಕೃತಿ ಪ್ರೇಮಿಯಾಗಿ ಸಮಾಜಕ್ಕೆ ಕೊಡುಗೆ ನೀಡುವ ಮಟ್ಟಿಗೆ ಬೆಳೆಯಬೇಕು. ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದೀಪಾ ಹಸಿರು ಪಡೆಯನ್ನು ಉದ್ಘಾಟಿಸಿದ ಪರಿಸರ ಪರಿಚಾರಕ ಪರಿಸರ ರಮೇಶ್ ಮಾತನಾಡಿ, ಇಂದು ಮನುಷ್ಯರನ್ನು ಕಂಡರೆ ಕಾಡುಗಳೇ ಹೆದರುವ ಪರಿಸ್ಥಿತಿ ಇದೆ. ಪಂಜರದಲ್ಲಿ ಪಕ್ಷಿಗಳನ್ನು ಸಾಕುವ ಬದಲು ಮನೆಯಲ್ಲಿ ಮರವನ್ನು ನೆಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಎಂ. ರಾಮಪ್ಪ ಮಾತನಾಡಿ, ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಕರ್ತವ್ಯ ಮತ್ತು ಜವಾಬ್ದಾರಿಯ ಬಗ್ಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಯ ಪ್ರೌಢಶಾಲಾ ಜೀವನವು ದೊಡ್ಡ ಸಂಪುಟವಿದ್ದಂತೆ ಹಾಗೂ ನಿಮ್ಮ ತಂದೆ- ತಾಯಿಯನ್ನು ನೋಡಿಕೊಳ್ಳುವ ಜೊತೆಗೆ ನಿಮ್ಮ ಶಿಕ್ಷಕರನ್ನು ಮರೆಯಬಾರದು ಎಂದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯನಿ ಶಿಲ್ಪಾ ಜಗದೀಶ್ ಅವರು ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಪೂಜಾರಿ, ಕಾರ್ಯದರ್ಶಿ ವಿ.ಎನ್. ಸುಂದ‌ರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪುಣಿತಾ ಎರ್ಮಾಳ್, ಪ್ರೌಢಶಾಲೆ ಸಹ ಮುಖ್ಯೋಪಾಧ್ಯಾಯನಿ ತುಳಸಿ, ಸಂಯೋಜಕ ರವಿಶಂಕರ್, ಪ್ರಾಥಮಿಕ ವಿಭಾಗದ ಸಂಯೋಜಕಿ ವಾರುಣಿ ರಾವ್‌, ದೀಪಾನಗರದ ದೀಪಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಾಬು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸಂತೋಷ್, ಎಸ್. ಮಂದಾರ, ಎಚ್. ವಿಶ್ವನಾಥ್, ಎಸ್. ಅಶ್ವಿನಿ, ವಾಣಿ, ದೀಪಾ ಹಸಿರು ಪಡೆಯ ಪದಾಧಿಕಾರಿಗಳಾದ ಶಿವಕುಮಾರ್, ಪ್ರಿಯದರ್ಶಿನಿ, ಲತಾ, ರತಿ ಇದ್ದರು.

29 ರಂದು ಸಾಹಿತ್ಯ ಚಾವಡಿ: ಸಂವಾದ

ಮೈಸೂರು: ಕಲಾಸುರುಚಿ ಸಂಸ್ಥೆಯು ಸಾಹಿತ್ಯ ಚಾವಡಿ- ಸಂವಾದ- ಕಾರ್ಯಕ್ರಮ -158ರ ಅಂಗವಾಗಿ ಜೂ.29ರ ಬೆಳಗ್ಗೆ 10.30ಕ್ಕೆ ಕುವೆಂಪುನಗರದ ಚಿತ್ರಭಾನು ರಸ್ತೆಯಲ್ಲಿರುವ ಸುರುಚಿ ರಂಗಮನೆಯಲ್ಲಿ ಕೋವಿಡ್ ಪೂರ್ವ ಮತ್ತು ನಂತರದಲ್ಲಿ ಓದುಗರು/ ಪುಸ್ತಕ ಪ್ರವೃತ್ತಿಗಳು- ಒಂದು ತುಲನಾತ್ಮಕ ನೋಟ ಕುರಿತು ಪತ್ರಕರ್ತೆ ಟೀನಾ ಶಶಿಕಾಂತ್ ಅವರು ಭಾಷಣ ಮಾಡುವರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 98801 45427, 98444 05342 ಸಂಪರ್ಕಿಸಬಹುದು ಎಂದು ಸಂಸ್ಥೆಯ ವಿಜಯಾ ಸಿಂಧುವಳ್ಳಿ ತಿಳಿಸಿದ್ದಾರೆ.