ಸಾರಾಂಶ
ವಿದ್ಯಾರ್ಥಿಗಳು ದೈಹಿಕ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಗಣ್ಯರು ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಗರಗಂದೂರು ಗ್ರಾಮದವರಾದ ಲೆಫ್ಟಿನೆಂಟ್ ಜನರಲ್ ಸಿ ಪಿ ಕಾರ್ಯಪ್ಪ ( ನಿವೃತ್ತ) ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಅನುಭವ ಹಾಗೂ ಸಾಧನೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ವಿದ್ಯಾರ್ಥಿಗಳು ದೈಹಿಕ , ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕ್ರೀಡೆ ಮತ್ತು ಶಿಕ್ಷಣಕ್ಕೆ ಸಮಾನ ಆಸಕ್ತಿಯನ್ನು ಕೊಡಬೇಕು ಎಂದು ಅವರು ಕರೆ ನೀಡಿದರು.ಭಾರತವು ವಿಶ್ವದಲ್ಲಿಯೇ ಪ್ರಬಲ ಸೇನೆಯನ್ನು ಹೊಂದಿದ್ದು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಸೇರಿ ದೇಶ ಸೇವೆ ಮಾಡುವಂತೆಯೂ ಅವರು ಕರೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕರ್ನಲ್ ಬಿ ಜಿ ವಿ ಕುಮಾರ್, ಕಾರ್ಯದರ್ಶಿ ಎಂ ಬಿ ಬೋಪಣ್ಣ, ಪೋಷಕ ಸದಸ್ಯರಾದ ಖ್ಯಾತ ಅಂತಾರಾಷ್ಟ್ರೀಯ ಟೆನಿಸ್ ಪಟು ರೋಹನ್ ಬೋಪಣ್ಣ ಅವರ ತಂದೆ ಮಚ್ಚಂಡ ಬೋಪಣ್ಣ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲ ಮಂದಪ್ಪ, ಮುಖ್ಯ ಶಿಕ್ಷಕಿ ರೀಟಾ, ಶಿಕ್ಷಕ ವೃಂದ , ವಿದ್ಯಾರ್ಥಿಗಳು ಹಾಜರಿದ್ದರು.ಪ್ರಾಂಶುಪಾಲ ಮಂದಪ್ಪ ಸ್ವಾಗತಿಸಿ, ಉಪನ್ಯಾಸಕ ರಾಜಸುಂದರಂ ವಂದಿಸಿ, ಉಪನ್ಯಾಸಕಿ ಪ್ರಮೀಳಾ ನಿರೂಪಿಸಿದರು.
;Resize=(128,128))