ರಾಣಿಬೆನ್ನೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಹೊಂದಿದಾಗ ಪ್ರಗತಿಶೀಲ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಉಮೇಶ ಗುರುಲಿಂಗಪ್ಪಗೌಡ್ರ ಹೇಳಿದರು.
ನಗರದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನ 2026-27 ನೇ ಶೈಕ್ಷಣಿಕ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಿರಿಯ ಜಗದ್ಗುರುಗಳು ಗ್ರಾಮೀಣ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಸಂಸ್ಥೆಯನ್ನು ಕಟ್ಟಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಸುಂಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಯ ವಾಗೀಶ ನೀರಲಗಿಮಠ ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವ ಸಾಧನವಲ್ಲ. ಅದು ಉತ್ತಮ ವ್ಯಕ್ತಿತ್ವ, ಉತ್ತಮ ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆಯಾಗಿದೆ. ಆದ್ದರಿಂದ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಪರಿಸರ ಸಂರಕ್ಷಣೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.ಪ್ರಾ ಕೆ. ಹಳದಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಸಂಜನಾ ಬಾದಾಮಿ, ಹೊನ್ನಮ್ಮ ಹಳ್ಳಕಾರ, ಕಾವೇರಿ ಬಿ.ಬಿ., ಚಂದ್ರು ದೊಡ್ಮನಿ, ಲಾವಣ್ಯ ಹುಣಸಿಮರದ, ರುದ್ರಯ್ಯ ಹಿರೇಮಠ, ಪ್ರಜ್ವಲ್ ಕಾಟೇನಹಳ್ಳಿ, ವಿನಾಯಕ ಚಕ್ರಸಾಲಿ, ದೇವರಾಜ ಹೊನ್ನಕುದುರೆ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಉಪನ್ಯಾಸಕರುಗಳಾದ ರೇವಣ್ಣ ನಾಯ್ಕ್ ಪಿ.ಟಿ., ಎಚ್. ಶಿವಾನಂದ, ಎಚ್.ಓಂಕಾರ್ ನಾಯಕ್, ಶೇಖರ್ ನಾಯಕ್, ಆಶಾ ಆರ್. ಎಸ್., ಪ್ರವೀಣ ಪಾಟೀಲ, ಸುನಿತಾ ಎಸ್. ವಿ., ಯುವರಾಜ ಪಾಟೀಲ, ಮಾಲತೇಶ ಎಚ್. ಕರ್ಲವಾಡ, ಅಭಿರಾಜ ಪಾಟೀಲ, ಆನಂದ್ ಕೆ.ಇ., ಪ್ರಶಾಂತ ಮಾಸಣಗಿ, ಈರಣ್ಣ ಪಾಟೀಲ ಮತ್ತಿತರರಿದ್ದರು.