ಸಾರಾಂಶ
ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಆರೋಗ್ಯವಂತ ಜೀವನ ನಡೆಸಲು ಪ್ರತಿಯೊಬ್ಬರಿಗೂ ಯೋಗ ಅವಶ್ಯವಾಗಿದೆ. ವಿದ್ಯಾರ್ಥಿಗಳು ಯೋಗಾಭ್ಯಾಸ ರೂಢಿಸಿಕೊಂಡು ರೋಗಮುಕ್ತ ಜೀವನ ಶೈಲಿ ಪಾಲಿಸಬೇಕು ಎಂದು ಇಲ್ಲಿಯ ಅನನ್ಯ ಇಂಟರ್‌ನ್ಯಾಶನಲ್ ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.
ಹಾವೇರಿ: ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಆರೋಗ್ಯವಂತ ಜೀವನ ನಡೆಸಲು ಪ್ರತಿಯೊಬ್ಬರಿಗೂ ಯೋಗ ಅವಶ್ಯವಾಗಿದೆ. ವಿದ್ಯಾರ್ಥಿಗಳು ಯೋಗಾಭ್ಯಾಸ ರೂಢಿಸಿಕೊಂಡು ರೋಗಮುಕ್ತ ಜೀವನ ಶೈಲಿ ಪಾಲಿಸಬೇಕು ಎಂದು ಇಲ್ಲಿಯ ಅನನ್ಯ ಇಂಟರ್‌ನ್ಯಾಶನಲ್ ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.
ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಜೀವನ ಅವಿಭಾಜ್ಯ ಅಂಗವಾಗಬೇಕು. ಯೋಗ ಸಾಧನೆಯಿಂದ ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಅಲ್ಲದೇ ಚಂಚಲತೆ ದೂರವಾಗಿ ಏಕಾಗ್ರತೆ ಬರುತ್ತದೆ. ಗುರಿ ಸಾಧನೆಗೆ ಯೋಗವನ್ನು ಸಾಧನವನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾಚಾರ್ಯ ಸಂತೋಷಗೌಡ ಪಾಟೀಲ ಮಾತನಾಡಿ, ಸದೃಢ ಶರೀರದಲ್ಲಿ ಸದೃಢ ಮನಸ್ಸು ನಿರ್ಮಾಣವಾಗಬೇಕಾದರೆ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ದೇಹದ ಆರೋಗ್ಯವು ಸುಧಾರಿಸುತ್ತದೆ ಎಂದು ಹೇಳಿದರು.ಯೋಗಪಟು ಬಿ.ಎಸ್. ಭೀಮಣ್ಣನವರ್ ಮಾರ್ಗದರ್ಶನದಲ್ಲಿ ಯೋಗಾಸನ ಪ್ರದರ್ಶಿಸಲಾಯಿತು. ಶಾಲೆಯ ನಿರ್ದೇಶಕ ಬಸವರಾಜ ಬಿಂಕದಕಟ್ಟಿ, ಪ್ರಮುಖರಾದ ಸಂತೋಷ್ ಹಿರೇಮಠ, ಬಸವರಾಜ ಕೋಟಿ, ಅನನ್ಯ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕಿಶೋರಿ ಕರ್ಮರಿಮಠ ಇತರರು ಇದ್ದರು.
ಶಿಕ್ಷಕಿ ಪೂರ್ಣಿಮಾ ಕ್ಯಾಲಕೊಂಡ ನಿರೂಪಿಸಿದರು. ಕಲಾಶ್ರೀ ಎಚ್. ಪ್ರಾಸ್ತಾವಿಕ ಮಾತನಾಡಿದರು.