ಎಸ್ಪಿ ರೋಹನ್‌ ಜಗದೀಶ್ ಐಪಿಎಸ್‌ ಅಧಿಕಾರಿಯಾಗಬೇಕೆಂಬ ತಮ್ಮ ಗುರಿಯನ್ನು ಸಾಧಿಸಿದ್ದು, ಸಾಧಕನಾಗಿ ಹೊರಹೊಮ್ಮಿ ಯುವ ಸ್ಪರ್ಧಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಕನ್ನಡಪ್ರಭ ಯುವ ಆವೃತ್ತಿ ಸಂದರ್ಶನ

ವೀರೇಶ ಎಸ್‌. ಉಳ್ಳಾಗಡ್ಡಿ, ಮಾಲಗಿತ್ತಿ

ತಮ್ಮ ತಂದೆ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದನ್ನು ಹತ್ತಿರದಿಂದ ಕಂಡ ಇವರು ಅವರಿಂದ ಪ್ರಭಾವೀತರಾಗಿ ತಾವು ಕೂಡ ಐಪಿಎಸ್‌ ಅಧಿಕಾರಿಯಾಗಿ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಅಭಿಲಾಸೆ ಹೊಂದಿದ್ದರು. ಅದರಂತೆಯೇ ಸತತ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ 2018ರ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ 224ನೇ ರ್‍ಯಾಂಕ್‌ನಲ್ಲಿ ಉತ್ತೀರ್ಣರಾದರು. ಐಪಿಎಸ್‌ ಅಧಿಕಾರಿಯಾಗಬೇಕೆಂಬ ತಮ್ಮ ಗುರಿಯನ್ನು ಸಾಧಿಸಿದ್ದು, ಸಾಧಕನಾಗಿ ಹೊರಹೊಮ್ಮಿ ಯುವ ಸ್ಪರ್ಧಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಅವರು ಯಾರೂ ಗೊತ್ತಾ?. 2019ರ ಕರ್ನಾಟಕ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶ್ರೀ ರೋಹನ್ ಜಗದೀಶ್. ಇವರು ಮೂಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಲ್ಳಾಪುರ ತಾಲೂಕಿನ ಕನ್ನಮಂಗಲ ಗ್ರಾಮದವರಾಗಿದ್ದು, ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. 2023ರ ಸೆಪ್ಟೆಂಬರ್‌ದಿಂದ 2025ರ ಜುಲೈ 15ರವರೆಗೆ ಬೆಳಗಾವಿ ನಗರದಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕನ್ನಡಪ್ರಭ ಯುವ ಆವೃತ್ತಿಯೊಂದಿಗೆ ಮುಖಾಮುಖಿಯಾಗಿ ತಮ್ಮ ಶೈಕ್ಷಣಿಕ ಹಿನ್ನೆಲೆ ಹಾಗೂ ಐಪಿಎಸ್‌ ಅಧಿಕಾರಿಯಾಗಲು ಯಾವ ರೀತಿ ತಯಾರಿ ನಡೆಸಿದ್ದಾರೆ ಎಂಬುದರ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಬನ್ನಿ ಅವರ ಐಪಿಎಸ್‌ ಪಯಣ ಹೇಗಿತ್ತು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಪ್ರಾಥಮಿಕ ಹಾಗೂ ಪದವಿ ಶಿಕ್ಷಣವನ್ನು ಎಲ್ಲೇಲಿ ಪೂರೈಸಿದಿರಿ?

ಬೆಂಗಳೂರಿನ ಸೆಂಟ್‌ ಜೋಸೆಫ್‌ ಬಾಯ್ಸ್‌ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದೇನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಕೋರ್ಸ್‌ ಆದ ಬ್ಯಾಚುಲರ್ ಆಫ್ ಆಟ್ಸ್‌ ಆ್ಯಂಡ್‌ ಬ್ಯಾಚುಲರ್ ಆಫ್ ಲೆಜಿಸ್ಲೇಟಿವ್ ಲಾ ( ಬಿ.ಎ. ಎಲ್‌. ಎಲ್‌. ಬಿ) ಪೂರ್ಣಗೊಳಿಸಿದ್ದೇನೆ. ಎಲ್ಲರ ರೀತಿ ನಾನು ಅಭ್ಯಾಸ ಮಾಡಿದ್ದೇನೆ. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದೆ. ಹೀಗಾಗಿ ಯುಪಿಎಸ್ಸಿ ಪಾಸ್‌ ಆಗಲು ಸುಲಭವಾಯಿತು.

ನಿಮಗೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂದು ಏಕೆ ಅನಿಸಿತು ಹಾಗೂ ಐಪಿಎಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?ನಾನು ಬಿ.ಎ. ಎಲ್‌. ಎಲ್‌. ಬಿ ಮುಗಿಸಿದ ನಂತರ ಯುಪಿಎಸ್ಸಿ ಬರೆಯಬೇಕೆಂಬ ಆಸಕ್ತಿ ಬಂತು. ಅಲ್ಲದೆ ನಮ್ಮ ತಂದೆಯವರು ಕೂಡ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ನನಗೆ ಪೊಲೀಸ್‌ ಇಲಾಖೆ ಬಗ್ಗೆ ಕುತೂಹಲ ಇತ್ತು. ಹೀಗಾಗಿ ಅದರಿಂದ ನಾನು ಕೂಡ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣನಾಗಿ ಐಪಿಎಸ್ ಅಧಿಕಾರಿಯಾಗಬೇಕೆಂಬ ಆಲೋಚನೆ ಇದ್ದರಿಂದ ಯುಪಿಎಸ್ಸಿ ಬರೆಯಲು ಆಸಕ್ತಿ ಬಂತು. ಆದ್ದರಿಂದ ಯುಪಿಎಸ್ಸಿ ಪರೀಕ್ಷೆ ಬರೆದೆ ದೇಶಕ್ಕೆ 224ನೇ ರ್‍ಯಾಂಕ್‌ನಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾಗಿದ್ದೇನೆ.

ನೀವು ಯುಪಿಎಸ್ಸಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಿದ್ದೀರಿ?

ನಾನು ಮೂರು ಬಾರಿ ಅಂದರೆ 2016, 2017, 2018ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದೇನೆ. 2016, 2017ರಲ್ಲಿ ಪರೀಕ್ಷೆ ಬರೆದಾಗ ಎರಡು ಬಾರಿ ಫೇಲ್‌ ಆದೆ. ಅದರಲ್ಲಿ ಪ್ರಿಲಿಮ್ಸ್‌ ಪರೀಕ್ಷೆ ಕೂಡ ಪಾಸ್‌ ಆಗಲಿಲ್ಲ. 2018ರಲ್ಲಿ ಬರೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 224ನೇ ರ್‍ಯಾಂಕ್‌ನಲ್ಲಿ ಉತ್ತೀರ್ಣನಾದೆ.

ನೀವು ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ನಡೆಸುವಾಗ ಯಾವ್ಯಾವ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದೀರಿ?

ಎನ್‌ಸಿಆರ್‌ಟಿ ಪುಸ್ತಕ ಓದುತ್ತಿದೆ. ಜೊತೆಗೆ ಪ್ರತಿಯೊಂದು ವಿಷಯದ ಅತ್ಯುತ್ತಮವಾದ ಪುಸ್ತಕಗಳನ್ನು ಓದಿದೆ. ಐಚ್ಚಿಕ ವಿಷಯದ ಪುಸ್ತಕವನ್ನು ಕೂಡ ಚೆನ್ನಾಗಿ ಓದಿದೆ. ರಾಜ್ಯಶಾಸ್ತ್ರ ನನ್ನ ಐಚ್ಚಿಕ ವಿಷಯವಾಗಿತ್ತು. ಪ್ರಶ್ನೆ ಪತ್ರಿಕೆಗಳನ್ನು ಬಹಳ ಬಿಡಿಸುವುದನ್ನು ರೂಢಿ ಮಾಡಿಕೊಳ್ಳುತ್ತಿದೆ. ಟೆಸ್ಟ್‌ ಸಿರೀಜ್‌ ಬರೆಯುತ್ತಿದೆ. ಓದಿದ ವಿಷಯವನ್ನು ಪದೇ ಪದೆ ಮನನ ಮಾಡಿಕೊಳ್ಳುತ್ತಿದೆ. ಆದ್ದರಿಂದ ಯುಪಿಎಸ್ಸಿ ಪರೀಕ್ಷೆ ಉತ್ತೀರ್ಣ ಆಗಲು ಅನುಕೂಲವಾಯಿತು.

ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವ ಸ್ಪರ್ಧಾರ್ಥಿಗಳಿಗೆ ನೀವು ಯಾವ ರೀತಿಯ ಸಲಹೆಗಳನ್ನು ಕೊಡುತ್ತೀರಿ?

ಬಹಳ ಕಷ್ಟಪಟ್ಟು ಓದಬೇಕು. ಜೊತೆಗೆ ಪ್ರತಿ ದಿನ ನೀವು ಓದಿದ ವಿಷಯವನ್ನು ಪದೇ ಪದೆ ಮನನ ಮಾಡಿಕೊಳ್ಳಬೇಕು. ರಿಸ್ಟ್ರಾಕ್ಷನ್ಸ್‌ಗೆ (ನಿರ್ಬಂಧ) ಒಳಗಾಗಬಾರದು. ಓದಿದ್ದನ್ನು ಮತ್ತೆ ಮತ್ತೆ ಓದಬೇಕು. ಯಾವುದಕ್ಕೂ ನಿರಾಸೆಯಾಗಬಾರದು. ಡಿಸ್‌ಸರ್ಟ್‌ನ್‌ ಆಗಬಾರದು. ಫೇಲೂವರ್‌ ಬಂದರೂ ಕೂಡ ಗಟ್ಟಿಯಾಗಿ ನಿಂತು ದೃಢ ನಿಶ್ಚಯ ಮಾಡಿ ಕಷ್ಟ ಪಟ್ಟು ಆಭ್ಯಾಸ ಮಾಡದರೆ ಸುಲಭವಾಗಿ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್‌ ಮಾಡಬಹುದು. ನಾವು ಸಮಾಜದಲ್ಲಿ ಏನೇ ಕೆಲಸ ಮಾಡಿದರೂ ಬಹಳ ಉತ್ತಮವಾದ ರೀತಿಯಲ್ಲಿ ಮಾಡಬೇಕು. ಅಲ್ಲದೆ ಸಮಾಜಕ್ಕೆ ನಾವು ಆಸ್ತಿ ತರ ಇರಬೇಕು. ಯಾವುದೇ ರೀತಿ ತಪ್ಪು ದಾರಿ ಹಿಡಿಯಬಾರದು. ನಮ್ಮಿಂದ ನಾಲ್ಕು ಜನಕ್ಕೆ ಅನುಕೂಲವಾಗುತ್ತೆ ಅಂತಾದರೆ ಆ ನಿಟ್ಟಿನಲ್ಲಿ ಹೆಜ್ಜೆ ಹಾಕಿ ಮುಂದೆ ಹೋಗಬೇಕು.

ಸ್ಪರ್ಧಾರ್ಥಿಗಳು ಐಎಸ್‌ಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌, ಕೆಎಎಸ್‌ ಸೇರಿದಂತೆ ಇನ್ನಿತರ ಉನ್ನತ ಹಂತದ ಹುದ್ದೆಗಳನ್ನು ಪಡೆಯಬೇಕೆಂದು ಗುರಿ ಇಟ್ಟುಕೊಂಡು ಓದುತ್ತಿರುತ್ತಾರೆ. ಆದರೆ ಪಿಎಸ್‌ಐ, ಕಾನ್ಸ್‌ಸ್ಟೇಬಲ್‌ ಹುದ್ದೆ ಸಿಕ್ಕರೆ ಅದಕ್ಕೆ ತೃಪ್ತಿಯಾಗಿ ಸುಮ್ಮನಾಗುತ್ತಾರೆ. ಅಂತಹವರಿಗೆ ನೀವು ಏನು ಹೇಳಲು ಬಯಸುತ್ತೀತಿರಿ?

ಈ ಹುದ್ದೆ ಆ ಹುದ್ದೆ ಅಂತ ಹೇಳಲು ಆಗುವುದಿಲ್ಲ. ನೀವು ಯಾವ ಹುದ್ದೆ ಪಡೆಯಬೇಕು ಎಂದುಕೊಂಡಿದ್ದೀರಿ ಆ ಹುದ್ದೆಯ ಬಗ್ಗೆ ಧೃಢ ನಿಶ್ಚಯ ಇರಬೇಕು. ನಿಮಗೆ ಒಂದು ಗುರಿ ಇದ್ದರೆ ಅದನ್ನೇ ಪಡೆಯಲು ಮುಂದಾಗಬೇಕು. ಅಲ್ಲದೆ ನೀವು ಯಾವ ಗುರಿ ಇಟ್ಟುಕೊಂಡಿರುತ್ತೀರಿ ಅದರ ಬಗ್ಗೆ ಗಮನಕೊಡಬೇಕು. ಅದಕ್ಕಾಗಿ ಪ್ರತಿ ನಿತ್ಯ ಕಠಿಣ ಪರಿಶ್ರಮ ವಿನಿಯೋಗಿಸಿ ಅಭ್ಯಾಸ ಮಾಡಬೇಕು, ಅಂದಾಗ ಮಾತ್ರ ನೀವು ನಿಗದಿ ಮಾಡಿಕೊಂಡಿರುವ ಗುರಿ ತಲುಪಲು ಸಾಧ್ಯವಾಗುತ್ತದೆ.

ನೀವು ಕೇಂದ್ರ ಸರ್ಕಾರದ ಯಾವುದಾದರೂ ಹುದ್ದೆ ಸಿಗಲಿ ಅಂತನೋ ಅಥವಾ ಐಪಿಎಸ್‌ ಅಧಿಕಾರಿಯಾಗಬೇಕೆಂದು ಯುಪಿಎಸ್ಸಿ ಪರೀಕ್ಷೆ ಬರೆದ್ರಾ?

ನಾನು ಯಾವುದೇ ಸರ್ಕಾರಿ ಹುದ್ದೆ ಬೇಕು ಅಂತ ಯುಪಿಎಸ್ಸಿ ಬರೆದಿಲ್ಲ, ನಾನು ಬರಿ ಐಪಿಎಸ್‌ ಅಧಿಕಾರಿಯಾಗಬೇಕೆಂದು ಯುಪಿಎಸ್ಸಿ ಬರೆದಿದ್ದೇನೆ. ನನ್ನ ಪ್ರಥಮ ಆಯ್ಕೆಯು ಕೂಡ ಐಪಿಎಸ್‌ ಆಗಿತ್ತು. ಐಪಿಎಸ್‌ ಆಗದಿದ್ದರೆ ನಾನು ವಕೀಲನಾಗಿ ಕೆಲಸ ಮಾಡುತ್ತಿದೆ. ಯುಪಿಎಸ್ಸಿಗೆ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಿಂದಲೇ ತಯಾರಿ ನಡೆಸಿದರೆ ಮುಂದಿನ ದಿನಗಳಲ್ಲಿ ಯುಪಿಎಸ್ಸಿ ಉತ್ತೀರ್ಣ ಆಗಲು ಸುಲಭವಾಗಬಹುದಾ?. ನಿಮ್ಮ ಯುಪಿಎಸ್ಸಿ ಪಯಣ ಹೇಗಿತ್ತು ತಿಳಿಸಿ.

ಅವರಿಗೆ ಯಾವ ರೀತಿ ಅನುಕೂಲವಾಗುತ್ತದೆ ಹಾಗೆ ಮಾಡಬೇಕು. ನಾನು ಬಿ.ಎ. ಎಲ್‌. ಎಲ್‌. ಬಿ ಮುಗಿಸಿದ ನಂತರ ಸ್ವಲ್ಪ ದಿನ ಲಾ ಪ್ರಾಕ್ಟೀಸ್‌ ಮಾಡಿದೆ. 23-24 ವಯಸ್ಸಿಗೆ ಓದಲು ಆರಂಭಿಸಿದೆ. 27ನೇ ವಯಸ್ಸಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್‌ ಆಗಿ ಐಪಿಎಸ್‌ ಅಧಿಕಾರಿಯಾದೆ. ನಾನು ಚಿಕ್ಕವನಿಂದ ಓದಿದ್ದು ಆತರ ಏನಿಲ್ಲ. ಎಲ್ಲಾ ಹುಡುಗರ ಕ್ರೀಕೆಟ್‌, ಪುಟ್‌ಬಾಲ್‌ ಆಡಿ ಬೆಳೆದರು ನಾನು ಹೇಗೆ ಬೆಳೆದು. ನನ್ನಲ್ಲಿ ಏನು ವಿಶೇಷತೆಗಳಿಲ್ಲ. ಎಲ್ಲರಂತೆ ನಾನು ಸಾಧಾರಣ ವ್ಯಕ್ತಿ. 23-24 ವಯಸ್ಸಿಗೆ ಓದಬೇಕು ಅನಕೊಂಡು ಬಹಳ ಸಾಧಾರಣವಾದ ರೀತಿಯಲ್ಲಿ ಕಷ್ಟಪಟ್ಟು ಓದಿ ಯುಪಿಎಸ್ಸಿ ಪಾಸ್‌ ಮಾಡಿದೆ. ಬೇರೆಯವರ ರೀತಿ ನನ್ನದು ಅದ್ಬುತವಾದ ಕಥೆ ಏನಿಲ್ಲ. ನಾನು ಬಹಳ ಸಾಧಾರಣವಾಗಿ ಓದಿದ್ದೇನೆ. ನಾನು ಬಹಳ ಸಾಧಾರಣ ವ್ಯಕ್ತಿ.

ಯುಪಿಎಸ್ಸಿ ಪರೀಕ್ಷೆಗೆ ಸ್ವತಃ ತಯಾರಿ ಮಾಡಿಕೊಂಡರೆ ಪಾಸ್‌ ಆಗಬಹುದಾ ಅಥವಾ ಕೋಚಿಂಗ್‌ ಪಡೆಯುವ ಅಗತ್ಯ ಇದೆನಾ?

ಕೋಚಿಂಗ್‌ ತೆಗೆದುಕೊಳ್ಳುವುದು, ಬಿಡುವುದು ಅವರ ಮೇಲೆ ಡಿಫೆಂಡ್‌ ಆಗಿರುತ್ತದೆ. ನಾನು ಸ್ವಲ್ಪ ಕೋಚಿಂಗ್‌ ತೆಗೆದುಕೊಂಡಿದ್ದೇನೆ. ಯುಪಿಎಸ್ಸಿ ಎಂದರೆ ಏನು, ಹೇಗೆ, ಯಾವ ರೀತಿ ಓದಬೇಕು. ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಮತ್ತು ಪರೀಕ್ಷೆಯಲ್ಲಿ ಯಾವ ರೀತಿ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಸ್ವಲ್ಪ ಕೋಚಿಂಗ್‌ ತೆಗೆದುಕೊಂಡರೆ ಅನುಕೂಲವಾಗುತ್ತದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿರುತ್ತಾರೆ. ಹೀಗಾಗಿ ಗ್ರಾಮೀಣರ ಯುಪಿಎಸ್ಸಿ ಉತ್ತೀರ್ಣತೆ ಪ್ರಮಾಣ ಕಡಿಮೆ ಇದೆ. ಇದಕ್ಕೆ ಇಂಗ್ಲಿಷ್‌ ಭಾಷೆಯ ಕೊರತೆ ಕಾರಣವಾಗುತ್ತಾ?

ಗ್ರಾಮೀಣ, ಪಟ್ಟಣ, ನಗರದ ಅಂತ ಏನೂ ಇಲ್ಲ. ನಮ್ಮ ಭಾರತದ ಸಂವಿಧಾನದಲ್ಲಿ ಸೆಡ್ಯೂಲ್‌ 8 ಅಲ್ಲಿ ಎಷ್ಟು ಭಾಷೆಯನ್ನು ಗುರುತಿಸಲಾಗಿದೆ. ಅಷ್ಟೂ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಾಗೂ ಗುಜರಾತ್‌ನಿಂದ ಅರುಣಾಚಲಪ್ರದೇಶದವರೆಗೂ ಎಲ್ಲರಿಗೂ ಸಮತೋಲನವಾಗಿ ಪರೀಕ್ಷೆಯನ್ನು ರೂಪಿಸಿರುತ್ತಾರೆ. ಯುಪಿಎಸ್ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಕೂಡ ಬರೆಯಬಹುದು. ಸಂದರ್ಶನವನ್ನು ಕೂಡ ಕನ್ನಡದಲ್ಲಿ ಕೊಡಬಹುದು. ಯಾವುದೇ ಭಾಷೆಯಾದರೂ ನಡೆಯುತ್ತದೆ. ಯಾರೂ ಪರಿಶ್ರಮ ಪಟ್ಟು ಓದುತ್ತಾರೆ ಅವರು ಪಾಸ್‌ ಆಗುತ್ತಾರೆ.

ಪೊಲೀಸರ ಬಗ್ಗೆ ವಿದ್ಯಾರ್ಥಿಗಳಿಗೆ ಭಯ ಇರುತ್ತದೆ. ಆ ಭಯ ಹೋಗಲಾಡಿಸಲು ಸರ್ಕಾರ ಶಾಲಾ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮವನ್ನು ರೂಪಿಸಿದೆ. ಈ ಕಾರ್ಯಕ್ರಮ ಸಣ್ಣಪುಟ್ಟ ಹಳ್ಳಿ ಮಕ್ಕಳಿಗೆ ಗೊತ್ತಿಲ್ಲ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?.

ನಾವು ಪ್ರತಿಯೊಂದು ಕೆಲಸಗಳನ್ನು ಕೂಡ ಸಾರ್ವಜನಿಕರಿಗೆ ಹತ್ತಿರವಾಗುವುದಕ್ಕೆ ಮಾಡುತ್ತೇವೆ. ಮನೆ ಮನೆಗೆ ಪೊಲೀಸ್‌ ಆಗಿರಲಿ, ಬೀಟ್‌ ವ್ಯವಸ್ಥೆ ಆಗಿರಲಿ, ತೆರದ ಮನೆ ಕಾರ್ಯಕ್ರಮ ಆಗಿರಲಿ ಯಾವುದೇ ಇದ್ದರೂ ಕೂಡ ಜನರ ಜೊತೆಗೆ ಉತ್ತಮ ಸಂಪರ್ಕ ಬೆಳೆಸಿಕೊಳ್ಳುತ್ತೇವೆ. ಇದರಿಂದ ಮಾಹಿತಿ ಆಗಿರಲಿ ಮತ್ತು ಅವರ ಯಾವುದೇ ಸಮಸ್ಯೆ ಪರಿಹರಿಸಲು ಸಹಕಾರಿಯಾಗುತ್ತದೆ. ಸಮಾಜವನ್ನು ಉತ್ತಮ ರೀತಿಯಲ್ಲಿ ಕಟ್ಟಲು ಬಹಳ ಅನುಕೂಲವಾಗುತ್ತದೆ.

ಇದುವರೆಗೂ ಪೊಲೀಸ್‌ ಇಲಾಖೆಯಲ್ಲಿ ನಿಮಗೆ ನೆನೆಪಿನಲ್ಲಿ ಉಳಿಯುವಂತಹ ನಡೆದ ಘಟನೆಗಳಾವುವು?

ಪ್ರತಿ ದಿನವೂ ನಡೆಯುವ ಘಟನೆಗಳು ಕೂಡ ನನಗೆ ನೆನಪಿನಲ್ಲಿ ಉಳಿಯುವಂತಹ ಘಟನೆಗಳೇ. ಅಲ್ಲದೆ ಪ್ರತಿಯೊಂದು ದಿನವೂ ನಾನು ಮಾಡುವ ಕೆಲಸ ಮೇಲೆ ನನಗೆ ತೃಪಿ ಇದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್‌ವಿಪಿಎನ್‌ಪಿಎ) ಐಪಿಎಸ್‌ ಅಧಿಕಾರಿಗಳಿಗೆ ಯಾವ ರೀತಿ ತರಬೇತಿ ನೀಡಲಾಗುತ್ತದೆ?

ಹೈದರಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್‌ ಅಧಿಕಾರಿಗಳಿಗೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತಹ ತರಬೇತಿಯನ್ನು ಬಹಳ ಉತ್ತಮ ರೀತಿಯಲ್ಲಿ ನೀಡಲಾಗುತ್ತಿದೆ. ನಮಗೆ ಒಂದು ಮುಕ್ಕಾಲು ವರ್ಷ ತರಬೇತಿ ನೀಡಲಾಗುತ್ತದೆ. ಪೊಲೀಸ್‌ ಇಲಾಖೆಗೆ ಏನೇನು ಅವಶ್ಯಕತೆ ಇದೆ. ಮತ್ತು ನಮ್ಮ ಪೊಲೀಸ್‌ ವೃತ್ತಿ ಅಗತ್ಯವಾಗಿ ಬೇಕಾಗಿರುವ ಕೌಶಲ್ಯಗಳನ್ನು ಕಲಿಸುತ್ತಾರೆ. ನಾನು ತರಬೇತಿ ಅವಧಿಯಲ್ಲಿ ಬಹಳ ಚೆನ್ನಾಗಿ ಕಲಿತುಕೊಂಡೆನು.

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಾದರೆ ದಿನದಲ್ಲಿ ಎಷ್ಟು ಗಂಟೆ ಮತ್ತು ಹೇಗೆ ಅಭ್ಯಾಸ ಮಾಡಬೇಕು?

ಇಷ್ಟೇ ಗಂಟೆ ಓದಿದರೆ ಮಾತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್‌ ಆಗುತ್ತಾರೆ ಎಂಬುದೇನಿಲ್ಲ. ಕಷ್ಟಪಟ್ಟು ಓದಬೇಕು, ನಾವು ಎಷ್ಟು ಅಂದುಕೊಂಡಿರುತ್ತೇವೆಯೋ ಅಷ್ಟು ಓದಬೇಕು. ಗಂಟೆಗಳ ಲೆಕ್ಕ ಏನು ಇಲ್ಲ. ಅಲ್ಲದೆ ಓದು ಎಂಬುದು ತಕ್ಕಡಿ ಅಲ್ಲ. ನಿಮ್ಮ ಮನಸ್ಸಿಗೆ ತೃಪ್ತಿ ಆಗುವವರೆಗೂ ಓದಬೇಕು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ತಲ್ಲೀನರಾಗಿದ್ದಾರೆ. ಅದರಿಂದ ಅವರನ್ನು ಹೊರ ತರಬೇಕಾದರೆ ಪಾಲಕರು ಯಾವ ರೀತಿ ಪ್ರಯತ್ನ ಮಾಡಬೇಕು?

ಜೀವನದಲ್ಲಿ ಏನು ಬೇಕು ಎಂಬುದು ವಿದ್ಯಾರ್ಥಿಗಳಿಗೆ ಗೊತ್ತಿದ್ದರೆ ಏನೇ ಡಿಸ್‌ಟ್ರ್ಯಾಕ್ಷನ್ ಬಂದರೂ ಅದನ್ನು ಅವರು ಎದುರಿಸುತ್ತಾರೆ. ಡಿಸ್‌ಟ್ರ್ಯಾಕ್ಷನ್ ಇದೆ ಎಂದರೆ ಡಿಸ್‌ಟ್ರ್ಯಾಕ್ಷನ್ ಒಳಗಾಗುತ್ತಿದ್ದರೆ ಅವರಿಗೆ ಸಿರಿಯಸೇ ಇಲ್ಲ. ಏನೇ ಇದ್ದರನು ನೀವು ಯಾವ ರೀತಿ ಗುರಿ ಇಟ್ಟುಕೊಂಡಿರುತ್ತೀರಿ ಅದರ ಬಗ್ಗೆ ಅತೀ ಹೆಚ್ಚು ಗಮನ ಕೊಡಬೇಕು. ಪಾಲಕರು ಕೂಡ ಮಕ್ಕಳ ಮೊಬೈಲ್‌ ಬಳಕೆ ಬಗ್ಗೆ ನಿಗಾವಹಿಸಬೇಕು.

ನೀವು ಪೊಲೀಸ್‌ ಇಲಾಖೆ ಬೇಧಿಸಿರುವಂತಹ ಡೊಡ್ಡ ಪ್ರಕರಣಗಳು ಯಾವುವು?

ಡೊಡ್ಡದು, ಸಣ್ಣದು ಪ್ರಕರಣಗಳು ಅಂತ ಏನು ಇಲ್ಲ. ತುಂಬಾ ಚಿಕ್ಕ ಪ್ರಕರಣಗಳೂ ಕೂಡ ಒಬ್ಬರಿಗೆ ಡೊಡ್ಡ ಪ್ರಕರಣವೇ ಎನಿಸುತ್ತದೆ. ನಾವು ಪ್ರತಿಯೊಂದು ಪ್ರಕರಣಗಳನ್ನು ಮನಸ್ಸಿಂದ ಭೇದಿಸಿರುತ್ತೇವೆ. ನನಗೆ ಪ್ರಕರಣದಲ್ಲಿ ಭೇದ ಭಾವ ಇಲ್ಲ. ಎಲ್ಲವನ್ನು ನಾವು ಜನರ ಹಿತಾಸ್ತಕಿಗೋಸ್ಕರ ಮಾಡಿರುತ್ತೇವೆ.