ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗುವ ಸಾಧ್ಯತೆ ಇದ್ದು, ಕಂಪ್ಲಿಯ ನಿವಾಸಿಗಳನ್ನು ಗೆಲ್ಲಿಸಲು ಜನತೆ ಮುಂದಾಗಬೇಕು ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.ತಾಲೂಕಿನ ನಂ.10ಮುದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ₹1.60 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ತಾಲೂಕು ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ, ತಾಲೂಕು ಮಹತ್ವಾಕಾಂಕ್ಷೆ ಯೋಜನೆ(ಎಬಿಪಿ)ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಕ್ಷೇತ್ರದ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಿದ ಎಲ್ಲಾ ಅಧಿಕಾರಿಗಳ ಕಾರ್ಯ ಶ್ಲಾಘನಿಯ ಎಂದರು.ತಾಪಂ ಇಒ ಆರ್.ಕೆ. ಶ್ರೀಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಆರು ಕ್ಷೇತ್ರಗಳಲ್ಲಿ ಹಿಂದುಳಿದಿದ್ದು ಎಬಿಪಿ ಯೋಜನೆ ಅನುಷ್ಠಾನಗೊಳಿಸಲಾಯಿತು. ಇದರಲ್ಲಿ ಆರೋಗ್ಯ ಕ್ಷೇತ್ರದ ಎರಡು, ಕೃಷಿ ಕ್ಷೇತ್ರದ ಒಂದು ಅಂಶಗಳಲ್ಲಿ ನೂರಕ್ಕೆ ನೂರರಷ್ಟು ಸಾಧನೆಗೈದಿದ್ದರಿಂದ ಕಂಚಿನ ಪದಕಗಳಿಸಿದೆ. ಕಾರಣರಾದ ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಸಾಧನೆಗೈದ ಹತ್ತು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.ಗ್ರಾಪಂ ಅಧ್ಯಕ್ಷೆ ಸೋಮೇಶ್ವರಿ, ಜಿಲ್ಲಾ ನೋಡಲ್ ಅಧಿಕಾರಿ ವಾಗೀಶ್, ತಾಲೂಕು ಆಡಳಿತಾಧಿಕಾರಿ ಪರಿಮಳ, ಎಇಇ ಹರೀಶ್, ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ. ದಾನಪ್ಪ, ಪ್ರಮುಖರಾದ ಕೆ.ಎಸ್. ಮಲ್ಲನಗೌಡ, ಎನ್.ಹಬೀಬ್ ರೆಹಮಾನ್, ಸಿ.ಆರ್. ಹನುಮಂತ, ಕೆ.ಷಣ್ಮುಖ, ಬಿ.ನಾರಾಯಣಪ್ಪ, ಎಚ್.ಜಗದೀಶಗೌಡ, ಎನ್.ಮಲ್ಲಿಕಾರ್ಜುನ, ಕಾಳಿಂಗವರ್ಧನ, ಕೆ.ಸೋಮಶೇಖರ, ಶ್ರೀಧರ, ಕೆ.ಸೋಮಶೇಖರ ಸೇರಿ ಇತರರಿದ್ದರು.