ಸಾರಾಂಶ
ಗುಂಡ್ಲುಪೇಟೆ : ಕಾಡಾನೆ ಜೊತೆ ಫೋಟೊ ಆಸೆಗೆ ವ್ಯಕ್ತಿಯ ಜೀವವೇ ಹೋಗುವ ಪರಿಸ್ಥಿತಿ ಎದುರಾದರೂ ಆನೆ ಕಾಲಿಗೆ ಸಿಲುಕಿಯೂ ಸಾವಿನಿಂದ ಬಚಾವ್ ಆದ ಅಪರೂಪದ ಘಟನೆ ಬಂಡೀಪುರ ಅರಣ್ಯದಲ್ಲಿ ಭಾನುವಾರ ಸಂಜೆ ನಡೆದಿ ಕೆಕ್ಕನಹಳ್ಳ ಸಮೀಪ ಭಾನುವಾರ ಸಂಜೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕೆಕ್ಕನಹಳ್ಳಿ ಚೆಕ್ ಪೋಸ್ಟ್ ಬಳಿ ಕಾಡಾನೆ ಫೋಟೋ ತೆಗೆಯಲು ಕಾರಿಂದ ಇಳಿದಿದ್ದ ನಂಜನಗೂಡಿನ ನಿವಾಸಿ ಬಸವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಸವರಾಜು ತಮಿಳುನಾಡಿನ ಮಸಣಗುಡಿ ಬಳಿಯ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದನು. ಬಿಳಿ ಬಣ್ಣದ ಶರ್ಟ್ ಧರಿಸಿದ್ದು, ರಸ್ತೆ ಬದಿ ಕಾಡಾನೆ ಕಂಡು ಫೋಟೊ ತೆಗೆಯಲು ಕೆಳಕ್ಕೆ ಇಳಿದಿದ್ದಾನೆ.
ಅಷ್ಟರಲ್ಲಿ ಆನೆ ಮುಂದೆಯೇ ಬಳಿ ಕಾರು ಚಲಿಸುವುದು ಕಂಡ ರೊಚ್ಚಿಗೆದ್ದ ಆನೆಯ ಕಾರಿನ ಮೇಲೆ ದಾಳಿ ಮಾಡಲು ಮುಂದಾದರೂ ಅಲ್ಲೇ ಫೋಟೋ ತೆಗೆಯಲು ಕೆಳಗೆ ಇಳಿದಿದ್ದ ವ್ಯಕ್ತಿಯನ್ನು ಅಟ್ಟಾಡಿಸಿದೆ. ಆನೆ ದಾಳಿಗೆ ಒಳಗಾದ ವ್ಯಕ್ತಿಯು ಕೆಲ ಸಮಯ ರಸ್ತೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಅವರ ಕಡೆಯವರೆ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಬಂಡೀಪುರ ಎಸಿಎಫ್ ಎನ್.ಪಿ.ನವೀನ್ ಕುಮಾರ್ ಮಾತನಾಡಿ, ಕಾಡಾನೆಯಿಂದ ಪಾರಾದ ಬಸವರಾಜುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವಶಕ್ಕೆ ಪಡೆದ ಬಸವರಾಜುನನ್ನು ಸ್ವತಃ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ವಿಚಾರಣೆ ಮಾಡಿದ್ದಾರೆ.
ಆನೆ ಕಾಲಿನಡಿಗೆ ಸಿಲುಕಿ ಪಾರಾದ ಬಸವರಾಜುಗೆ ಇಲಾಖೆ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ಬಂಡೀಪುರದಲ್ಲಿ ಆಗಾಗ್ಗೆ ತರಕಾರಿ ವಾಹನಗಳ ಮೇಲೆ ದಾಳಿ ಮಾಡುವ ಕಾಡಾನೆ ದಾಳಿ ಮಾಡಿದ್ದು, ಸವಾರರು ಕೂಡ ಕೆಲ ನಿಯಮ ಪಾಲಿಸಬೇಕು .ವಾಹನಗಳಿಂದ ಕೆಳಕ್ಕೆ ಇಳಿದು ಹುಚ್ಚಾಟ ನಡೆಸಬಾರದು ಎಂದು ಬಂಡೀಪುರ ವಲಯ ಅರಣ್ಯಾಧಿಕಾರಿ ಮಹದೇವ್ ಕನ್ನಡಪ್ರಭಕ್ಕೆ ತಿಳಿಸಿದರು.