ಪ್ರತಿಯೊಬ್ಬ ಮಗುವಿನಲ್ಲಿ ಪ್ರತಿಭೆ ಮನೆ ಮಾಡಿರುತ್ತದೆ. ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಹೊರ ತರಲು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು
ಯಲಬುರ್ಗಾ: ಪ್ರತಿಭೆಗೆ ಬಡತನ, ಜಾತಿ ಅಡ್ಡ ಬರುವದಿಲ್ಲ. ಶ್ರದ್ಧೆ ಮತ್ತು ಆತ್ಮವಿಶ್ವಾಸವಿದ್ದಲ್ಲಿ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಡಾ. ಮಂಜುನಾಥ ಕುಕನೂರ ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದಿಂದ ನಡೆದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಕರಣ್‌ಕುಮಾರ ಸುಭಾಷ ಬೆಟಗೇರಿ ಭಾಗವಹಿಸಿ ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದ ಹೆಮ್ಮೆಯ ಪುತ್ರನಾಗಿದ್ದಾನೆ ಎಂದರು.
ಪ್ರತಿಯೊಬ್ಬ ಮಗುವಿನಲ್ಲಿ ಪ್ರತಿಭೆ ಮನೆ ಮಾಡಿರುತ್ತದೆ. ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಹೊರ ತರಲು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದರು.ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ, ಪ್ರೌಢ ಶಾಲಾ ಮಟ್ಟದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿದ್ದು ನಮ್ಮ ಗ್ರಾಮಕ್ಕೆ ಅಷ್ಟೇ ಅಲ್ಲ ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯ ಹೆಸರು ತಂದಿದ್ದಾನೆ. ಇದರ ಹಿಂದೆ ಪಾಲಕರ ಪೋಷಕರ ಶ್ರಮವೂ ಇದೆ ಎಂದರು.
ಇದೆ ವೇಳೆ ಕರಣ್‌ಕುಮಾರ ಸುಭಾಷ್ ಬೆಟಗೇರಿಯನ್ನು ಸಂಘ,ಸಂಸ್ಥಯವರು ಸನ್ಮಾನಿಸಿ ಗೌರವಿಸಿದರು. ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಕರವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಶರಣಪ್ಪಗೌಡ ಪಾಟೀಲ್, ಶರಣಬಸಪ್ಪ ದಾನಕೈ, ಶ್ಯಾಮೀದ್‌ಸಾಬ್ ಮುಲ್ಲಾ, ಬಸವರಾಜ ಉಳ್ಳಾಗಡ್ಡಿ, ಭೀಮಣ್ಣ ಬಂಡಿ, ಮುತ್ತಣ್ಣ ಗೊಂಗಡಶೆಟ್ಟಿ, ನಾಗಪ್ಪ ಸೋಮಣ್ವವರ, ಶರಣಯ್ಯ ಮಾವಿನಗಿಡದ, ವೀರಣ್ಣ ಅರಳಿ, ಕಳಕಪ್ಪ ರಾಟಿ, ವೀರಪ್ಪ ಅಬ್ಬಿಗೇರಿ, ಪರಶುರಾಮ ಲಮಾಣಿ, ಮರ್ದಾನಸಾಬ್ ಮುಲ್ಲಾ, ಗೌಡಪ್ಪ ಬಲಕುಂದಿ, ರಾಮಣ್ಣ ಹೊಕ್ಕಳದ, ಮಂಜುನಾಥ ನಿಂಗೋಜಿ, ಕೆ.ಆರ್. ಬಟಗೇರಿ, ಗವಿಸಿದ್ಧಪ್ಪ ಬಟಗೇರಿ, ಶರಣಪ್ಪ ಕುರಿ, ಶರಣಪ್ಪ ಹೊಸಳ್ಳಿ, ಯುವಕ ಮಂಡಳ ಅಧ್ಯಕ್ಷ ನಿಖಿಲ್ ಗೊಂಗಡಶೆಟ್ಟಿ ಸೇರಿದಂತೆ ಇತರರು ಇದ್ದರು.