ಸಾರಾಂಶ
ಅಂಕೋಲಾ: ಮಹಿಳಾ ಸಮಾನತೆಯ ಸಿದ್ಧಾಂತ ಕೇವಲ ಬಾಯಿ ಮಾತಿನಲ್ಲಿನಲ್ಲಿದೆಯೇ ಹೊರತು ಕಾರ್ಯರೂಪದಲ್ಲಿಲ್ಲ ಎಂದು ಸರ್ಕಾರಿ ತಾಲೂಕಾಸ್ಪತ್ರೆಯ ತಜ್ಞ ವೈದ್ಯೆ ಡಾ.ಅನುಪಮಾ ನಾಯಕ ಆತಂಕ ವ್ಯಕ್ತಪಡಿಸಿದರು.ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಂಕೋಲಾ ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಮತ್ತು ಹಿಂದುಳಿದ ಗುಡ್ಡಗಾಡು ಜನರ ವಿಕಾಸ ಸಂಘದ ಆಶ್ರಯದಲ್ಲಿ ಸಂಘಟಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಸಮಾನತೆ ನೀಡಲಾಗಿದೆ ಎಂಬ ಮಾತು ಆಧುನಿಕ ಸಮಾಜದಲ್ಲಿ ಸಾಮಾನ್ಯವಾಗಿದೆ. ಆದರೆ, ನಿಜವಾಗಿ ಇದು ಎಷ್ಟು ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂಬುದನ್ನು ಅಳತೆ ಮಾಡುವುದು ಸುಲಭವಲ್ಲ. ಸ್ಥಿತಿವಂತ ಕುಟುಂಬದಲ್ಲಿ ಕೂಡ ಮಹಿಳೆಯರ ಮೇಲೆ ದೌರ್ಜನ್ಯಗೆ ನಡೆಯುತ್ತಿದೆ ಎಂಬದು ವಾಸ್ತವ ಅಂಶವಾಗಿದೆ ಎಂದರು.ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ, ಅಂಕೋಲಾದ ಸಾಂತ್ವನ ಮಹಿಳಾ ಕೇಂದ್ರವು ಅನೇಕ ನೊಂದ ಜೀವಕ್ಕೆ ಬೆಳಕಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಮಾದರಿಯಾಗಿದೆ. ಮಹಿಳೆಯರು ಇದರ ಸಂಪೂರ್ಣ ಪ್ರಯೋಜನ ಪಡೆಯುವದರ ಮೂಲಕ ಸಮಾಜಮುಖಿಯಾಗಿ ಎಂದರು.
ಸಾಂತ್ವನ ಕೇಂದ್ರದ ಅಧ್ಯಕ್ಷ ಪ್ರಾಣೇಶ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೆಲವು ಮಂದಿ ಮುಕ್ತವಾಗಿ ಬಹಿರಂಗಪಡಿಸುತ್ತಾರೆ. ಆದರೆ ಬಹುತೇಕ ಮಹಿಳೆಯರು ಸಮಾಜದ ಒತ್ತಡದಿಂದ, ಕುಟುಂಬದ ಗೌರವ ಕಾಪಾಡುವ ನಿಟ್ಟಿನಲ್ಲಿ ಅಥವಾ ಭಯದಿಂದ ಮೌನವಾಗಿದ್ದಾರೆ. ಇದು ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ತೊಂದರೆ ಉಂಟುಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ನಾಡೋಜ ನಾಗೇಗೌಡ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಲಕ್ಷ್ಮೀಗೌಡ, ಇಸ್ರೋದಲ್ಲಿ ಅಸಿಸ್ಟೆಂಟ್ ಆಗಿ ಆಯ್ಕೆಯಾದ ಕೋಕಿಲಾ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಕರ್ತ ಸುಭಾಷ ಕಾರೇಬೈಲ, ಹವಲ್ದಾರ ಗಾಂವಕರ ಅಚವೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಗಣೇಶ ಶೆಟ್ಟಿ ಅಚವೆ ಉಪಸ್ಥಿತರಿದ್ದರು.ಆಪ್ತ ಸಮಾಲೋಚಕಿ ಮಮತಾ ರವಿ ನಾಯ್ಕ ಸ್ವಾಗತಿಸಿದರು. ಸಮಾಜ ಕಾರ್ಯಕರ್ತೆ ಪಲ್ಲವಿ ಪ್ರಾಣೇಶ ಶೆಟ್ಟಿ ನಿರೂಪಿಸಿದರು. ಸಮಾಜ ಕಾರ್ಯಕರ್ತೆರಾದ ನಾಗಶ್ರೀ ನಾಯ್ಕ, ಅನ್ನಪೂರ್ಣ ನಾಯ್ಕ ಉಪಸ್ಥಿತರಿಸದ್ದರು.
ಮಹಿಳಾ ಸಾಂತ್ವ ಕೇಂದ್ರದಿಂದ ಬಹಳಷ್ಟು ನೊಂದ ಮಹಿಳೆಯರ ಕಷ್ಟಕ್ಕೆ ಸಹಕಾರ ದೊರೆಯುತ್ತಿದೆ. ನಮ್ಮ ಜಾನಪದ ಕಲೆ ಇತ್ತೀಚಿನ ದಿನಗಳನ್ನು ನಶಿಸುತ್ತಿರುವುದು ಆತಂಕಕಾರಿಯಾಗಿದೆ. ಯುವ ಜನತೆಗೆ ಅರಿವಾಗಬೇಕಿದೆ ಎನ್ನುತ್ತಾರೆ ನಾಡೋಜ ನಾಗೇಗೌಡ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀಗೌಡ.