ಮಕ್ಕಳಿಗೆ ವಿನಯ, ವಿವೇಕತೆಯನ್ನು ಕಲಿಸಿ: ಶ್ರೀ ಶಂಭುನಾಥ ಸ್ವಾಮೀಜಿ

| Published : Jan 21 2024, 01:32 AM IST

ಮಕ್ಕಳಿಗೆ ವಿನಯ, ವಿವೇಕತೆಯನ್ನು ಕಲಿಸಿ: ಶ್ರೀ ಶಂಭುನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಗೌಡಳ್ಳಿ ಬಿಜಿಎಸ್ ಶಾಲೆಯ ಕಲೋತ್ಸವ ಕಾರ್ಯಕ್ರಮ ನಡೆಯಿತು. ಹಾಸನದ ಶ್ರೀ ಆದಿಚುಂಚನಗಿರಿ ಶಾಖಾಮಠದ ಮಠಾಧೀಶ ಶ್ರೀ ಶಂಭುನಾಥ ಸ್ವಾಮೀಜಿ ಮಕ್ಕಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಮಕ್ಕಳಲ್ಲಿ ಪೋಷಕರು ವಿನಯ ಮತ್ತು ವಿವೇಕತೆಯನ್ನು ಕಲಿಸಿ ಎಂದು ಹಾಸನದ ಶ್ರೀ ಆದಿಚುಂಚನಗಿರಿ ಶಾಖಾಮಠದ ಮಠಾಧೀಶ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.ಅವರು 2023-24ನೇ ಸಾಲಿನ ಗೌಡಳ್ಳಿ ಬಿಜಿಎಸ್ ಶಾಲೆಯ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಯುಗದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಬೇಕು. ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣವನ್ನು ಕಲಿಯಲು ಗೌರವಯುತವಾಗಿ ಇರಬೇಕು. ಪ್ರತಿಯೊಂದು ವಿದ್ಯಾಸಂಸ್ಥೆ ತನ್ನದೇ ಆದ ಕನಸನ್ನು ಕಂಡಿರುತ್ತದೆ. ಆ ಸಂಸ್ಥೆಯ ಕನಸು ನನಸು ಮಾಡುವ ಶಕ್ತಿ ವಿದ್ಯಾರ್ಥಿಗಳಲ್ಲಿದೆ. ಮಕ್ಕಳ ಮನಸ್ಸನ್ನು ಅರ್ಥೈಸಿ ಪೋಷಕರು ಅವರ ಕನಸಿಗೆ ತಕ್ಕಂತೆ ವೇದಿಕೆಯನ್ನು ನೀಡಬೇಕಾಗಿದೆ ಎಂದರು.ಮಡಿಕೇರಿ ಶಾಸಕ ಮಂತರ್ ಗೌಡ ಉದ್ಘಾಟಿಸಿ, ಪೋಷಕರು ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಕೆ ಮಾಡಬೇಡಿ. ಮಕ್ಕಳನ್ನು ಸೂಕ್ಷ್ಮವಾಗಿ ಗ್ರಹಿಸಿ ಶಿಕ್ಷಕರು ಪಾಠ ಮಾಡಬೇಕು. ವಿದ್ಯಾಭ್ಯಾಸವು ಮಕ್ಕಳ ಜೀವನಕ್ಕೆ ಶಾಶ್ವತವಾಗಿರುತ್ತದೆ. ಎಲ್ಲ ಮಕ್ಕಳಿಗೂ ವೇದಿಕೆ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಿ ಎಂದರು.ಮುಖ್ಯ ಭಾಷಣಕಾರರಾಗಿ ಹಾಸನದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಲ್ಲೇಶ್ ಗೌಡ ಮಾತನಾಡಿ, ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ತೋರಿಸುವಂತೆ ಪೋಷಕರು ಪ್ರೇರೇಪಿಸಬೇಕಾಗಿದೆ. ಓದಿಗೆ ಒತ್ತಡವನ್ನು ಮಾಡಬಾರದು 5 ಅಂಕಗಳ ಪಡೆಯುವ ಬದಲು ಮಕ್ಕಳಿಗೆ 5 ಗುಣಗಳನ್ನು ಪೋಷಕರು ಬೆಳೆಸಿ. ಮಕ್ಕಳ ವಯಸ್ಸಿಗೆ ತಕ್ಕಂತೆ ಪೋಷಕರು ಬೆಳೆಸಿ ಈ ಜೀವನವನ್ನು ಆನಂದಿಸಬೇಕು. ಪ್ರೌಢ ವ್ಯವಸ್ಥೆಯಲ್ಲಿ ಮಕ್ಕಳನ್ನು ಸ್ನೇಹಿತರಂತೆ ಕಂಡು ಮಕ್ಕಳನ್ನು ಜೋಪಾನ ಮಾಡಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಹಾಕಿ ಕ್ರೀಡಾಪಟು ಶಾಲೆಯ ಹಳೆ ವಿದ್ಯಾರ್ಥಿ ಶಶಿತ್ ಗೌಡ, ಗೌಡಳ್ಳಿ ಪ್ರೌಢಶಾಲೆಯ ರಾಷ್ಟ್ರಮಟ್ಟದ ಪುಟ್ಬಾಲ್ ಆಟಗಾರ ಎಚ್‌.ಎಸ್‌. ಸಂಜಯ್, ಮಹಮ್ಮದ್ ಸುಫೈಲ್, ಜಿ.ಆರ್. ಕೌಶಿಕ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಗೌಡಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಎಚ್.ಆರ್. ಸುರೇಶ್, ಕಳಲೆ ಕೃಷ್ಣೇಗೌಡ, ರೈತ ಸಂಘ ಉಫಾಧ್ಯಕ್ಷ ಜಿ.ಆರ್. ಹೂವಯ್ಯ, ಕೊಡಗು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಭರತ್ ಕುಮಾರ್, ಕೂಗೂರು ನಾಗರಾಜ್, ಹಿರಿಕರ ಮುತ್ತಣ್ಣ ಗೌಡಳ್ಳಿ ವೀರಭದ್ರಪ್ಪ ಉಪಸ್ಥಿತರಿದ್ದರು.