ಮಲ್ಲಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕೆ. ಎನ್. ಲೀಲಾವತಿ ಮತ್ತು ಬೇಲೂರಿನ ಪಿ.ಎಂ.ಶ್ರೀ ಶಾಲೆಯ ಶಿಕ್ಷಕಿ ಎಚ್.ಇ. ಶಕುಂತಲಾ ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಲಾನ್ ಟೆನ್ನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಅದ್ಭುತ ಯಶಸ್ಸು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಈ ಗೆಲುವಿನ ಫಲವಾಗಿ, ಡಿಸೆಂಬರ್ 16ರಿಂದ 22, 2025ರವರೆಗೆ ಗುಜರಾತ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕರ್ನಾಟಕದಿಂದ ಪ್ರತಿನಿಧಿಸುವ ಅವಕಾಶ ಇವರಿಗೆ ಲಭಿಸಿದೆ.
ಬೇಲೂರು: ಮಲ್ಲಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕೆ. ಎನ್. ಲೀಲಾವತಿ ಮತ್ತು ಬೇಲೂರಿನ ಪಿ.ಎಂ.ಶ್ರೀ ಶಾಲೆಯ ಶಿಕ್ಷಕಿ ಎಚ್.ಇ. ಶಕುಂತಲಾ ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಲಾನ್ ಟೆನ್ನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಅದ್ಭುತ ಯಶಸ್ಸು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಲಾನ್ ಟೆನ್ನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ಇಬ್ಬರು ಶಿಕ್ಷಕಿಯರುವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ. ರಾಜ್ಯ ಮಟ್ಟದ ಈ ಗೆಲುವಿನ ಫಲವಾಗಿ, ಡಿಸೆಂಬರ್ 16ರಿಂದ 22, 2025ರವರೆಗೆ ಗುಜರಾತ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕರ್ನಾಟಕದಿಂದ ಪ್ರತಿನಿಧಿಸುವ ಅವಕಾಶ ಇವರಿಗೆ ಲಭಿಸಿದೆ.ಈ ಮಹತ್ವದ ಸಾಧನೆಗೆ ಬೇಲೂರು ತಾಲೂಕಿನ ಶಿಕ್ಷಕರ ಬಳಗ, ಶಿಕ್ಷಣ ಕ್ಷೇತ್ರದ ಹಿತೈಷಿಗಳು ಹಾಗೂ ಕ್ರೀಡಾಭಿಮಾನಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದು, ರಾಷ್ಟ್ರಮಟ್ಟದಲ್ಲೂ ಇದೇ ರೀತಿ ಕೀರ್ತಿ ತಂದುಕೊಡಲಿ ಎಂಬ ಶುಭಾಶಯ ಕೋರಿದ್ದಾರೆ.